ಬಂಗಾಳಕೊಲ್ಲಿಯಲ್ಲಿ ಚಂಡಮಾರುತದಿಂದ ಒರಿಸ್ಸಾ ಕರಾವಳಿ ತೀರದಲ್ಲಿ 6 ಅಡಿಗಳಷ್ಟು ಎತ್ತರದ ಬೃಹತ್ ಅಲೆಗಳನ್ನು ಸೃಷ್ಟಿಸಬಹುದು ಮತ್ತು ವೇಗವಾದ ಬಿರುಗಾಳಿ ಬೀಸುವ ನಿರೀಕ್ಷೆಯಿದ್ದು, ರಾಜ್ಯ ಸರ್ಕಾರವು ಗುರುವಾರಪ 6 ಜಿಲ್ಲೆಗಳಲ್ಲಿ ಕರಾವಳಿ ತೀರದ ಗ್ರಾಮಗಳಲ್ಲಿರುವ ಜನರನ್ನು ತೆರವು ಮಾಡಲು ಆರಂಭಿಸಿದ್ದಾರೆ.
ಸಿದರ್ ಎಂದು ನಾಮಾಂಕಿತವಾದ ಚಂಡಮಾರುತ ಒರಿಸ್ಸಾವನ್ನು ಬಿಟ್ಟು ಪಶ್ಚಿಮಬಂಗಾಳ ಮತ್ತು ಬಾಂಗ್ಲಾದೇಶ ಅಭಿಮುಖವಾಗಿ ಸಾಗಿರುವ ಪರಿಣಾಮವಾಗಿ ಬಾಲಸೋರ್, ಭದ್ರಕ್, ಕೇಂದ್ರಾಪುರ ಮತ್ತು ಜಗತ್‌ಸಿಂಗ್‌ಪುರ ಜಿಲ್ಲೆಗಳಲ್ಲಿ 5ರಿಂದ 6 ಅಡಿ ಎತ್ತರದ ಬೃಹತ್ ಗಾತ್ರದ ಅಲೆಗಳನ್ನು ಹುಟ್ಟುಹಾಕುತ್ತದೆ ಎಂದು ಚಂಡಮಾರುತ ಮುನ್ನೆಚ್ಚರಿಕೆ ಕೇಂದ್ರ ತಿಳಿಸಿದೆ.
" ಒರಿಸ್ಸಾ ಕರಾವಳಿ ತೀರವನ್ನು ಚಂಡಮಾರುತ ಹಾದುಹೋಗುವ ಸಂದರ್ಭದಲ್ಲಿ 90ರಿಂದ 120 ಕಿಮೀ ವೇಗದಲ್ಲಿ ಬಿರುಗಾಳಿ ಅಪ್ಪಳಿಸುವ ಸಂಭವವಿದೆ ಎಂದು ಸಿಡಬ್ಲ್ಯುಸಿ ನಿರ್ದೇಶಕ ಸರತ್ ಸಾಹು ಹೇಳಿದ್ದಾರೆ.
ಒರಿಸ್ಸಾ ಕರಾವಳಿ ತೀರದುದ್ದಕ್ಕೂ ಇರುವ ಸುಮಾರು 500 ಗ್ರಾಮಗಳ ಜನರ ಸ್ಥಳಾಂತರಕ್ಕೆ ಸರ್ಕಾರಿ ಯಂತ್ರ ಸಜ್ಜಾಗಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.
|