ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚೆನ್ನೈ ಕರಾವಳಿ ತೀರದಲ್ಲಿ ಭಾರೀ ಅಲೆಗಳು
ಉತ್ತರ ಚೆನ್ನೈ ಕರಾವಳಿಯಲ್ಲಿ ಗುರುವಾರ 3 ಮೀಟರ್ ಎತ್ತರದ ಭಾರೀ ಅಲೆಗಳು ಎದ್ದಿರುವ ಬಗ್ಗೆ ವರದಿಯಾಗಿದೆ. ಇದು ಮೀನುಗಾರರ ಸಮುದಾಯದಲ್ಲಿ ಆತಂಕ ಮೂಡಿಸಿದ್ದು, ಬಂಗಾಳಕೊಲ್ಲಿಯಲ್ಲಿ ಮೂಡಿರುವ ತೀವ್ರ ಚಂಡಮಾರುತದ ವಿದ್ಯಮಾನದಿಂದ ಈ ಅಲೆಗಳು ಎದ್ದಿವೆ ಎಂದು ಹವಾಮಾನ ಕಚೇರಿ ತಿಳಿಸಿದೆ.

ಅಪ್ಪಾರ್‌ನಗರದಲ್ಲಿ 10 ಗುಡಿಸಲುಗಳು, ತಿರುವೊಟ್ಟಿಯುರ್‌ನಲ್ಲಿ ಮೀನುಗಾರರ ಕೇರಿ ಅಲೆಗಳ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಸಮುದ್ರದ ನೀರು 200 ಮನೆಗಳಿಗೆ ನುಗ್ಗಿದ್ದು, ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಿದರು. ಎನ್ನೋರ್, ತಿರುವೊಟ್ಟಿಯುರ್, ಕಾಸಿಮೆಡು ಮತ್ತು ಎರ್ನಾವುರ್ ಪ್ರದೇಶಗಳು ಸಮುದ್ರದ ಅಲೆಗಳ ಆರ್ಭಟಕ್ಕೆ ಸಿಕ್ಕಿವೆ.ಪ್ರತಿಕೂಲ ಹವಾಮಾನದಿಂದ ಮೀನುಗಾರರು ಸಮುದ್ರಕ್ಕೆ ಇಳಿಯದೇ ದೂರವುಳಿದಿದ್ದಾರೆ.

ಕಳೆದ 8 ವರ್ಷಗಳಿಂದೀಚೆಗೆ ಇಂತಹ ಉಗ್ರಸ್ವರೂಪದ ಅಲೆಗಳನ್ನು ನೋಡಿಲ್ಲ ಎಂದು ಮೀನುಗಾರರು ಹೇಳಿದ್ದಾರೆ. 2004ರಲ್ಲಿ ಸುನಾಮಿ ಅಪ್ಪಳಿಸಿದಾಗಲೂ ಇಂತಹ ಅಲೆಗಳು ಎದ್ದಿರಲಿಲ್ಲ ಎಂದು ಅವರು ನುಡಿದಿದ್ದಾರೆ. ರಾಜ್ಯ ಮೀನುಗಾರಿಕೆ ಸಚಿವ ಕೆ.ಪಿ. ಸ್ವಾಮಿ, ಆರ್‌ಡಿಒ ಸಂಗೀತ ಮತ್ತಿತರರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ಅವಲೋಕಿಸಿದರು.
ಮತ್ತಷ್ಟು
ಕಲಾಪಕ್ಕೆ ಅಡ್ಡಿ: ಬಡ ತೆರಿಗೆದಾರನ ಹಣ ವ್ಯರ್ಥ
ಪ್ರಿಯಕರನ ಮನೆಗೆ ದಿಬ್ಬಣದೊಂದಿಗೆ ತೆರಳಿದ ಪ್ರಿಯತಮೆ
ಸಂಸತ್ತನ್ನು ನಡುಗಿಸಲು ಸಿದ್ಧವಾದ "ನಂದಿಗ್ರಾಮ"
ನಂದಿಗ್ರಾಮ: ಕಾವೇರಿದ ಚರ್ಚೆ ನಿರೀಕ್ಷೆ
ಆರ್ಥಿಕ ಅಭಿವೃದ್ಧಿಯ ಫಲ ಹಂಚಿಕೆಗೆ ರಾಷ್ಟ್ರಪತಿ ಕರೆ
ಸಲ್ವಾಜುಡುಂ:ನಿರ್ಗತಿಕರಾದ 500 ಮಕ್ಕಳು