ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪಶ್ಚಿಮಬಂಗಾಳ-ಎಡರಂಗದಲ್ಲಿ ಒಡಕು
ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ಉದ್ವಿಗ್ನ ಸ್ಥಿತಿ ಮುಂದುವರಿದಿದ್ದು, ಸಿಪಿಎಂ ಕಾರ್ಯಕರ್ತರು ಬಹುತೇಕ ಪ್ರದೇಶಗಳನ್ನು ಸುಪರ್ದಿಗೆ ತೆಗೆದುಕೊಂಡಿದ್ದಾರೆ. ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಜಿ ಪಕ್ಷಕ್ಕೆ ಸ್ವಂತ ಮಿತ್ರಪಕ್ಷಗಳಿಂದಲೇ ಒತ್ತಡ ಬರುತ್ತಿರುವುದರಿಂದ ಅದಕ್ಕೆ ತೊಂದರೆಗಳು ಇನ್ನೂ ದೂರವಾಗಿಲ್ಲ.

ಈ ವಿದ್ಯಮಾನಗಳ ಹಿಂದೆಯೇ ಕ್ಷಿಪ್ರಗತಿಯ ರಾಜಕೀಯ ಬೆಳವಣಿಗೆಗಳು ಸಂಭವಿಸುತ್ತಿದ್ದು, 30 ವರ್ಷಗಳಲ್ಲಿ ಮೊದಲ ಬಾರಿಗೆ ಎಡರಂಗದಲ್ಲಿ ಗಂಭೀರವಾದ ಒಡಕು ಮೂಡುತ್ತಿದೆ. ನಂದಿಗ್ರಾಮವನ್ನು ಹತ್ಯೆಯ ತಾಣವನ್ನಾಗಿ ಮಾಡಿದ ಸಿಪಿಎಂ ಪಕ್ಷವನ್ನು ಎಲ್ಲ ಸಣ್ಣ ಮಿತ್ರಪಕ್ಷಗಳು ಟೀಕಿಸಿದ್ದು, ಪ್ರಮುಖ ಸಚಿವರು ರಾಜೀನಾಮೆ ನೀಡುವ ಪ್ರಸ್ತಾಪ ಮಾಡಿದ್ದಾರೆ.

ಸಿಪಿಎಂ ನಂದಿಗ್ರಾಮವನ್ನು ಕೈವಶ ಮಾಡಿಕೊಳ್ಳಲು ರಕ್ತಪಾತವನ್ನು ಬಯಸುತ್ತಿದೆ ಎಂದು ರಾಜ್ಯ ಪಿಡಬ್ಲ್ಯುಡಿ ಸಚಿವ ಮತ್ತು ಹಿರಿಯ ಆರ್‌ಎಸ್‌ಪಿ ನಾಯಕ ಕ್ಷಿತಿ ಗೋಸ್ವಾಮಿ ಆಪಾದಿಸಿದರು. ನಂದಿಗ್ರಾಮದ ಜನರನ್ನು ರಕ್ಷಿಸುವುದು ರಾಜ್ಯ ಸರ್ಕಾರದ ಏಕೈಕ ಜವಾಬ್ದಾರಿ ಎಂದು ಅವರು ನುಡಿದರು.

ರಾಜ್ಯದ ಸಾಮಾಜಿಕ-ಬೌದ್ಧಿಕ ವಲಯದಲ್ಲಿ ಒಡಕು ನಿಚ್ಚಳವಾಗಿ ಕಂಡುಬಂದಿದೆ. ಬೆಂಗಾಳದ ಬುದ್ಧಿಜೀವಿ ವರ್ಗ ಬೀದಿಗಿಳಿದಿದ್ದು, ಭಟ್ಟಾಚಾರ್ಜಿ ಅವರನ್ನು ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೆ ಹೋಲಿಸಿದ್ದಾರೆ.

ಜನರು ಶಾಂತಿಯುತ ಪ್ರತಿಭಟನೆ ನಡೆಸುವಾಗ ಸಿಪಿಎಂ ಕಾರ್ಯಕರ್ತರು ಗುಂಡುಹಾರಿಸಿದರು. 11 ವರ್ಷ ವಯಸ್ಸಿನ ಬಾಲಕನ ತಲೆಗೆ ಗುಂಡು ತಾಕಿದೆ. ಅವನೀಗ ಸುಧಾರಿಸಿಕೊಂಡರೂ ಮನೆ ಸುಟ್ಟು ಬೂದಿಯಾಗಿದ್ದು ಮನೆಗೆ ಹಿಂತಿರುಗುವಂತಿಲ್ಲ ಎಂದು ಖ್ಯಾತ ನಿರ್ದೇಶಕಿ ಮತ್ತು ನಟಿ ಅಪರ್ಣ ಸೇನ್ ಹೇಳಿದರು.
ಮತ್ತಷ್ಟು
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ
7500 ರೈಲು ನಿಲ್ದಾಣಗಳ ನಿರ್ಮಾಣ: ಲಾಲು
ರಷ್ಯಾಗೆ ತೆರಳಿದ ಪ್ರಧಾನಿ
ಬ್ಯಾನರ್ಜಿ ರಾಜೀನಾಮೆ: ನಂದಿಗ್ರಾಮ ಉದ್ರಿಕ್ತ
ಬಿಜೆಪಿ ಪದಗ್ರಹಣಕ್ಕೆ ಸಾಕ್ಷಿಯಾಗಲು ಹಿರಿಯ ನಾಯಕರ ದಂಡು
ಲೋಕಸಭೆ ಸ್ಥಾನಕ್ಕೆ ಮಮತಾ ರಾಜೀನಾಮೆ