ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮ ಶಾಂತ ಪರಿಸ್ಥಿತಿ
ಪಶ್ಚಿಮಬಂಗಾಲದ ನಂದಿಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ನಡೆದ ಹಿಂಸಾಚಾರದಿಂದ ಕಂಗೆಟ್ಟು ಹೋಗಿದ್ದು,ಇದೀಗ ಸಿಪಿಐ(ಎಂ) ಹಾಗೂ ಭೂ ಆಕ್ರಮಣ ವಿರೋಧಿ ಸಂಘಟನೆಯ ಕಾರ್ಯಕರ್ತರೊಂದಿಗೆ ನಡೆದ ಮಾತುಕತೆಯ ಪರಿಣಾಮ ಹೊತ್ತಿ ಉರಿಯುತ್ತಿದ್ದ ಗಲಭೆಗೆ ತಡೆ ಬಿದ್ದಂತಾಗಿದೆ.

ನಂದಿಗ್ರಾಮದಲ್ಲಿ ಮಾರ್ಚ್ 14ರಂದು ನಡೆದ ಪೊಲೀಸ್ ಗೋಲಿಬಾರ್‌ ಹಾಗೂ ಹಿಂಸಾಚಾರದಲ್ಲಿ ಸಾವನ್ನಪ್ಪಿರುವ 14ಮಂದಿಗೆ ಪರಿಹಾರ ಧನವನ್ನು ನೀಡುವುದಾಗಿ ಪಶ್ಚಿಮಬಂಗಾಲ ಸರಕಾರ ಘೋಷಿಸಿದೆ.

ಪರಿಹಾರ ನೀಡಲು ಸರಕಾರ ವಿಳಂಬ ನೀತಿಯನ್ನು ಅನುಸರಿಸುತ್ತಿರುವ ಬಗ್ಗೆ ಮತ್ತೆ ಗಲಭೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಸರಕಾರ ಪರಿಹಾರ ನೀಡುವ ನಿರ್ಧಾರ ಕೈಗೊಂಡಿದೆ.

ಪೊಲೀಸ್ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬದವರಿಗೆ ತಲಾ ಎರಡು ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಮುಖ್ಯ ಕಾರ್ಯದರ್ಶಿ ಎ.ಕೆ.ದೇಬ್ ತಿಳಿಸಿದರು.ಆದರೆ ಘಟನೆಯಲ್ಲಿ ಗಾಯಗೊಂಡಿರುವವರಿಗೆ ಪರಿಹಾರ ನೀಡಬೇಕೆ,ಬೇಡವೊ ಎನ್ನುವ ಕುರಿತು ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಹೇಳಿದರು.

ಸಿಪಿಐಎಂ ಮುಖಂಡರೊಂದಿಗೆ ನಡೆದ ಮಾತುಕತೆಯ ಬಳಿಕ ಭೂಮಿ ಉಚ್ಚೇದ್ ಪ್ರತಿರೋಧ್ ಸಮಿತಿಯ ಬೆಂಬಲಿಗರು ಹಿಂಸಾಚಾರವನ್ನು ಕೈಬಿಟ್ಟು,ಶಸ್ತ್ರಾಸ್ತ್ರ ಹೋರಾಟಕ್ಕೆ ತೆರೆ ಎಳೆಯುವುದಾಗಿ ಭರವಸೆ ನೀಡಿದರು.

ಮಾತುಕತೆಯಲ್ಲಿ ಎರಡೂ ಗುಂಪುಗಳು ಶಾಂತಿ ಒಪ್ಪಂದಕ್ಕೆ ಒಪ್ಪಿದ್ದು,ಬಳಿಕ ಯಾವುದೇ ಸಂಘಟನೆ ಶಸ್ತ್ರಾಸ್ತ್ರವನ್ನು ಕೈಗೆತ್ತಿಕೊಂಡರೂ ಆಡಳಿತ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದು ದೇಬ್ ತೀಕ್ಷ್ಣಣವಾಗಿ ಪ್ರತಿಕ್ರಿಯಿಸಿದರು.

ಮಾತುಕತೆಯಲ್ಲಿ ಮಾ.14ರಂದು ನಡೆದ ಹಿಂಸಾಚಾರ ಘಟನೆಯಲ್ಲಿ ಬಿಯುಪಿಸಿ ಕಾರ್ಯಕರ್ತರ ಮೇಲಿದ್ದ ದೂರುಗಳನ್ನು ಹಿಂದೆಗೆದುಕೊಳ್ಳಬೇಕೆಂಬ ಬೇಡಿಕೆಯನ್ನು ತಿರಸ್ಕರಿದ್ದು,ಈ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರು ಆ ಕುರಿತು ಸರಕಾರ ತನಿಖೆ ಕೈಗೊಳ್ಳಲಿದೆ ಎಂದು ದೇಬ್ ಹೇಳಿದರು.
ಮತ್ತಷ್ಟು
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್
ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ
ಭದ್ರತಾ ಮಂಡಳಿ ಮರುಪರಿಶೀಲನೆಯಾಗಲಿ: ಪ್ರತಿಭಾ
ಬುಷ್ ಮೂರ್ಖ ವ್ಯಕ್ತಿ -ಕಾರಟ್
ಮಾನವನಿರ್ಮಿತ ಅನಾಹುತ ನಿಯಂತ್ರಣಕ್ಕೆ ಸಹಕಾರ: ಪ್ರಧಾನಿ ಮನವಿ
ದೀಪಾವಳಿ: ಸ್ಮಶಾನದಲ್ಲಿ ಮಧ್ಯರಾತ್ರಿ ಉಪಾಹಾರ!