ಆಂಧ್ರಪ್ರದೇಶ, ಜಮ್ಮು ಕಾಶ್ಮೀರ ಮತ್ತು ರಾಜಸ್ತಾನ ಹೈಕೋರ್ಟ್‌ಗಳಿಗೆ ಸೇರಿದ ನ್ಯಾಯಾಧೀಶರು ಸೋಮವಾರ ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರು.
ಆಂಧ್ರಪ್ರದೇಶ ಹೈಕೋರ್ಟ್‌ನ ನ್ಯಾಯಾಧೀಶ ಜಿ.ಎಸ್. ಸಿಂಘ್ವಿ, ಜಮ್ಮು ಕಾಶ್ಮೀರ ಹೈಕೋರ್ಟ್‌ನ ನ್ಯಾಯಾಧೀಶ ಅಫ್ತಾಬ್ ಅಲಂ ಮತ್ತು ರಾಜಸ್ತಾನ ಹೈಕೋರ್ಟ್‌ನ ಪಾಂಚಾಲ್ ಪ್ರಮಾಣವಚನ ಸ್ವೀಕರಿಸಿದವರು.
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಸುಪ್ರೀಂಕೋರ್ಟ್‌ನಲ್ಲಿ ಪ್ರಮಾಣವಚನ ಬೋಧಿಸಿದರು. ಮೂವರು ಹೊಸ ನ್ಯಾಯಾಧೀಶರ ನೇಮಕದೊಂದಿಗೆ ಸುಪ್ರೀಂಕೋರ್ಟ್ ನ್ಯಾಯಾಧೀಶರ ಬಲ 25ಕ್ಕೇರಿದೆ. ಇಲ್ಲಿಯವರೆಗೆ ಮಹಿಳಾ ನ್ಯಾಯಾಧೀಶರಾರೂ ಸುಪ್ರೀಂಕೋರ್ಟ್‌ನಲ್ಲಿಲ್ಲ. ನ.2006ರಲ್ಲಿ ಏಕೈಕ ಮಹಿಳಾ ನ್ಯಾಯಾಧೀಶರಾದ ರುಮಾಪಾಲ್ ನಿವೃತ್ತರಾಗಿದ್ದರು.
|