ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಉಗ್ರರು-ಸೈನಿಕರ ನಡುವೆ ಗುಂಡಿನ ಕಾಳಗ
ಉತ್ತರ ಕಾಶ್ಮೀರ ಜಿಲ್ಲೆ ಬಾರಾಮುಲ್ಲಾದ ಸೋಪೋರ್ ಹೊಟೆಲ್‌ನಲ್ಲಿ ಅಡಗಿದ್ದ ಇಬ್ಬರು ಫಿದಾಯೀನ್‌ಗಳಲ್ಲಿ (ಆತ್ಮಹತ್ಯೆ ದಳದ ಸದಸ್ಯರು) ಒಬ್ಬನನ್ನು ಕೊಲ್ಲಲಾಗಿದೆ, ಇನ್ನೊಬ್ಬ ಫಿದಾಯಿನ್‌ನನ್ನು ಕೊಲ್ಲಲು ನಾವು ಕಾರ್ಯಾಚರಣೆ ಮುಂದುವರಿಸಿದ್ದು, ಫಿದಾಯಿನ್ ಹೊಟೆಲ್ ಕಟ್ಟಡದಿಂದ ಇನ್ನೂ ಗುಂಡುಹಾರಿಸುತ್ತಿದ್ದಾನೆ ಎಂದು ಸಿಆರ್‌ಪಿಎಫ್ ವಕ್ತಾರ ತಿಳಿಸಿದರು.

ಶ್ರೀನಗರಕ್ಕೆ 55 ಕಿಮೀ ದೂರದ ಸೋಪೋರ್‌ನ ಹೊಟೆಲೊಂದಕ್ಕೆ ಉಗ್ರಗಾಮಿಗಳ ಗುಂಪು ಪೊಲೀಸ್ ಸಮವಸ್ತ್ರದಲ್ಲಿ ಪ್ರವೇಶಿಸಿದಾಗ ಗುರುವಾರ ಸಂಜೆಯಿಂದ ಗುಂಡಿನ ಕಾಳಗ ಆರಂಭವಾಯಿತು. ಉಗ್ರಗಾಮಿಗಳು ಹೊಟೆಲ್‌ನಿಂದ ಗುಂಡಿನ ದಾಳಿ ನಡೆಸುತ್ತಿದ್ದು, ಸಮೀಪದ ಶಿಬಿರಗಳಿಂದ ಪಡೆಗಳನ್ನು ತರಿಸಲಾಗಿದ್ದು, ಕಟ್ಟಡದ ಸುತ್ತ ಕಾವಲನ್ನು ಬಿಗಿಗೊಳಿಸಲಾಗಿದೆ ಎಂದು ಅವರು ಹೇಳಿದರು.

ನಿಖರ ಗುರಿಕಾರರು ಹೊಟೆಲ್ ಸುತ್ತ ಸನ್ನದ್ಧರಾಗಿದ್ದು. ಪಲಾಯನದ ಎಲ್ಲ ಮಾರ್ಗಗಳನ್ನು ಮುಚ್ಚಲಾಗಿದೆ. ನಾಗರಿಕ ಸಾವು, ನೋವುಗಳನ್ನು ತಡೆಯುವ ಸಲುವಾಗಿ ಭದ್ರತಾ ಸಿಬ್ಬಂದಿ ಸಂಯಮದಿಂದಿದ್ದು, ಹೊಟೆಲ್ ಕಟ್ಟಡದಲ್ಲಿರುವವರನ್ನು ರಕ್ಷಿಸುವ ತನಕ ಗುಂಡಿನ ಕಾಳಗ ನಡೆಸಲಿಲ್ಲ.
ಮತ್ತಷ್ಟು
ನರಕಾಸುರ ಪ್ರತಿಕೃತಿ ದಹನಕ್ಕೆ ಮಳೆರಾಯ ಅಡ್ಡಿ
ನಂದಿಗ್ರಾಮ ಶಾಂತ ಪರಿಸ್ಥಿತಿ
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್
ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ
ಭದ್ರತಾ ಮಂಡಳಿ ಮರುಪರಿಶೀಲನೆಯಾಗಲಿ: ಪ್ರತಿಭಾ
ಬುಷ್ ಮೂರ್ಖ ವ್ಯಕ್ತಿ -ಕಾರಟ್