ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸೆಲ್ವನ್ ಬೆಂಬಲಿಸಿ ಮೆರವಣಿಗೆ :ವೈಕೊ ಬಂಧನ
ಶ್ರೀಲಂಕಾ ಸೈನಿಕರು ನವೆಂಬರ್ 2ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ನಿಷೇಧಿತ ಎಲ್‌ಟಿಟಿಇಯ ರಾಜಕೀಯ ನಾಯಕ ತಮಿಳು ಸೆಲ್ವನ್ ಹತ್ಯೆಗೀಡಾಗಿದ್ದನ್ನು ಖಂಡಿಸಿ, ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿದ ಎಂಡಿಎಂಕೆ ಪ್ರಧಾನ ಕಾರ್ಯದರ್ಶಿ ವೈಕೋ ಮತ್ತು ತಮಿಳು ರಾಷ್ಟ್ರೀಯ ಚಳವಳಿ ಹೋರಾಟಗಾರ ಪಿ.ನೆಡುಮಾರನ್ ಅವರನ್ನು ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.

ವೈಕೋ ಹಾಗೂ ನೆಡುಮಾರನ್ ಅವರ ಮುಂದಾಳತ್ವದಲ್ಲಿ ಎಂಡಿಎಂಕೆ, ನ್ಯಾಶನಲ್ ಲೀಗ್ ಹಾಗೂ ತಮಿಳ್ ನ್ಯಾಶನಲ್ಲ ಮೂವ್‌ಮೆಂಟ್ ಸೇರಿ ದಂತೆ ಸುಮಾರು 300ಕ್ಕಿಂತಲೂ ಅಧಿಕ ಕಾರ್ಯಕರ್ತರು ಕಾನೂನು ಬಾಹಿರವಾಗಿ ರಾಲಿಯನ್ನು ನಡೆಸುತ್ತಿದ್ದ ವೇಳೆಯಲ್ಲಿ ಅವರನ್ನು ಬಂಧಿಸಲಾಯಿತೆಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಎಲ್‌ಟಿಟಿಇ ಹಾಗೂ ತಮಿಳ್ ಈಳಂ ಪರ ಘೋಷಣೆಗಳನ್ನು ಕೂಗುತ್ತ ಸಾಗುತ್ತಿದ್ದ ಪ್ರತಿಭಟನಾಕಾರರನ್ನು ತಡೆದು, ವೈಕೋ, ನೆಡುಮಾರನ್ ಸೇರಿದಂತೆ ಎಲ್ಲರನ್ನು ಬಂಧಿಸಿ, 15 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುಸೆಲ್ವನ್ ಅವರ ಹತ್ಯೆಯನ್ನು ಖಂಡಿಸಿ ರಾಲಿ ನಡೆಸಲು ತಮಿಳುನಾಡು ಸರಕಾರ ಅನುಮತಿ ನೀಡಲು ನಿರಾಕರಿಸಿತ್ತು. ಅಲ್ಲದೇ ವೈಕೋ ಅವರ ಈ ಪ್ರತಿಭಟನೆಯನ್ನು ತಮಿಳುನಾಡು ಸರಕಾರ ತೀವ್ರವಾಗಿ ಖಂಡಿಸಿದೆ. ಆದರೆ ನಮ್ಮ ಪ್ರತಿಭಟನೆಯನ್ನು ನಿರಾಕರಿಸಿರುವ

ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿಯವರು ಸೆಲ್ವನ್ ಕುರಿತು ಸಂತಾಪಸೂಚಕವಾಗಿ ಕವನ ರಚಿಸಿದ್ದು ಯಾಕೆ ಎಂಬುದಾಗಿ ವೈಕೋ ಪ್ರಶ್ನಿಸಿದ್ದಾರೆ.

ಅಲ್ಲದೇ ಪ್ರತಿಭಟನಾ ರಾಲಿಯನ್ನು ಹತ್ತಿಕ್ಕಿರುವ ತಮಿಳುನಾಡು ಸರಕಾರದ ಫ್ಯಾಸಿಸ್ಟ್ ಆಡಳಿತಕ್ಕೆ ಧಿಕ್ಕಾರವಿರಲಿ ಎಂಬುದಾಗಿ ನೆಡು ಮಾರ ನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಐಎಡಿಎಂಕೆ ಆಡಳಿತಾವಧಿಯಲ್ಲಿ ಎಲ್‌ಟಿಟಿಇಗೆ ಬಹಿರಂಗ ಬೆಂಬಲ ನೀಡಿದ್ದಕ್ಕಾಗಿ, ವೈಕೊ ಅವರು ಪೋಟಾ ಕಾಯ್ದೆಯಡಿ 19 ತಿಂಗಳುಗಳ ಕಾಲ ಸೆರೆಮನೆವಾಸ ಅನುಭವಿಸಿದ್ದರು.
ಮತ್ತಷ್ಟು
ನಂದಿಗ್ರಾಮದ ಘಟನೆ ಆಘಾತಕಾರಿ:ಆಡ್ವಾಣಿ
ಬಿಜೆಪಿ ಸಂಸದ ಖಂಡೇಲ್‌ವಾಲ್ ನಿಧನ
ತೃಣಮೂಲಕ್ಕೆ ಮಾವೋವಾದಿಗಳ ನೆರವು:ಕಾರಟ್
ಸುಪ್ರೀಂಕೋರ್ಟ್‌ಗೆ 3 ಹೊಸ ನ್ಯಾಯಾಧೀಶರು
ಪಶ್ಚಿಮಬಂಗಾಳ-ಎಡರಂಗದಲ್ಲಿ ಒಡಕು
ಪಶ್ಚಿಮಬಂಗಾಳ ಬಂದ್: ಜನಜೀವನ ಅಸ್ತವ್ಯಸ್ತ