ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
551 ಕೇಜಿ ಸಿಹಿ ಖರೀದಿಗೆ ಉಚಿತ ಬೈಕ್
551 ಕೇಜಿ ಸಿಹಿತಿನಿಸುಗಳನ್ನು ಖರೀದಿ ಮಾಡಿ, ನಿಮ್ಮ ಮನೆಗೊಂದು ಮೋಟರ್ ಬೈಕ್ ಉಚಿತವಾಗಿ ಕೊಂಡೊಯ್ಯಿರಿ. ದೀಪಾವಳಿಯಲ್ಲಿ ಸಿಹಿತಿನಿಸುಗಳ ಮಾರಾಟಕ್ಕೆ ಉತ್ತೇಜನ ನೀಡಲು ಸಿಹಿತಿಂಡಿ ಮಾರಾಟದ ಅಂಗಡಿಯೊಂದಕ್ಕೆ ಈ ಅದ್ಬುತ ಉಪಾಯ ಹೊಳೆಯಿತು.

ಸಿಹಿತಿಂಡಿಯ ನಿರ್ದಿಷ್ಟ ಪ್ರಮಾಣವನ್ನು ಖರೀದಿಸಿ ಮೋಟರ್ ಬೈಕ್‌ನಿಂದ ಹಿಡಿದು ಡಿವಿಡಿ ಪ್ಲೇಯರ್‌ಗಳು, ರೆಫ್ರಿಜಿರೇಟರ್‌ಗಳು ಮತ್ತು ಮೈಕ್ರೋವೇವ್ ಓವನ್‌ಗಳನ್ನು ಉಚಿತ ಉಡುಗೋರೆಯಾಗಿ ನೀಡುವುದಾಗಿ ಲಕ್ನೋದ ಅಲಿಗಂಜ್ ಪ್ರದೇಶದ ರಾಧೆ ಲಾಲ್ ಸ್ವೀಟ್ಸ್ ಪ್ರಕಟಣೆ ನೀಡಿತು.


ಅನೇಕ ಉಡುಗೊರೆ ಯೋಜನೆಗಳು ಅತ್ಯಧಿಕ ದರದ ವಸ್ತುಗಳ ಖರೀದಿಗೆ ಮಾತ್ರ ನೀಡಲಾಗುತ್ತದೆ. ಕಡಿಮೆ ಬೆಲೆಯ ಸಿಹಿತಿನಿಸುಗಳಿಂದ ಅದನ್ನು ಬದಲಾಯಿಸಿದರೆ ಹೇಗೆ ಎಂಬ ಕಲ್ಪನೆಯೊಂದಿಗೆ ನಾವು ಈ ಯೋಜನೆ ರೂಪಿಸಿದ್ದಾಗಿ ಅವರು ಹೇಳಿದರು. ಈ ಉಪಾಯ ಚೆನ್ನಾಗಿ ಕೆಲಸ ಮಾಡುತ್ತಿದ್ದು, ನಮ್ಮ ಅಂಗಡಿಯ ಮಾರಾಟ ಖಂಡಿತವಾಗಿ ಹೆಚ್ಚಾಗಿದೆ ಎಂದು ರಾಧೆ ಲಾಲ್ ಸ್ವೀಟ್ಸ್ ಮಾಲೀಕ ಮುಖೇಶ್ ಗುಪ್ತಾ ಹೇಳಿದ್ದಾರೆ.

ಬಹುತೇಕ ಸಿಹಿತಿನಿಸುಗಳಿಗೆ ವಿಶೇಷ ಉಡುಗೊರೆ ಯೋಜನೆ ಅನ್ವಯಿಸುತ್ತದೆ. 555 ಕಿಲೋ ಸಿಹಿ ಖರೀದಿಗೆ ಒಂದು ಮೋಟಾರ್ ಸೈಕಲ್, 151 ಸಿಹಿ ಖರೀದಿಸಿದರೆ ಮೈಕ್ರೋವೇವ್ ಓವನ್ ಮತ್ತು 51 ಕಿಲೊ ಸಿಹಿ ಖರೀದಿಗೆ ಡಿವಿಡಿ ಪ್ಲೇಯರ್ ಮತ್ತು 25 ಕೇಜಿ ಸಿಹಿ ಖರೀದಿಸಿದರೆ ದುಬಾರಿ ಮತ್ತು ಸ್ವಾದಿಷ್ಠ 3 ಕೇಜಿ ಗೋಡಂಬಿ ನಿರ್ಮಿತ ಕಾಜು-ಬರ್ಫಿಯ ರುಚಿಯನ್ನು ಸವಿಯಬಹುದು.
ಮತ್ತಷ್ಟು
ಉಗ್ರರು-ಸೈನಿಕರ ನಡುವೆ ಗುಂಡಿನ ಕಾಳಗ
ನರಕಾಸುರ ಪ್ರತಿಕೃತಿ ದಹನಕ್ಕೆ ಮಳೆರಾಯ ಅಡ್ಡಿ
ನಂದಿಗ್ರಾಮ ಶಾಂತ ಪರಿಸ್ಥಿತಿ
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್
ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ
ಭದ್ರತಾ ಮಂಡಳಿ ಮರುಪರಿಶೀಲನೆಯಾಗಲಿ: ಪ್ರತಿಭಾ