ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಷ್ಯಾಗೆ ತೆರಳಿದ ಪ್ರಧಾನಿ
ಭಾರತ ಮತ್ತು ರಷ್ಯಾ ದೇಶಗಳ ನಡುವಣ ಉತ್ತಮ ಭಾಂದವ್ಯ ವೃದ್ಧಿಗಾಗಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಎರಡು ದಿನಗಳ ರಷ್ಯಾ ಪ್ರವಾಸಕ್ಕೆ ತೆರಳಿದ್ದಾರೆ.

ರಕ್ಷಣಾ ಹಾಗೂ ಅಣು ಭದ್ರತಾ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದವು ಭವಿಷ್ಯದಲ್ಲಿ ಹೊಸ ದಾರಿಗೆ ನಾಂದಿಯಾಗಲಿದೆ ಎಂದು ಭಾರತದ ವಿದೇಶಿ ಸಂಬಂಧಗಳಲ್ಲಿ ರಷ್ಯಾದ ವಿಶೇಷ ಹಾಗೂ ಒಕ್ಕೂಟದ ತಳಹದಿಯನ್ನು ಗಮನಿಸಿರುವ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

"ಕಳೆದ ಆರವತ್ತು ವರ್ಷಗಳಿಂದ ಭಾರತ ಹಾಗೂ ರಷ್ಯಾಗಳು ಸ್ನೇಹದಾರಿಕೆ ಹಾಗೂ ಪಾಲುದಾರಿಕೆಯಲ್ಲಿ ಒಪ್ಪಂದ ಮಾಡಿಕೊಂಡಿದ್ದು ತುಂಬಾ ಹತ್ತಿರವಾಗಿವೆ. ಭಾರತದ ವಿದೇಶಾಂಗ ಸಂಬಂಧಗಳಲ್ಲಿ ರಷ್ಯಾವು ವಿಶೇಷ ಹಾಗೂ ಒಕ್ಕೂಟದ ಸ್ಥಾನವನ್ನು ಹೊಂದಿದೆ. ಈಗಲೂ ಕೂಡ ನಾವು ಪರಸ್ಪರ ನಂಬಿಕೆ ಹಾಗೂ ತಿಳುವಳಿಕೆಯ ಆಧಾರದ ಮೇಲಿಂದ ನಮ್ಮ ಸಂಬಂಧಗಳನ್ನು ಮುಂದುವರೆಸಲಿದ್ದೇವೆ" ಎಂದು ಪ್ರಧಾನಮಂತ್ರಿ ಹೇಳಿದ್ದಾರೆ.

ಅವರು ಭಾನುವಾರದಿಂದ ಎರಡು ದಿನಗಳ ಭೇಟಿಗಾಗಿ ರಷ್ಯಾ ಪ್ರವಾಸ ಕೈಗೊಳ್ಳುವ ಪೂರ್ವದಲ್ಲಿ ಸರಕಾರಿ ಏಜೆನ್ಸಿ ಆರ್ಐಎ ನೋವೊಸ್ಟಿಯೊಂದಿಗೆ ನಡೆಸಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಭಾರತ ಹಾಗೂ ರಷ್ಯಾಗಳ ನಡುವಿನ ಸಂಬಂಧಗಳು ಭವಿಷ್ಯದಲ್ಲಿ ಉನ್ನತ ಬೆಳವಣಿಗೆಗೆ ಕಾರಣವಾಗುತ್ತವೆ. ಆರವತ್ತು ವರ್ಷಗಳ ಹಿಂದೆಯೇ ನಮ್ಮ ಸಂಬಂದವು ಭದ್ರ ಬುನಾದಿಯ ತಳಹದಿಯ ಮೇಲಿದ್ದು, ಇದು ಹೊಸ ಕ್ರಾಂತಿಗೆ ನಾಂದಿಯಾಗಲಿದೆ ಎಂದು ಉಭಯ ರಾಷ್ಟ್ರಗಳ ನಡುವೆ ಭವಿಷ್ಯದಲ್ಲಿ ಸಮರ್ಥವಾದ ಪಾಲುದಾರಿಕೆಯು ನಡೆಯುವ ಕುರಿತು ಆಶಾದಾಯಕವಾಗಿರುವ ಪ್ರಧಾನಮಂತ್ರಿಗಳು ವಿವರಿಸಿದರು.

ರಕ್ಷಣಾ ಸಹಕಾರದಲ್ಲಿ ಉಭಯ ರಾಷ್ಟ್ರಗಳ ನಡುವಿನ ಸಂಬಂಧಗಳಲ್ಲಿ ಭಾರತದ ಮಹತ್ವದ ಪಾತ್ರದ ಕುರಿತು ಪ್ರಧಾನಮಂತ್ರಿಗಳು ವಿವರಿಸಿ ತೊಡಗಿದರು.

ಪ್ರತಿವರ್ಷ ಎರಡೂ ರಾಷ್ಟ್ರಗಳ ರಕ್ಷಣಾ ಸಚಿವರುಗಳು ಅಧ್ಯಕ್ಷತೆಯಡಿಯಲ್ಲಿ ವಾರ್ಷಿಕವಾಗಿ ನಡೆಯುತ್ತಿರುವ, ಸೇನಾ ತಾಂತ್ರಿಕ ಸಹಕಾರಕ್ಕಾಗಿ ಸ್ಥಾಪಿಸಲಾಗಿರುವ ಅಂತಾರಾಷ್ಟ್ರೀಯ ಸರಕಾರಿ ಆಯೋಗದಲ್ಲಿ ರಷ್ಯಾ ಮಾತ್ರ ತಮ್ಮ ಪಾಲುದಾರಿಕೆ ರಾಷ್ಟ್ರವಾಗಿದೆ ಎಂದು ಸಿಂಗ್ ಹೇಳಿದರು.
ಮತ್ತಷ್ಟು
ಬ್ಯಾನರ್ಜಿ ರಾಜೀನಾಮೆ: ನಂದಿಗ್ರಾಮ ಉದ್ರಿಕ್ತ
ಬಿಜೆಪಿ ಪದಗ್ರಹಣಕ್ಕೆ ಸಾಕ್ಷಿಯಾಗಲು ಹಿರಿಯ ನಾಯಕರ ದಂಡು
ಲೋಕಸಭೆ ಸ್ಥಾನಕ್ಕೆ ಮಮತಾ ರಾಜೀನಾಮೆ
ನೆರೆಯ ದೇಶದ ಬಗ್ಗೆ ಸೂಕ್ಷ್ಮ ಗಮನ:ಆಂಟೋನಿ
ಅಮರಾವತಿ ರೈತರ ಪಾಲಿಗೆ ನಿರಾಸೆಯ ದೀಪಾವಳಿ
ಮೇಧಾ ಪಾಟ್ಕರ್ ಉಪವಾಸ ನಿರಶನ