ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಿಜೆಪಿ ಸಂಸದ ಖಂಡೇಲ್‌ವಾಲ್ ನಿಧನ
ಲೋಕಸಭೆಯಲ್ಲಿ ಬೆಟುಲ್ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಬಿಜೆಪಿಯ ಸಂಸತ್ ಸದಸ್ಯ ವಿಜಯ್ ಖಂಡೇಲ್‌ವಾಲ್ ನಾಗಪುರದ ಆಸ್ಪತ್ರೆಯೊಂದರಲ್ಲಿ ಮಧುಮೇಹದಿಂದ ಉಂಟಾದ ಮೂತ್ರಪಿಂಡದ ವೈಫಲ್ಯದಿಂದ ಸತ್ತಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಖಂಡೇಲ್‌ವಾಲ್‌ ಅವರಿಗೆ 72 ವರ್ಷ ವಯಸ್ಸಾಗಿತ್ತು. ಅವರಿಗೆ ಪತ್ನಿ ಮತ್ತು ಇಬ್ಬರು ಪುತ್ರರು ಇದ್ದಾರೆ. ಅವರ ಪಾರ್ಥಿವ ಶರೀರವನ್ನು ಇಲ್ಲಿನ ಜಿಲ್ಲಾ ಕೇಂದ್ರಕ್ಕೆ ತರಲಾಗುವುದು ಮತ್ತು ಅಂತ್ಯಕ್ರಿಯೆಯು ಬುಧವಾರ ನಡೆಯಲಿದೆ.

ಬಿಜೆಪಿಯ ಕೋಶಾಧಿಕಾರಿ ಕೂಡ ಆಗಿದ್ದ ಖಂಡೇಲ್‌ವಾಲ್ ಈ ಕ್ಷೇತ್ರವನ್ನು ನಾಲ್ಕನೇ ಬಾರಿಗೆ ಪ್ರತಿನಿಧಿಸಿದ್ದರು. ಖಂಡೇಲ್‌ವಾಲ್ ಸಾವಿಗೆ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಮತ್ತಿತರ ನಾಯಕರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ತೃಣಮೂಲಕ್ಕೆ ಮಾವೋವಾದಿಗಳ ನೆರವು:ಕಾರಟ್
ಸುಪ್ರೀಂಕೋರ್ಟ್‌ಗೆ 3 ಹೊಸ ನ್ಯಾಯಾಧೀಶರು
ಪಶ್ಚಿಮಬಂಗಾಳ-ಎಡರಂಗದಲ್ಲಿ ಒಡಕು
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ
7500 ರೈಲು ನಿಲ್ದಾಣಗಳ ನಿರ್ಮಾಣ: ಲಾಲು
ರಷ್ಯಾಗೆ ತೆರಳಿದ ಪ್ರಧಾನಿ