ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಕ್ಕಿಬಿದ್ದ ಕಳ್ಳ ಪ್ರೊಫೆಸರ್ ದಂಪತಿ
ಪ್ರೊಫೆಸರ್ ದಂಪತಿಯೊಬ್ಬರ ಕಳ್ಳತನ ಮಾಡುವ ಚಾಳಿಯನ್ನು ಸಿಸಿಟಿವಿ ವಿಡಿಯೊ ಚಿತ್ರ ಪತ್ತೆಹಚ್ಚಿದೆ. ಎಂಎಂಟಿಸಿ ಅಶೋಕ ಹೊಟೆಲ್‌ನಲ್ಲಿ ಅ.27ರಿಂದ ಅ.31ರವರೆಗೆ ಆಭರಣ ಪ್ರದರ್ಶನ ಏರ್ಪಡಿಸಿತ್ತು. ಈ ಪ್ರದರ್ಶನದಲ್ಲಿ ದಂಪತಿಯು ವಜ್ರ ಮತ್ತು ನೆಕ್‌ಲೇಸ್ ಕಳ್ಳತನ ಮಾಡುತ್ತಿರುವುದನ್ನು ವಿಡಿಯೋ ಚಿತ್ರ ಸ್ಪಷ್ಟವಾಗಿ ತೋರಿಸಿತು.

ಸುನಿಲ್ ಓಹ್ರಿ(52 ವರ್ಷಗಳು) ಮತ್ತು ಶೋಭಾನಾ(50) ಗ್ರೇಟರ್ ಕೈಲಾಸ್ ಕಾಲೋನಿ ನಿವಾಸಿಗಳು ಮತ್ತು ಪ್ರಮುಖ ಮ್ಯಾನೇಜ್‌ಮೆಂಟ್ ಶಾಲೆಯ ಉಪನ್ಯಾಸಕರು. ಅವರನ್ನು ವಜ್ರ ಕದ್ದ ಆರೋಪದ ಮೇಲೆ ಪಾರ್ಕ್ ರಾಯಲ್ ಹೊಟೆಲ್‌ನಿಂದ ಗುರುವಾರ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.

ಅ.31ರಂದು ನಡೆದ ಪ್ರದರ್ಶನದಲ್ಲಿ ವಜ್ರ ಮತ್ತು ನೆಕ್‌ಲೇಸ್ 7ನೇ ನಂಬರ್ ಕೌಂಟರ್‌ನಿಂದ ನಾಪತ್ತೆಯಾಗಿರುವುದನ್ನು ಪತ್ತೆಹಚ್ಚಿದ ಪ್ರದರ್ಶನಕಾರರು ಪೊಲೀಸರಿಗೆ ದೂರು ನೀಡಿದ್ದರು. ಪೊಲೀಸರು ದೂರು ದಾಖಲಿಸಿಕೊಂಡು ಪ್ರದರ್ಶನದ ವಿಡಿಯೋ ಚಿತ್ರಗಳನ್ನು ವೀಕ್ಷಿಸಿದರು. ನಾವು ವಿಡಿಯೋಗಳನ್ನು ವೀಕ್ಷಿಸುವಾಗ 7ನೇ ನಂಬರ್ ಕೌಂಟರಿನ ದಂಪತಿ ನಮ್ಮ ಗಮನ ಸೆಳೆದರು.

ಪ್ರದರ್ಶನದಲ್ಲಿದ್ದ ಆಭರಣವನ್ನು ಒಬ್ಬ ವ್ಯಕ್ತಿ ಕೇಳಿಪಡೆದು ಅದನ್ನು ಮಹಿಳೆಗೆ ಹಸ್ತಾಂತರಿಸಿದಾಗ ಮಹಿಳೆ ಅದನ್ನು ಪರ್ಸ್‌ನಲ್ಲಿ ಹಾಕಿದ್ದನ್ನು ವಿಡಿಯೋ ಚಿತ್ರ ಸ್ಪಷ್ಟವಾಗಿ ತೋರಿಸಿತೆಂದು ಪೊಲೀಸರು ಹೇಳಿದ್ದಾರೆ.

ನ.4ರಂದು ಪ್ರದರ್ಶನ ಮುಗಿಯುವುದರೊಳಗೆ ದಂಪತಿ ಪುನಃ ಬರಬಹುದೆಂದು ಭಾವಿಸಿಕೊಂಡು ದಂಪತಿಯ ಹಿಗ್ಗಿಸಿದ ವಿಡಿಯೊ ಚಿತ್ರಗಳನ್ನು ತನಿಖೆದಾರರು ಪಡೆದು ಭದ್ರತಾ ಸಿಬ್ಬಂದಿಯನ್ನು ಎಚ್ಚರಿಸಿದರು. ಆದರೆ ದಂಪತಿ ಅಲ್ಲಿಗೆ ಬರಲಿಲ್ಲ,

ಪಾರ್ಕ್ ರಾಯಲ್ ಹೊಟೆಲ್‌ನಲ್ಲಿ ಎಂಎಂಟಿಸಿ ಪ್ರದರ್ಶನ ಆರಂಭವಾದಾಗ ಪೊಲೀಸರು ಬಲೆ ಬೀಸಿ ದಂಪತಿಗಳ ಬರುವಿಕೆಗಾಗಿ ಕಾದಿದ್ದರು. ಓಹ್ರೀಸ್ ದಂಪತಿ ಹೊಟೆಲ್‌ಗೆ ಪ್ರವೇಶಿಸಿದ ಕೂಡಲೇ ಪೊಲೀಸರು ಬಂಧಿಸಿ ನಿವಾಸದಲ್ಲಿ ಶೋಧಿಸಿದಾಗ ಕಳ್ಳತನದ ಆಭರಣ ಪತ್ತೆಯಾಯಿತೆಂದು ತಿಳಿದುಬಂದಿದೆ.
ಮತ್ತಷ್ಟು
551 ಕೇಜಿ ಸಿಹಿ ಖರೀದಿಗೆ ಉಚಿತ ಬೈಕ್
ಉಗ್ರರು-ಸೈನಿಕರ ನಡುವೆ ಗುಂಡಿನ ಕಾಳಗ
ನರಕಾಸುರ ಪ್ರತಿಕೃತಿ ದಹನಕ್ಕೆ ಮಳೆರಾಯ ಅಡ್ಡಿ
ನಂದಿಗ್ರಾಮ ಶಾಂತ ಪರಿಸ್ಥಿತಿ
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್
ದೇಶಾದ್ಯಂತ ಸಡಗರ ಸಂಭ್ರಮದ ದೀಪಾವಳಿ ಆಚರಣೆ