ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮದ ಘಟನೆ ಆಘಾತಕಾರಿ:ಆಡ್ವಾಣಿ
PTI
ನಂದಿಗ್ರಾಮದಲ್ಲಿ ಸಂಭವಿಸುತ್ತಿರುವ ಹಿಂಸಾಚಾರದ ಘಟನೆಗಳು ಆಘಾತಕಾರಿಯಾಗಿವೆ ಎಂದು ಲೋಕಸಭೆಯ ಪ್ರತಿಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಮಂಗಳವಾರ ಪ್ರತಿಕ್ರಿಯಿಸಿದ್ದು, ಸಂಸತ್ತಿನ ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ನಂದಿಗ್ರಾಮದ ಹಿಂಸಾಚಾರದ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಪರಮಾಣು ಒಪ್ಪಂದವನ್ನು ಕುರಿತ ಮಾತುಕತೆ ಮಹತ್ವದ್ದಾಗಿದ್ದು, ನಂದಿಗ್ರಾಮ ಮತ್ತು ಅಲ್ಲಿನ ರೈತರ ಸಂಕಷ್ಟದ ಬಗ್ಗೆ ಚರ್ಚೆ ಕೂಡ ಅಷ್ಟೇ ಮಹತ್ವ ಪಡೆದಿದೆ ಎಂದು ನಂದಿಗ್ರಾಮಕ್ಕೆ ತೆರಳುವ ಮುನ್ನ ಎನ್‌ಎಸ್‌ಸಿ ಬೋಸ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಅವರು ವರದಿಗಾರರಿಗೆ ತಿಳಿಸಿದರು. ನಂದಿಗ್ರಾಮದಲ್ಲಿ ಸಂಭವಿಸಿದ ಘಟನೆ ವರ್ಣಿಸಲಾಗದಷ್ಟು ಆಘಾತಕಾರಿಯಾಗಿದೆ ಎಂದು ಅವರು ನುಡಿದರು.

ಅಂತಾರಾಷ್ಟ್ರೀಯ ವಿಷಯಗಳು ಮತ್ತು ಪರಮಾಣು ಒಪ್ಪಂದದ ಬಗ್ಗೆ ಸಿಪಿಎಂ ಮನಸ್ಸು ಆವರಿಸಿರಬಹುದು. ಆದರೆ ರಾಷ್ಟ್ರಕ್ಕೆ ಸಂಬಂಧಪಟ್ಟಂತೆ ಬುದ್ಧದೇವ್ ನೇತೃತ್ವದ ಸಿಪಿಎಂ ಸರ್ಕಾರ ಹೇಗೆ ನಂದಿಗ್ರಾಮದ ರೈತರನ್ನು ಮತ್ತು ಕೇಂದ್ರ ಸರ್ಕಾರವನ್ನು ಸೋಲಿಸಿತೆಂಬುದನ್ನು ನಾವು ನೋಡಿದ್ದೇವೆ ಎಂದು ಅವರು ನುಡಿದರು.

ನಂದಿಗ್ರಾಮದಲ್ಲಿ ನಡೆಯುತ್ತಿರುವ ವಿದ್ಯಮಾನಗಳು ಇಡೀ ರಾಷ್ಟ್ರವನ್ನು ಆತಂಕಕ್ಕೆ ದೂಡಿದೆ ಎಂದು ಅವರು ಹೇಳಿದರು.ನಂದಿಗ್ರಾಮಕ್ಕೆ ಸ್ವತಃ ಭೇಟಿಕೊಟ್ಟು ದೌರ್ಜನ್ಯ ಮತ್ತು ಹಿಂಸಾಚಾರದ ವರದಿಗಳನ್ನು ಖಚಿತಪಡಿಸಿಕೊಳ್ಳಲು ಎನ್‌ಡಿಎ ನಿಯೋಗ ಇಲ್ಲಿಗೆ ಆಗಮಿಸಿದೆ ಎಂದು ಅವರು ನುಡಿದರು.
ಮತ್ತಷ್ಟು
ಬಿಜೆಪಿ ಸಂಸದ ಖಂಡೇಲ್‌ವಾಲ್ ನಿಧನ
ತೃಣಮೂಲಕ್ಕೆ ಮಾವೋವಾದಿಗಳ ನೆರವು:ಕಾರಟ್
ಸುಪ್ರೀಂಕೋರ್ಟ್‌ಗೆ 3 ಹೊಸ ನ್ಯಾಯಾಧೀಶರು
ಪಶ್ಚಿಮಬಂಗಾಳ-ಎಡರಂಗದಲ್ಲಿ ಒಡಕು
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ
7500 ರೈಲು ನಿಲ್ದಾಣಗಳ ನಿರ್ಮಾಣ: ಲಾಲು