ನೆರೆಯ ರಾಷ್ಟ್ರದಲ್ಲಿ ಶಾಂತಿ ಮತ್ತು ಸ್ಥಿರತೆ ಖಾತರಿಗೆ ಮಹತ್ವದ ಪಾತ್ರ ವಹಿಸುವ ಜವಾಬ್ದಾರಿ ಭಾರತಕ್ಕೆ ಬರಬಹುದೆಂದು ರಕ್ಷಣಾ ಸಚಿವ ಎ.ಕೆ. ಆಂಟೋನಿ ಎಚ್ಚರಿಸಿದ್ದಾರೆ. ಯಾವುದೇ ಸವಾಲನ್ನು ಎದುರಿಸಲು ರಾಷ್ಟ್ರದ ಭದ್ರತಾ ಪಡೆಯನ್ನು ಸಜ್ಜುಗೊಳಿಸಿರಬೇಕು ಎಂದು ರಾಷ್ಟ್ರದ ಉನ್ನತ ವ್ಯೂಹಾತ್ಮಕ ತಜ್ಞರು ಮತ್ತು ರಕ್ಷಣಾ ಯೋಜನೆಗಾರರನ್ನು ಉದ್ದೇಶಿಸಿ ಆಂಟೋನಿ ತಿಳಿಸಿದರು.
ನಮ್ಮ ಹೆಚ್ಚುತ್ತಿರುವ ಸ್ಥಾನಮಾನದ ನಡುವೆ, ಸ್ವಹಿತಾಸಕ್ತಿ ರಕ್ಷಣೆಗೆ ಬಲಿಷ್ಠ ರಕ್ಷಣಾ ಸಾಮರ್ಥ್ಯದ ಅಭಿವೃದ್ಧಿ ಇಂದಿನ ಅಗತ್ಯವಾಗಿದೆ ಎಂದು ಅವರು ನುಡಿದರು. ಪಾಕಿಸ್ತಾನವನ್ನು ನೇರವಾಗಿ ಹೆಸರಿಸದೇ ವಲಯದ ಎಲ್ಲ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಅವರು ನುಡಿದರು.
.ಭಯೋತ್ಪಾದನೆ ಬೆದರಿಕೆ ಪ್ರಮುಖ ಭದ್ರತಾ ಸವಾಲಾಗಿದ್ದು, ಪ್ರದೇಶದಲ್ಲಿ ಸಾಂಪ್ರದಾಯಿಕ ಯುದ್ಧ ಸ್ಫೋಟಿಸುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಿದರು.
|