ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಲ್ವಾಜುಡುಂ:ನಿರ್ಗತಿಕರಾದ 500 ಮಕ್ಕಳು
ಚತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಮಾವೋವಾದಿ ನಕ್ಸಲೀಯರು ಮತ್ತು ಭದ್ರತಾ ಸಿಬ್ಬಂದಿ ನಡುವೆ ಉಲ್ಬಣಿಸಿದ ಶತ್ರುತ್ವವು ನಿರ್ಗತಿಕ ಮಕ್ಕಳ ರೂಪದಲ್ಲಿ ಹೊಸ ಸಮಸ್ಯೆಯನ್ನು ಸೃಷ್ಟಿಸಿದೆ. ನಿರ್ಗತಿಕ ಮಕ್ಕಳ ಸಂಖ್ಯೆ ಹೆಚ್ಚಳದಿಂದ ರಾಜ್ಯಸರ್ಕಾರವು ಎಚ್ಚೆತ್ತುಕೊಂಡು ಅನಾಥ ಮಕ್ಕಳಿಗೆ ಗುರುಕಲ್ ಆಸ್ತ ಭವನ್ ಎಂಬ ಆಶ್ರಯತಾಣವನ್ನು ದಂತೆವಾಡದಲ್ಲಿ ನಿರ್ಮಿಸಿದೆ.

ಆಸ್ತಾ ಭವನ್‌ನಲ್ಲಿ ಬಾಲಕರು ಮತ್ತು ಬಾಲಕಿಯರು ಸೇರಿದಂತೆ 59 ನಿರ್ಗತಿಕ ಮಕ್ಕಳಿಗೆ ಆಶ್ರಯ ನೀಡಲಾಗಿದ್ದು, 200 ಮಕ್ಕಳಿಗೆ ನೆಲೆಕಲ್ಪಿಸುವ ಅದರ ಸಾಮರ್ಥ್ಯವನ್ನು 500 ಮಕ್ಕಳಿಗೆ ಹೆಚ್ಚಿಸಲಾಗುವುದು ಎಂದು ದಂತೆವಾಡ ಕಲೆಕ್ಟರ್ ಕೆ.ಆರ್. ಪಿಸ್ಡಾ ಹೇಳಿದರು.

ನಕ್ಸಲ್ ವಿರೋಧಿ ಆಂದೋಳನವಾದ ಸಲ್ವಾ ಜುಡುಮ್ ದಕ್ಷಿಣ ಬಾಸ್ತಾರ್‌ನಲ್ಲಿ ಆರಂಭವಾದ ಬಳಿಕ ಕಳೆದ 2 ವರ್ಷಗಳಲ್ಲಿ ಸಂಭವಿಸಿದ ಹಿಂಸಾಚಾರಗಳಿಂದ ತಂದೆ, ತಾಯಿಗಳನ್ನು ಕಳೆದುಕೊಂಡು ಕನಿಷ್ಠ 500 ಮಕ್ಕಳು ಅನಾಥರಾಗಿದ್ದಾರೆ ಎಂದು ಬಿಜಾಪುರ ಜಿಲ್ಲಾ ಸಲ್ವಾ ಜುಡುಂ ಅಧ್ಯಕ್ಷ ಬುಧರಾಂ ರಾಣಾ ಹೇಳಿದರು.

ಮಾವೋವಾದಿ ನಕ್ಸಲೀಯರ ಬಲೆಗೆ ಸ್ಥಳೀಯ ಯುವಕರು ಬೀಳುವುದನ್ನು ತಪ್ಪಿಸಲು ಸ್ಥಳೀಯ ಬುಡಕಟ್ಟು ಜನಾಂಗವು ಸರ್ಕಾರಿ ಸಂಸ್ಥೆಗಳ ಬೆಂಬಲದಿಂದ ಈ ಆಂದೋಳನ ಹಮ್ಮಿಕೊಂಡಿದೆ. ನಕ್ಸಲೀಯರು ಚತ್ತೀಸ್‌ಗಢದ ಬುಡಕಟ್ಟು ಪ್ರದೇಶಗಳಲ್ಲಿ ಕಳೆದ 30 ವರ್ಷಗಳಿಂದ ಭದ್ರನೆಲೆ ಸ್ಥಾಪಿಸಿರುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದೆ.

ಮಾಜಿ ಮುಖ್ಯಮಂತ್ರಿ ಅಜಿತ್ ಜೋಗಿ ಸಲ್ವಾ ಜುಡುಮ್ ಹೋರಾಟವನ್ನು ತೀವ್ರವಾಗಿ ವಿರೋಧಿಸಿ ಬುಡಕಟ್ಟು ಜನರನ್ನು ಮಾವೋವಾದಿಗಳು ಮತ್ತು ನಕ್ಸಲ್ ವಿರೋಧಿ ಕಾರ್ಯಕರ್ತರು ರಕ್ಷಾಕವಚದಂತೆ ಬಳಸುತ್ತಿದೆಯೆಂದು ಆಪಾದಿಸಿದ್ದರು. ಸಲ್ವಾಂ ಜುಡುಂ ಆಂದೋಳನ ಆರಂಭವಾದ ಬಳಿಕ ಸುಮಾರು 700 ಜನರು ಪ್ರಾಣ ಕಳೆದುಕೊಂಡಿದ್ದಾರೆಂದು ಅವರು ಹೇಳಿದ್ದರು.
ಮತ್ತಷ್ಟು
ಮಕ್ಕಳ ದಿನಾಚರಣೆ:ನೆಹರುಗೆ ಗೌರವಾರ್ಪಣೆ
ಸಂಸತ್ತಿನಲ್ಲಿ ನಂದಿಗ್ರಾಮ ಧ್ವನಿ:ಎನ್‌ಡಿಎ ಘೋಷಣೆ
ಮುಖ್ಯಮಂತ್ರಿ ಗದ್ದುಗೆ ಸುಖದ ಸುಪ್ಪತ್ತಿಗೆಯಲ್ಲ
ಸೆಲ್ವನ್ ಬೆಂಬಲಿಸಿ ಮೆರವಣಿಗೆ :ವೈಕೊ ಬಂಧನ
ನಂದಿಗ್ರಾಮದ ಘಟನೆ ಆಘಾತಕಾರಿ:ಆಡ್ವಾಣಿ
ಬಿಜೆಪಿ ಸಂಸದ ಖಂಡೇಲ್‌ವಾಲ್ ನಿಧನ