ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮದ ಪ್ರಸ್ತಾಪಕ್ಕೆ ಎಡರಂಗ ಅಡ್ಡಿ
PTI
ನಂದಿಗ್ರಾಮದ ಹಿಂಸಾಚಾರದ ಬಗ್ಗೆ ಪ್ರತಿಪಕ್ಷ ಬಿಜೆಪಿ ಸಂಸತ್ತಿನ ಕಲಾಪಕ್ಕೆ ಅಡ್ಡಿಪಡಿಸಲು ನಿಶ್ಚಯಿಸಿರುವ ನಡುವೆ ನಂದಿಗ್ರಾಮ ರಾಜ್ಯಕ್ಕೆ ಸಂಬಂಧಿಸಿದ ವಿಷಯವಾದ್ದರಿಂದ ಅದರ ಪ್ರಸ್ತಾಪಕ್ಕೆ ಅವಕಾಶ ನೀಡದಿರಲು ನಿರ್ಧರಿಸಿದೆ. ನಾಲ್ಕು ಎಡಪಕ್ಷಗಳ ಸಭೆ ನಡೆದ ಬಳಿಕ ನಂದಿಗ್ರಾಮ ರಾಜ್ಯದ ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ವಿಷಯ ಎಂದು ಎಡಮುಖಂಡರು ಪ್ರತಿಪಾದಿಸಿದರು.

ಅಂತಹ ವಿಷಯವನ್ನು ಪ್ರಸ್ತಾಪಿಸಲು ನಿಯಮಗಳು ಅವಕಾಶ ನೀಡುವುದಿಲ್ಲವಾದ್ದರಿಂದ ಅದನ್ನು ಚರ್ಚಿಸುವಂತಿಲ್ಲ ಎಂದು ಅವು ತಿಳಿಸಿವೆ. ಸಂಸತ್ತು ನಿಯಮಗಳ ಪ್ರಕಾರ ಕಾರ್ಯನಿರ್ವಹಿಸುತ್ತದೆ.

ನಂದಿಗ್ರಾಮ ವಿಷಯವನ್ನು ಪಶ್ಚಿಮಬಂಗಾಳ ವಿಧಾನಸಭೆಯಲ್ಲಿ ಚರ್ಚಿಸಬಹುದೇ ಹೊರತು ಸಂಸತ್ತಿನಲ್ಲಲ್ಲ ಎಂದು ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತಾ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪಕ್ಷದ ಸಹೋದ್ಯೋಗಿಗಳಾದ ಡಿ.ರಾಜಾ, ಸಿಪಿಎಂನ ಸೀತಾರಾಂ ಯೆಚೂರಿ, ಬಸುದೇವ್ ಆಚಾರ್ಯ ಮತ್ತು ರೂಪಚಂದ್ ಪಾಲ್ ಕೂಡ ಉಪಸ್ಥಿತರಿದ್ದರು.
ಮತ್ತಷ್ಟು
ಐಎಇಎ ಸಂಪರ್ಕಿಸಲು ಸರ್ಕಾರದ ಇಂಗಿತ
ಒರಿಸ್ಸಾ: ಬೃಹತ್ ಅಲೆಗಳ ನಿರೀಕ್ಷೆ
ಗುಜರಾತ್ ಚುನಾವಣೆ ಪ್ರಕ್ರಿಯೆ ಆರಂಭ
ಚೆನ್ನೈ ಕರಾವಳಿ ತೀರದಲ್ಲಿ ಭಾರೀ ಅಲೆಗಳು
ಕಲಾಪಕ್ಕೆ ಅಡ್ಡಿ: ಬಡ ತೆರಿಗೆದಾರನ ಹಣ ವ್ಯರ್ಥ
ಪ್ರಿಯಕರನ ಮನೆಗೆ ದಿಬ್ಬಣದೊಂದಿಗೆ ತೆರಳಿದ ಪ್ರಿಯತಮೆ