ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನರಕಾಸುರ ಪ್ರತಿಕೃತಿ ದಹನಕ್ಕೆ ಮಳೆರಾಯ ಅಡ್ಡಿ
ದಿವಾಳಿ ಸಂಭ್ರಮದ ನಡುವೆ ನರಕಾಸುರ ರಾಕ್ಷಸನ ಪ್ರತಿಕೃತಿ ದಹಿಸುವ ಸಂಪ್ರದಾಯಕ್ಕೆ ಗೋವಾದಲ್ಲಿ ಮಳೆರಾಯ ಅಡ್ಡಿವುಂಟುಮಾಡಿದ, ಸಾಮಾನ್ಯವಾಗಿ ಸೂರ್ಯನು ಬೆಳಗುವ ಹವಾಮಾನ ಕಂಡುಬರುವ ಈ ಸಂದರ್ಭದಲ್ಲಿ ದಿಢೀರ್ ಸುರಿದ ಮಳೆರಾಯ ತಂಪೆರೆದರೂ ಅನೇಕ ಪ್ರತಿಕೃತಿ ದಹಿಸುವ ಕಾರ್ಯಕ್ರಮಗಳು ರದ್ದಾದವು,

ಸುಮಾರು 40 ಕ್ಲಬ್‌ಗಳು ಮತ್ತು ಸಂಘಟನೆಗಳು ಈ ವರ್ಷದ ಸ್ಪರ್ಧೆಯಲ್ಲಿ ಪಾಲ್ಗೊಂಡು ಸುಮಾರು 40 ಅಡಿ ಎತ್ತರದ ನರಕಾಸುರನ ಬೃಹತ್ ಪ್ರತಿಕೃತಿಗಳನ್ನು ರಚಿಸಿದ್ದವು.
ಹಿಂದು ನಂಬಿಕೆಯ ಪ್ರಕಾರ, ಶಕ್ತಿಶಾಲಿ ರಾಕ್ಷಸರಾಜ ನರಕಾಸುರ, ದೇವತೆಗಳನ್ನು ಬೆದರಿಸಿ ಸುಮಾರು 16,000 ರಾಜಕುಮಾರಿಯರನ್ನು ಸೆರೆಹಿಡಿದು ವಿವಾಹವಾಗಲು ಉದ್ದೇಶಿಸಿದ್ದ.

ಭಗವಾನ್ ಕೃಷ್ಣನಿಗೆ ಈ ವಿಷಯ ಗೊತ್ತಾಗಿ ಸುದರ್ಶನ ಚಕ್ರದ ಮೂಲಕ ರಾಕ್ಷಸರಾಜನನ್ನು ಹತ್ಯೆ ಮಾಡಿ ಸೆರೆಯಾಳಾಗಿದ್ದ ರಾಜಕುಮಾರಿಯರನ್ನು ದಿವಾಳಿ ದಿನ ಸೆರೆಯಿಂದ ಬಿಡಿಸಿದ .

ಹುಲ್ಲು, ತ್ಯಾಜ್ಯಕಾಗದ ಮತ್ತು ಪಟಾಕಿಗಳಿಂದ ಕೂಡಿದ ನರಕಾಸುರ ಪ್ರತಿಕೃತಿಯನ್ನು ಎತ್ತಲು ಸುಮಾರು 25 ಜನರು ಬೇಕಾಗುತ್ತದೆ. ನರಕಾಸುರನ ಪ್ರತಿಕೃತಿಯನ್ನು ಬೀದಿಯಲ್ಲಿ ಮೆರವಣಿಗೆ ಮಾಡಿ ಬಳಿಕ ಸಾಂಕೇತಿಕವಾಗಿ ಸಾಯಿಸಿ ದಹಿಸಲಾಗುತ್ತದೆ.
ಮತ್ತಷ್ಟು
ನಂದಿಗ್ರಾಮ ಶಾಂತ ಪರಿಸ್ಥಿತಿ
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್
ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ
ಭದ್ರತಾ ಮಂಡಳಿ ಮರುಪರಿಶೀಲನೆಯಾಗಲಿ: ಪ್ರತಿಭಾ
ಬುಷ್ ಮೂರ್ಖ ವ್ಯಕ್ತಿ -ಕಾರಟ್
ಮಾನವನಿರ್ಮಿತ ಅನಾಹುತ ನಿಯಂತ್ರಣಕ್ಕೆ ಸಹಕಾರ: ಪ್ರಧಾನಿ ಮನವಿ