ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಮರಾವತಿ ರೈತರ ಪಾಲಿಗೆ ನಿರಾಸೆಯ ದೀಪಾವಳಿ
ರಾಷ್ಟ್ರಾದ್ಯಂತ ದೀಪಾವಳಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸುತ್ತಿರುವ ನಡುವೆ, ಬೆಳಕಿನ ಹಬ್ಬ ಮಹಾರಾಷ್ಟ್ರದ ಅಮರಾವತಿಯ ಕೆಲವು ವರ್ಗಗಳ ಜನರಿಗೆ ಯಾವುದೇ ಆಶಾಭಾವನೆ ಮೂಡಿಸುವಲ್ಲಿ ವಿಫಲವಾಗಿದೆ. ಅಮರಾವತಿಯ ರೈತರು ಸಾಲದ ಬಲೆಯಲ್ಲಿ ಸಿಕ್ಕಿಬಿದ್ದಿದ್ದು, ದಿನನಿತ್ಯದ ಆಹಾರ ಗಳಿಸಲೂ ಅಶಕ್ತರಾಗಿರುವಾಗ ಹಬ್ಬಹರಿದಿನಗಳು ಅವರಿಗೆ ದೂರದ ಕನಸಾಗಿ ಉಳಿದಿದೆ.

ಸಾಲದ ಹೊರೆಗೆ ಸಿಕ್ಕಿಬಿದ್ದು ಹತ್ತಾರು ರೈತರು ಅಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೃದಯವಿದ್ರಾವಕ ಪ್ರಕರಣವೊಂದರಲ್ಲಿ ದೀಪಾವಳಿ ಇನ್ನು ಕೇವಲ ಮೂರು ದಿನಗಳು ಇರುವಂತೆಯೇ ಅಕೋಲಾ ಜಿಲ್ಲೆಯ ಕೊಲೇಡ್ ಗ್ರಾಮದ ರೈತ ಬಾಪುರಾವ್ ಮಾನ್ಕರ್ ನೇಣಿನ ಕುಣಿಕೆಗೆ ಕುತ್ತಿಗೆಯೊಡ್ಡಿ ಆತ್ಮಹತ್ಯೆ ಮಾಡಿಕೊಂಡ.

ಮಾನ್ಕರ್ ಪತ್ನಿ ಕಾಯಿಲೆಯಿಂದ ಹಾಸಿಗೆ ಹಿಡಿದಿದ್ದು, ಅವನ ಮೇಲೆ 15,000 ರೂ. ಸಾಲವಿತ್ತು. ಕಳೆದ 2-3 ವರ್ಷಗಳಿಂದ ಇಳುವರಿ ಸಾಕಷ್ಟು ಬರದೇ ಕುಟುಂಬದ ಗೋಳು ಹೇಳತೀರದಾಗಿತ್ತು ಎಂದು ಮನ್ಕರ್ ಪುತ್ರಿ ವಂದನಾ ಗಾವಂಡೆ ಹೇಳುತ್ತಾಳೆ.

ಇಂತದೇ ಹತ್ತಾರು ಪ್ರಕರಣಗಳಿದ್ದರೂ, ಯಾರೊಬ್ಬರೂ ಸಮಸ್ಯೆಯ ಆಳಕ್ಕೆ ತಲುಪಲು ಸಿದ್ಧರಿಲ್ಲ. ಪ್ರತಿದಿನ ಒಬ್ಬರಲ್ಲ ಒಬ್ಬ ರೈತರು ನೇಣಿನ ಕುಣಿಕೆಗೆ ಕುತ್ತಿಗೆ ಒಡ್ಡುತ್ತಿದ್ದಾರೆ. ಸಾಲದ ಹೊರೆ ನುಚ್ಚುನೂರು ಮಾಡಿದ್ದು, ಬದುಕುವುದೇ ದುಸ್ತರವಾಗಿದೆ ಎಂದು ಮಾನ್ಕರ್ ಸಂಬಂಧಿ ಹೇಳುತ್ತಾರೆ.
ಮತ್ತಷ್ಟು
ಮೇಧಾ ಪಾಟ್ಕರ್ ಉಪವಾಸ ನಿರಶನ
ನಂದಿಗ್ರಾಮ ಮರುವಶ ಅಕ್ರಮ:ರಾಜ್ಯಪಾಲರ ಟೀಕೆ
ಮೆಕ್ಕಾ ಸ್ಫೋಟ:ಮಹಿಳೆ ಬಂಧನ
ಸಿಕ್ಕಿಬಿದ್ದ ಕಳ್ಳ ಪ್ರೊಫೆಸರ್ ದಂಪತಿ
551 ಕೇಜಿ ಸಿಹಿ ಖರೀದಿಗೆ ಉಚಿತ ಬೈಕ್
ಉಗ್ರರು-ಸೈನಿಕರ ನಡುವೆ ಗುಂಡಿನ ಕಾಳಗ