ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ
ನಂದಿಗ್ರಾಮದಲ್ಲಿ ಸಿಪಿಎಂ ಕಾರ್ಯಕರ್ತರ ಹಿಂಸಾಚಾರ ವಿರೋಧಿಸಿ ಸೋಮವಾರ ಪ್ರತಿಪಕ್ಷ ಬಂದ್‌ಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೋಲ್ಕತಾ ಮತ್ತು ಪಶ್ಚಿಮಬಂಗಾಳದ ಇತರೆ ಜಿಲ್ಲೆಗಳಲ್ಲಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿತು.ಕಾಂಗ್ರೆಸ್, ಎಸ್‌ಯುಸಿಐ ಮತ್ತು ಬಿಜೆಪಿ 48 ಗಂಟೆಗಳ ರಾಜ್ಯವ್ಯಾಪಿ ಬಂದ್‌ಗೆ ಕರೆ ನೀಡಿದೆ.

ತೃಣಮೂಲ ಕಾಂಗ್ರೆಸ್ ನಂದಿಗ್ರಾಮದಲ್ಲಿ ಮುಂದುವರಿದ ಹಿಂಸಾಚಾರ ಮತ್ತು ಹತ್ಯೆಗಳ ವಿರುದ್ಧ ಅನಿರ್ದಿಷ್ಟಾವಧಿ ಜನಜೀವನ ಅಸ್ತವ್ಯಸ್ತಗೊಳಿಸುವ ಬೆದರಿಕೆ ಹಾಕಿದೆ. ಬಂದ್ ಬೆಂಬಲಿಗರು ವಾಹನ ಸಂಚಾರಕ್ಕೆ ತಡೆಯೊಡ್ಡಿದರು ಮತ್ತು ರೈಲು ಹಳಿಗಳ ಮೇಲೆ ಕುಳಿತು ರೈಲು ಸಂಚಾರಕ್ಕೂ ತಡೆಯೊಡ್ಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ಕೋಲ್ಕತಾದಲ್ಲಿ ರಾಜ್ಯಸ್ವಾಮ್ಯದ ಬಸ್‌ವೊಂದಕ್ಕೆ ಅಗ್ನಿಸ್ಪರ್ಶ ಮಾಡಲಾಗಿದ್ದು, ದಾಳಿಕೋರರನ್ನು ಪತ್ತೆಹಚ್ಚಲು ಪೊಲೀಸರು ವಿಫಲರಾಗಿದ್ದಾರೆ. ನಗರದ ಬೀದಿಗಳಲ್ಲಿ ರಸ್ತೆಸಂಚಾರ ನೀರಸವಾಗಿತ್ತು ಮತ್ತು ಅನೇಕ ಅಂಗಡಿಗಳು ಮತ್ತು ಮಾರುಕಟ್ಟೆಗಳನ್ನು ಮುಚ್ಚಲಾಗಿತ್ತು. ಆದಾಗ್ಯೂ, ಎನ್ಎಸ್‌ಸಿ ಬೋಸ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ವಿಮಾನಸಂಚಾರ ಎಂದಿನಂತಿತ್ತು ಎಂದು ಮೂಲಗಳು ಹೇಳಿವೆ.

ರಾಜ್ಯದಾದ್ಯಂತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಮತ್ತು ಜಿಲ್ಲಾಧಿಕಾರಿಗಳಿಗೆ ಸಹಜ ಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ.
ಮತ್ತಷ್ಟು
7500 ರೈಲು ನಿಲ್ದಾಣಗಳ ನಿರ್ಮಾಣ: ಲಾಲು
ರಷ್ಯಾಗೆ ತೆರಳಿದ ಪ್ರಧಾನಿ
ಬ್ಯಾನರ್ಜಿ ರಾಜೀನಾಮೆ: ನಂದಿಗ್ರಾಮ ಉದ್ರಿಕ್ತ
ಬಿಜೆಪಿ ಪದಗ್ರಹಣಕ್ಕೆ ಸಾಕ್ಷಿಯಾಗಲು ಹಿರಿಯ ನಾಯಕರ ದಂಡು
ಲೋಕಸಭೆ ಸ್ಥಾನಕ್ಕೆ ಮಮತಾ ರಾಜೀನಾಮೆ
ನೆರೆಯ ದೇಶದ ಬಗ್ಗೆ ಸೂಕ್ಷ್ಮ ಗಮನ:ಆಂಟೋನಿ