ದಕ್ಷಿಣಭಾರತದಲ್ಲಿ ಅಧಿಕಾರದ ಗದ್ದುಗೆ ಏರಬೇಕೆಂಬ ಭಾರತೀಯ ಜನತಾಪಕ್ಷದ ಕನಸು ನನಸಾಗಿದ್ದು, ಅದಕ್ಕಾಗಿ ಯಡಿಯೂರಪ್ಪ ಅಭಿನಂದ ನಾರ್ಹರು. ಆದರೆ ಮುಖ್ಯಮಂತ್ರಿ ಹುದ್ದೆ ಎನ್ನುವಂತಹದ್ದು ಸುಖದ ಸುಪ್ಪತ್ತಿಗೆಯಲ್ಲ, ಅದೊಂದು ಸವಾಲಾಗಿದೆ ಎಂದು ಬಿಜೆಪಿಯ ಹಿರಿಯ ನಾಯಕ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಸೋಮವಾರದಂದು ಪ್ರಮಾಣವಚನ ಸ್ವೀಕರಿಸಿದ ಬಿ.ಎಸ್. ಯಡಿಯೂರಪ್ಪನವರಿಗೆ ಅಭಿನಂದನೆ ಸಲ್ಲಿಸಿದ ವಾಜಪೇಯಿ, ಇದು ಪಕ್ಷದ ಐತಿಹಾಸಿಕ ವಿಜಯ ಎಂದು ಬಣ್ಣಿಸಿದರು.
ಭಾರತೀಯ ಜನತಾಪಕ್ಷಕ್ಕೆ ಇದು ಮರೆಯಲಾರದ ಸನ್ನಿವೇಶವಾಗಿದೆ. 2004ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಜನತೆ ನೀಡಿದ ತೀರ್ಪೀಗೆ ದೊರೆತ ಜಯವಾಗಿದೆ ಎಂದು ಅವರು ಹೇಳಿದರು.
ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ-ಜೆಡಿಎಸ್ ಮೈತ್ರಿ ಸರಕಾರ ಜನರ ಆಶೋತ್ತರಗಳನ್ನು ಈಡೇರಿಸಿ, ಜನರ ವಿಶ್ವಾಸಗಳಿಸುತ್ತದೆ ಎಂಬ ನಂಬಿಕೆ ಇರುವುದಾಗಿ ಭರವಸೆ ವ್ಯಕ್ತಪಡಿಸಿದರು.
'ಮುಖ್ಯಮಂತ್ರಿ ಹುದ್ದೆ ಅಂತಿಮವಾದುದಲ್ಲ, ಅದೊಂದು ಸಾಧನ, ಆದರೆ ಅದು ಬಹುಮಾನವಲ್ಲ, ಮುಖ್ಯಮಂತ್ರಿ ಹುದ್ದೆ ಸವಾಲಿನಿಂದ ಕೂಡಿ ದ್ದಾಗಿದೆ. ದೊರೆತ ಅವಕಾಶವನ್ನು ಸದುಪಯೋಗಪಡಿಸಿಕೊಂಡು, ಒಳ್ಳೆಯ ಆಡಳಿತವನ್ನು ನೀಡಿ ಎಂದು ವಾಜಪೇಯಿ ಅವರು ನೀಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಶುಭ ಹಾರೈಸಿದ್ದಾರೆ.
|