ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮೆಕ್ಕಾ ಸ್ಫೋಟ:ಮಹಿಳೆ ಬಂಧನ
ಹೈದರಾಬಾದ್‌ನ ಮೆಕ್ಕಾ ಮಸೀದಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಮಹಿಳೆಯೊಬ್ಬಳ ಸಹಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಗರದಲ್ಲಿ ಮೇ18 ರಂದು ಸಂಭವಿಸಿದ ಸ್ಫೋಟದ ಇಬ್ಬರು ಸಂಚುಕೋರರಿಗೆ ಆಶ್ರಯ ನೀಡಿದ ಆರೋಪದಲ್ಲಿ ನಾಜಿಯಾ ಸುಲ್ತಾನಾ ಎಂಬ ಮಹಿಳೆಯನ್ನು ಬಂಧಿಸಲಾಗಿರುವುದನ್ನು ಚಾರ್ ಮಿನಾರ್ ವಿಭಾಗದ ಎಸಿಪಿ ಬಿ. ರೆದ್ದಣ್ಣ ದೃಢಪಡಿಸಿದ್ದಾರೆ.

ಸ್ಫೋಟದ ಶಂಕಿತ, ಬಾಂಗ್ಲಾದೇಶದ ಓರ್ವ ಪ್ರಜೆ ಹಾಗೂ ಹರ್ಕತುಲ್ ಜೆಹಾದಿ ಅಲ್ ಇಸ್ಲಾಮಿ(ಹುಜಿ)ಯ ಸದಸ್ಯ ಮಿರ್ಜಾಪುರ್ ರೆಹಮಾನ್ ಸುಲ್ತಾನಾಳ ಮನೆಯಲ್ಲಿ ಆಶ್ರಯ ಪಡೆದಿದ್ದ.

ನಗರದಲ್ಲಿ 1992ರಿಂದೀಚೆ ಅಕ್ರಮ ವಲಸಿಗನಾಗಿ ನೆಲೆಯೂರಿದ್ದ ಬಾಂಗ್ಲಾದೇಶದ ಪ್ರಜೆ ಸಿದ್ದಿಕುರ್ ರೆಹಮಾನ್ ಎಂಬಾತನನ್ನು ಸುಲ್ತಾನಾ ವಿವಾಹವಾಗಿದ್ದಳೆಂದು ಅವರು ಹೇಳಿದರು.

ಸುಲ್ತಾನಾಳನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದರು. ಮೆಕ್ಕಾ ಮಸೀದಿ ಸ್ಫೋಟದ ಬಳಿಕ ಮಿರ್ಜಾಪುರ್ ರೆಹಮಾನ್ ಮತ್ತು ಸುಲ್ತಾನಾಳ ಗಂಡ ನಾಪತ್ತೆಯಾಗಿದ್ದರು.

ಇದೇ ವೇಳೆ ಸುಲ್ತಾನಾ ನೀಡಿದ ಮಾಹಿತಿ ಮೇರೆಗೆ ಆಂಧ್ರ ಪೊಲೀಸರ ವಿಶೇಷ ತಂಡವೊಂದು ಮುಂಬೈಗೆ ತೆರಳಿ ಪರಾರಿಯಾಗಿರುವ ಇಬ್ಬರು ಶಂಕಿತರ ಪೈಕಿ ಒರ್ವನನ್ನು ಬಂಧಿಸಿದ್ದಾರೆ.
ಮತ್ತಷ್ಟು
ಸಿಕ್ಕಿಬಿದ್ದ ಕಳ್ಳ ಪ್ರೊಫೆಸರ್ ದಂಪತಿ
551 ಕೇಜಿ ಸಿಹಿ ಖರೀದಿಗೆ ಉಚಿತ ಬೈಕ್
ಉಗ್ರರು-ಸೈನಿಕರ ನಡುವೆ ಗುಂಡಿನ ಕಾಳಗ
ನರಕಾಸುರ ಪ್ರತಿಕೃತಿ ದಹನಕ್ಕೆ ಮಳೆರಾಯ ಅಡ್ಡಿ
ನಂದಿಗ್ರಾಮ ಶಾಂತ ಪರಿಸ್ಥಿತಿ
ಅಣು ಒಪ್ಪಂದದಿಂದ ಸ್ವತಂತ್ರ ವಿದೇಶಿ ನೀತಿ ನಾಶ: ಕರಾಟ್