ಅಂತಾರಾಷ್ಟ್ರೀಯ ಸಂಬಂಧಗಳನ್ನು ಪ್ರಜಾಪ್ರಭುತ್ವವನ್ನಾಗಿ ಮಾಡಬೇಕು ಹಾಗೂ ಭದ್ರತಾ ಮಂಡಳಿಯ ಸಮಕಾಲೀನ ಪ್ರತಿನಿಧಿಗಳು ವಿಶ್ವಸಂಸ್ಥೆಯ ಮರುಸ್ಥಾಪನೆಯ ಪ್ರಗತಿಯನ್ನು ತ್ವರಿತಗೊಳಿಸಬೇಕು ಎಂದು ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಕರೆ ನೀಡಿದ್ದಾರೆ.
ಭಯೋತ್ಪಾದನೆಯ ಅಪಾಯದ ಕುರಿತು ಹೆಚ್ಚು ಒತ್ತು ನೀಡಿದ ಅವರು, ಭಾರತವು ಇಂತಹ ಪ್ರತಿರೋಧಕ ಶಕ್ತಿಗಳನ್ನು ಬುಡಸಮೇತ ಕಿತ್ತೊಗೆದಿದೆ ಎಂದರು.
ಅಂತಾರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ನಾವು ತಾಳ್ಮೆಯ ಸ್ವಭಾವ ಹೊಂದಿರದೆ, ಅಂತಹ ಉಪದ್ರವಕಾರಿಯನ್ನು ತೊಲಗಿಸಲು ಹೆಚ್ಚು ಒತ್ತು ನೀಡುತ್ತಾ ಬಂದಿದ್ದೇವೆ ಎಂದರು. ಸ್ವಿಸ್‌ನ ಮಿಚೆಲಿನ್ ಕಾಲ್ಮಿ ರೆ ಅವರೊಂದಿಗೆ ಭೋಜನಕೂಟ ಮುಕ್ತಾಯಗೊಳಿಸಿದ ನಂತರ, ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ವಿಶ್ವಸಂಸ್ಥೆಯ ಕಾರ್ಯಚೌಕಟ್ಟಿನಲ್ಲಿ ಜಾಗತಿಕವಾಗಿ ಪ್ರತಿಕ್ರಿಯೆ ನೀಡಿರುವ ಹವಾಮಾನ ಬದಲಾವಣೆಯಂತಹ ಪ್ರಮುಖ ವಿಷಯಗಳೊಂದಿಗೆ ಭಾರತವು, ಸ್ವಿಜರ್ಲೆಂಡ್‌ನೊಂದಿಗೆ ತನ್ನ ಕಾರ್ಯನಿರ್ವಹಿಸಲು ಎದುರುನೋಡುತ್ತಿದೆ. ಆದರೆ, ಅದು ತನ್ನ ಪ್ರತಿಕ್ರಿಯೆಯಲ್ಲಿ ಹಾಗೂ ಸಾಮರ್ಥ್ಯದಲ್ಲಿ ಬದಲಾವಣೆ ಮಾಡಲು ಇಚ್ಛಿಸುತ್ತದೆ ಎಂದು ಪಾಟೀಲ್ ವಿವರಿಸಿದರು.
ಶಾಂತಿ, ಅಂತಾರಾಷ್ಟ್ರೀಯ ಕಾನೂನಿಗೆ ಗೌರವ, ಬಡತನದ ವಿರುದ್ಧದ ಹೋರಾಟ ಹಾಗೂ ಮಹಿಳಾ ಸಬಲೀಕರಣಕ್ಕಾಗಿ ಹೋರಾಟಗಳನ್ನು ಉತ್ತೇಜನಗೊಳಿಸುವುದಕ್ಕೆ ಸ್ವಿಸ್ ವಿದೇಶಿ ನೀತಿಗಳು ತುಂಬಾ ಪ್ರಬಲ ಹಾಗೂ ಬಲಿಷ್ಠವಾಗಿವೆ ಎಂದು ಸ್ವಿಜರ್ಲೆಂಡ್ ವಿದೇಶಿ ನೀತಿಗಳ ಕುರಿತು ಅವರು ಹೇಳಿದರು.
|