ನಂದಿಗ್ರಾಮದಲ್ಲಿ ಹಿಂಸಾಚಾರವನ್ನು ಪ್ರತಿಭಟಿಸಿ ತೃಣಮೂಲ ಕಾಂಗ್ರೆಸ್ ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ಶನಿವಾರ ಲೋಕಸಭೆಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ
ಪತ್ರಿಕಾಗೋಷ್ಠಿಯಲ್ಲಿ ತಮ್ಮ ರಾಜೀನಾಮೆಯನ್ನು ಪ್ರಕಟಿಸಿದ ಅವರು, ಸಿಪಿಎಂನ ಏಕಪಕ್ಷೀಯ ಆಡಳಿತ ಮತ್ತು ಆಕ್ರಮಣಕಾರಿ ಧೋರಣೆ ಅಡಿಯಲ್ಲಿ ರಾಜಕೀಯ ಚಟುವಟಿಕೆಗಳನ್ನು ನಡೆಸಲು ಸಾಧ್ಯವಾಗುವುದಿಲ್ಲ ಎಂದು ಮಮತಾ ಹೇಳಿದ್ದಾರೆ. ರಾಜೀನಾಮೆ ಪತ್ರವನ್ನು ಯಾರಿಗೆ ಕಳಿಸಿದ್ದಾರೆಂಬುದನ್ನು ಅವರು ಬಾಯಿಬಿಡಲಿಲ್ಲ.
ರಾಜ್ಯದಲ್ಲಿ ಸೋಮವಾರದಿಂದ ಅನಿರ್ದಿಷ್ಟಾವಧಿಗೆ ಜನಜೀವನವನ್ನು ಸ್ಥಗಿತಗೊಳಿಸುವ ತಮ್ಮ ಪಕ್ಷದ ಯೋಜನೆಯನ್ನು ಅವರು ಬಿಚ್ಚಿಟ್ಟರು. ನಂದಿಗ್ರಾಮವನ್ನು ಪೂರ್ಣವಾಗಿ ವಶಕ್ಕೆ ತೆಗೆದುಕೊಳ್ಳಲು ಸಿಪಿಎಂ ಯೋಜಿತ ರೀತಿಯಲ್ಲಿ ಹಿಂಸಾಚಾರಕ್ಕಿಳಿದಿದೆ ಎಂದು ಅವರು ನುಡಿದರು.
|