ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ತೃಣಮೂಲಕ್ಕೆ ಮಾವೋವಾದಿಗಳ ನೆರವು:ಕಾರಟ್
PTI
ಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಮೂಲಕ ನಂದಿಗ್ರಾಮದಲ್ಲಿ ಶಾಂತಿಯನ್ನು ಕದಡಲಾಗುತ್ತಿದೆ ಎಂದು ಮಮತಾ ಬ್ಯಾನರ್ಜಿ ಮತ್ತು ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಸಿಪಿಎಂ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತರಾಟೆಗೆ ತೆಗೆದುಕೊಂಡಿದ್ದಾರೆ. ನಂದಿಗ್ರಾಮದಲ್ಲಿ ಅಸಹಜ ಪರಿಸ್ಥಿತಿ ನೆಲೆಸಿದ್ದು, ಜನರು ಮಾವೋವಾದಿ ನಕ್ಸಲೀಯರ ವಿರುದ್ಧ ತಿರುಗಿಬಿದ್ದಿದ್ದಾರೆ ಎಂದು ಹೇಳಿದರು.

ಪರಿಸ್ಥಿತಿಯ ಬಗ್ಗೆ ವಿವರಿಸಿದ ಅವರು, ನಂದಿಗ್ರಾಮದಲ್ಲಿ ಉದ್ದೇಶಿತ ರಾಸಾಯನಿಕ ಕಾರ್ಖಾನೆ ನಿರ್ಮಾಣವನ್ನು 11 ತಿಂಗಳ ಕೆಳಗೆ ಬೇರೆಕಡೆಗೆ ಸ್ಥಳಾಂತರಿಸಿರುವುದರಿಂದ ಅದರ ಬಗ್ಗೆ ಸಂಘರ್ಷದ ಪ್ರಶ್ನೆಯೇ ಇಲ್ಲ ಎಂದು ಅವರು ನುಡಿದರು.

ಫೆಬ್ರವರಿಯಿಂದೀಚೆಗೆ ನಂದಿಗ್ರಾಮದಲ್ಲಿ ಸರ್ಕಾರಿ ಯಂತ್ರ ಸಂಪೂರ್ಣ ಸ್ಥಗಿತಗೊಂಡಿದೆ. ಪಂಚಾಯತ್ ಸಂಸ್ಥೆಗಳು ಮತ್ತು ಪೊಲೀಸರ ಕಾರ್ಯನಿರ್ವಹಣೆ ಸಾಧ್ಯವಾಗುತ್ತಿಲ್ಲ ಮತ್ತು ಸಾವಿರಾರು ಜನರನ್ನು ತೆರವು ಮಾಡಲಾಗುತ್ತಿದೆ ಎಂದು ಅವರು ನುಡಿದರು. ಕೆಲವು ಶಕ್ತಿಗಳು ಸಿಪಿಎಂ ಮತ್ತಿತರ ಎಡಪಕ್ಷಗಳನ್ನು ಮೂಲೋತ್ಪಾಟನೆ ಮಾಡುವ ಗುರಿ ಹೊಂದಿವೆ ಎಂದು ಅವರು ಹೇಳಿದರು.

ಮಮತಾ ಬ್ಯಾನರ್ಜಿ ವಿರುದ್ಧ ಟೀಕಾಪ್ರಹಾರ ಹರಿಸಿದ ಅವರು, ಪ್ರಜಾತಂತ್ರ ಮಾರ್ಗದಲ್ಲಿ ಚುನಾವಣೆ ಮೂಲಕ ಜನರ ವಿಶ್ವಾಸವನ್ನು ಗೆಲ್ಲಲು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ. ಆದ್ದರಿಂದ ತಮ್ಮ ಪ್ರಭಾವದ ವ್ಯಾಪ್ತಿಯನ್ನು ಹೆಚ್ಚಿಸಲು ತೃಣಮೂಲ ಕಾಂಗ್ರೆಸ್ ಮಾವೋವಾದಿ ನಕ್ಸಲೀಯರ ನೆರವು ಪಡೆದಿದ್ದಾರೆ ಮತ್ತು ತರಬೇತಿ ಸಹ ನೀಡುತ್ತಿದ್ದು ಶಸ್ತಾಸ್ತ್ರಗಳನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಕಾರಟ್ ಖಚಿತವಾಗಿ ನುಡಿದರು.

ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ. ನಾರಾಯಣ್ ಇಂತಹ ಚಟುವಟಿಕೆಗಳನ್ನು ದೃಢಪಡಿಸಿರುವುದು ತಮ್ಮ ಹೇಳಿಕೆಗೆ ಸಮರ್ಥನೆಯಾಗಿದೆ ಎಂದು ಅವರು ನುಡಿದರು.
ಮತ್ತಷ್ಟು
ಸುಪ್ರೀಂಕೋರ್ಟ್‌ಗೆ 3 ಹೊಸ ನ್ಯಾಯಾಧೀಶರು
ಪಶ್ಚಿಮಬಂಗಾಳ-ಎಡರಂಗದಲ್ಲಿ ಒಡಕು
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ
7500 ರೈಲು ನಿಲ್ದಾಣಗಳ ನಿರ್ಮಾಣ: ಲಾಲು
ರಷ್ಯಾಗೆ ತೆರಳಿದ ಪ್ರಧಾನಿ
ಬ್ಯಾನರ್ಜಿ ರಾಜೀನಾಮೆ: ನಂದಿಗ್ರಾಮ ಉದ್ರಿಕ್ತ