ಪಶ್ಚಿಮ ಬಂಗಾಲದ ನಂದಿಗ್ರಾಮದಲ್ಲಿ ಮುಂದುವರಿದಿರುವ ಹಿಂಸಾಚಾರ ಹಾಗೂ ಅದನ್ನು ತೀವ್ರವಾಗಿ ವಿರೋಧಿಸಿರುವ ತೃಣಮೂಲ ಕಾಂಗ್ರೆಸ್‌ನ ಮಮತಾ ಬ್ಯಾನರ್ಜಿ ಅವರು ಶನಿವಾರ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಈ ಕುರಿತು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದಿರುವ ಪತ್ರದಲ್ಲಿ ಬ್ಯಾನರ್ಜಿ ರಾಜೀನಾಮೆಯನ್ನು ಪ್ರಸ್ತಾಪಿಸಿದ್ದು, ನಂದಿಗ್ರಾಮದಲ್ಲಿನ ಪರಿಸ್ಥಿತಿಯ ಕುರಿತು ಕೇಂದ್ರ ಮಧ್ಯಪ್ರವೇಶಿಸಬೇಕೆಂದು ಅವರು ಕೋರಿದ್ದಾರೆ.
ಅಲ್ಲದೇ ನಂದಿಗ್ರಾಮದಲ್ಲಿನ ಘಟನೆಗೆ ಸಂಬಂಧಿಸಿದಂತೆ ಆರ್‌ಎಪಿಯ ಶಾಸಕ ಶಿಟ್ಟಿ ಗೋಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ನಂದಿಗ್ರಾಮದಲ್ಲಿನ ಪರಿಸ್ಥಿತಿಯ ಹತೋಟಿಗಾಗಿ ಕೇಂದ್ರ ಸರಕಾರ ಇನ್ನೂ ಒಂದು ಸಾವಿರ ಸಿಆರ್‌ಪಿಎಫ್ ಜವಾನರನ್ನು ಕಳುಹಿಸಲು ನಿರ್ಧ ರಿಸಿರುವುದಾಗಿ ಹೇಳಿದೆ.
ರಾಜ್ಯದಲ್ಲಿನ ಪರಿಸ್ಥಿತಿಯನ್ನು ಗಮನಿಸಿದ ಬಳಿಕ,ಒಂದು ಬೆಟಾಲಿಯನ್(ಸುಮಾರು 1ಸಾವಿರ ಸೈನಿಕರು)ಸಿಆರ್‌ಪಿಎಫ್ ಪಡೆಯನ್ನು ಕಳುಹಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಕೇಂದ್ರ ಗೃಹಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
ನಂದಿಗ್ರಾಮದಲ್ಲಿನ ಪರಿಸ್ಥಿತಿಯ ಕುರಿತು ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ಸರಿಯಾದ ಸಂದರ್ಭ ,ಸರಿಯಾದ ಹೇಳಿಕೆಯನ್ನೇ ನೀಡಿದ್ದಾರೆ ಎಂದು ಮಮತಾ ಬ್ಯಾನರ್ಜಿ ಪ್ರತಿಕ್ರಿಯಿಸಿದ್ದಾರೆ.
|