ನಂದಿಗ್ರಾಮದಲ್ಲಿ ಉಂಟಾದ ಪರಿಸ್ಥಿತಿಗೆ ಕೇಂದ್ರ ಮತ್ತು ಪಶ್ಚಿಮ ಬಂಗಾಲ ಸರಕಾರವು ಸಮವಾಗಿ ಜವಾಬ್ದಾರಿಯನ್ನು ಹೊಂದಿದ್ದು, ಯೂನಿಯನ್ ಸರಕಾರದ ನಿಷ್ಕ್ರಿಯತೆಯ ವಿವರಣೆಯನ್ನು ಆಗ್ರಹಿಸಿ ರಾಷ್ಟ್ರೀಯ ಪ್ರಜಾಪ್ರಭುತ್ವ ಒಕ್ಕೂಟವು(ಎನ್‌ಡಿಎ) ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಈ ವಿಚಾರದಲ್ಲಿ ಧ್ವನಿಎತ್ತಲಿದೆ ಎಂದು ಎನ್‌ಡಿಎ ಘೋಷಿಸಿದೆ.
ಒಂಬತ್ತು ಜನ ಸದಸ್ಯರನ್ನೊಳಗೊಂಡ ಎನ್‌ಡಿಎ ನಿಯೋಗದ ನಾಯಕತ್ವ ವಹಿಸಿದ್ದ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ, ಸಿಆರ್‌ಪಿಎಫ್‌ಗೆ ಗ್ರಾಮಗಳನ್ನು ಪುನರ್ವಶ ಮಾಡಿಕೊಳ್ಳಲು ಸಿಪಿಐಎಂ ಬೆಂಬಲಿತ ಖಾಸಗಿ ಶಸ್ತ್ರಾ ಸ್ತ್ರ ಪಡೆಗಳು ಅವಕಾಶ ನೀಡಿಲ್ಲ ಎಂಬುದಾಗಿ ಆರೋಪಿಸಿದ್ದಾರೆ.
ಮಾರ್ಚ್ 14ರಂದು ನಡೆದ ಮುಗ್ಧ ಜನರ ಹತ್ಯ ನಡೆದಾಗಿನಿಂದ ನಂದಿಗ್ರಾಮದಲ್ಲಿ ಪರಿಸ್ಥಿತಿಯು ಕ್ಷೀಣಿಸುತ್ತಿದೆ ಎಂಬುದಾಗಿ ಎನ್‌ಡಿಎ ಕಂಡುಕೊಂಡಿದೆ ಎಂದು ಅವರು ತಿಳಿಸಿದರು.ಆದರೆ ಈ ಘರ್ಷಣೆಗೆ ಕಾರಣವಾಗಿದ್ದ ಯಾವುದೇ ಅಪರಾಧಿಯನ್ನು ಈವರೆಗೆ ಬಂಧಿಸಿಲ್ಲ ಎಂದು ಅಡ್ವಾಣಿ ತಿಳಿಸಿದರು.
ಸಿಪಿಎಂ ಕೇವಲ ನಂದಿಗ್ರಾಮದ ಮೇಲೆ ಯುದ್ಧ ಘೋಷಿಸಿಲ್ಲ ಇಡೀ ಭಾರತದ ಮೇಲೆ ಯುದ್ಧವನ್ನು ಸಾರಲಿದೆ ಎಂದು ಅಡ್ವಾಣಿ ಸ್ಪಷ್ಟಪಡಿಸಿದರು.
|