ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಐಎಇಎ ಸಂಪರ್ಕಿಸಲು ಸರ್ಕಾರದ ಇಂಗಿತ
PTI
ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ನಿರ್ಣಾಯಕ ಯುಪಿಎ-ಎಡರಂಗದ ಸಭೆ ಶುಕ್ರವಾರ ನಡೆಯಲಿರುವ ಹಿನ್ನೆಲೆಯಲ್ಲಿ ಪರಮಾಣು ಸುರಕ್ಷತೆ ಒಪ್ಪಂದದ ಬಗ್ಗೆ ಮಾತುಕತೆಗಾಗಿ ಐಎಇಎಯನ್ನು ಸಂಪರ್ಕಿಸುವುದಾಗಿ ಸರ್ಕಾರ ಗುರುವಾರ ಇಂಗಿತ ವ್ಯಕ್ತಪಡಿಸಿದೆ.

ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಬಳಿಕ ಹಿರಿಯ ಸಚಿವರೊಬ್ಬರು ಮೇಲಿನ ಇಂಗಿತ ವ್ಯಕ್ತಪಡಿಸಿದ್ದಾರೆ. ಸಿಂಗ್ ಅವರು ಸಂಪುಟದ ಹಿರಿಯ ಸಹೋದ್ಯೋಗಿಗಳಾದ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ, ರಕ್ಷಣಾ ಸಚಿವ ಎ.ಕೆ. ಆಂಟೋನಿ ಮತ್ತು ಗೃಹಸಚಿವ ಶಿವರಾಜ್ ಪಾಟೀಲ್ ಅವರ ಜತೆ ಕೂಡ ಸಮಾಲೋಚನೆ ನಡೆಸಿದ್ದಾರೆ.

ಐಎಇಎಯನ್ನು ಸಂಪರ್ಕಿಸಲು ಸರ್ಕಾರ ಪರಿಶೀಲನೆ ನಡೆಸುತ್ತಿದ್ದು, ಯುಪಿಎ-ಎಡರಂಗ ಸಮಿತಿ ನಡುವೆ ಶುಕ್ರವಾರದ ಸಭೆ ಮಹತ್ವ ಪಡೆದಿದೆ. ಶುಕ್ರವಾರದ ಸಭೆಯಲ್ಲಿ ಈ ಬಗ್ಗೆ ಔಪಚಾರಿಕ ಅಭಿಪ್ರಾಯವನ್ನು ದೃಢೀಕರಿಸುವ ನಿರೀಕ್ಷೆಯಿದ್ದು, ಐಎಇಎ ಸಂಪರ್ಕಿಸುವ ಸರ್ಕಾರದ ಇಚ್ಛೆ ಬಗ್ಗೆ ತಮ್ಮ ವಿರೋಧವನ್ನು ಸಡಿಲಗೊಳಿಸುವ ಇಂಗಿತವನ್ನು ಎಡಪಕ್ಷಗಳು ನೀಡಿವೆ.

ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು ಪರಮಾಣು ಒಪ್ಪಂದಕ್ಕೆ ಪ್ರತಿಪಕ್ಷದ ಬೆಂಬಲ ಕೋರಲು ಬಿಜೆಪಿ ಧುರೀಣ ವಾಜಪೇಯಿಯನ್ನು ಭೇಟಿ ಮಾಡಿದ ಮರುದಿನವೇ ಈ ಬೆಳವಣಿಗೆ ಉಂಟಾಗಿರುವುದು ಮಹತ್ವ ಪಡೆದುಕೊಂಡಿದೆ.

ಪ್ರಧಾನ ಮಂತ್ರಿ ಸಿಂಗಪುರ ಮತ್ತು ಉಗಾಂಡ ಪ್ರವಾಸದಿಂದ ಮರಳಿದ ಬಳಿಕ ಲೋಕಸಭೆಯಲ್ಲಿ ನ.27ರಂದು ಪರಮಾಣು ಒಪ್ಪಂದದ ಕುರಿತು ಚರ್ಚೆ ನಡೆಯಲಿದೆ ಎಂದು ಸಂಸದೀಯ ವ್ಯವಹಾರ ಸಚಿವ ದಾಸ್‌ಮುನ್ಷಿ ತಿಳಿಸಿದ್ದಾರೆ. ನ.28ರಂದು ಈ ಕುರಿತು ರಾಜ್ಯಸಭೆಯಲ್ಲಿ ಚರ್ಚಿಸುವ ಪ್ರಸ್ತಾಪವನ್ನು ಸರ್ಕಾರ ಮಂಡಿಸಿದೆ.
ಮತ್ತಷ್ಟು
ಒರಿಸ್ಸಾ: ಬೃಹತ್ ಅಲೆಗಳ ನಿರೀಕ್ಷೆ
ಗುಜರಾತ್ ಚುನಾವಣೆ ಪ್ರಕ್ರಿಯೆ ಆರಂಭ
ಚೆನ್ನೈ ಕರಾವಳಿ ತೀರದಲ್ಲಿ ಭಾರೀ ಅಲೆಗಳು
ಕಲಾಪಕ್ಕೆ ಅಡ್ಡಿ: ಬಡ ತೆರಿಗೆದಾರನ ಹಣ ವ್ಯರ್ಥ
ಪ್ರಿಯಕರನ ಮನೆಗೆ ದಿಬ್ಬಣದೊಂದಿಗೆ ತೆರಳಿದ ಪ್ರಿಯತಮೆ
ಸಂಸತ್ತನ್ನು ನಡುಗಿಸಲು ಸಿದ್ಧವಾದ "ನಂದಿಗ್ರಾಮ"