ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚೆನ್ನೈಗೆ ಅಪ್ಪಳಿಸಿದ ಚಂಡಮಾರುತ: ಬಾರಿ ಹಾನಿ
ಭಾರೀ ಚಂಡಮಾರುತ ಪಶ್ಚಿಮ ಬಂಗಾಳ-ಬಾಂಗ್ಲಾದೇಶ ಕರಾವಳಿಗೆ ಅಭಿಮುಖವಾಗಿ ಶುಕ್ರವಾರದಂದು ಮುನ್ನಡೆದಿರುವುದಾಗಿ ಮುನ್ನೆಚ್ಚರಿಕೆ ನೀಡಿರುವ ಬೆನ್ನಲ್ಲೇ ತಮಿಳುನಾಡು ಕರಾವಳಿ ಪ್ರದೇಶದಲ್ಲಿ ರಕ್ಕಸಗಾತ್ರದ ಅಲೆಗಳು ಜನರನ್ನು ಭಯದ ಕೂಪಕ್ಕೆ ತಳ್ಳಿವೆ ಎಂಬುದಾಗಿ ವರದಿಯಾಗಿದೆ.

ಪಶ್ಚಿಮ ಬಂಗಾಳ - ಬಾಂಗ್ಲಾದೇಶ ಕರಾವಳಿಗೆ ಅಭಿಮುಖವಾಗಿ ಹೊರಟಿರುವ ಸಿದ್ರಾ ಚಂಡಮಾರುತ ಸಾಗರ್ ದ್ವೀಪಗಳಿಗೆ ಅಪ್ಪಳಿಸುವುದೆಂದು ನಿರೀಕ್ಷಿಸಲಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಂದು ಎರಡೂ ದೇಶಗಳ ಕರಾವಳಿ ಪ್ರದೇಶದಲ್ಲಿನ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿ ಸಲಾಗಿತ್ತು.

ಚೆನ್ನೈಯ ತಿರುವಟ್ಟಿಯೂರ್ ಕರಾವಳಿ ಪ್ರದೇಶದಲ್ಲಿ ದಡಕ್ಕೆ ಬಂದಪ್ಪಳಿಸಿದ ರಾಕ್ಷಸ ಗಾತ್ರದ ಅಲೆಗಳ ಹೊಡೆತಕ್ಕೆ ಸಿಲುಕಿ ಸುಮಾರು 10 ಮನೆ ಗಳು ಕುಸಿತಕ್ಕೊಳಗಾಗಿದ್ದು, ಸಾವಿರಾರು ಜನರನ್ನು ಬೇರೆಡೆಗೆ ಸ್ಥಳಾಂತರಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕರಾವಳಿ ಭಾಗದಲ್ಲಿ ಶುಕ್ರವಾರ ಸಂಜೆಯೇ ಸುಮಾರು ಮೂರು ಮೀಟರ್ ಎತ್ತರಕ್ಕೆ ಅಲೆಗಳು ದಡಕ್ಕೆ ಬಂದಪ್ಪಳಿಸಿರುವುದಾಗಿ ಅವರು ಹೇಳಿ ದ್ದಾರೆ. ಸಮುದ್ರದಿಂದ ಉಕ್ಕೇರಿ ಬಂದ ಅಲೆಗಳ ನೀರು ಹಲವಾರು ಮನೆಗಳಿಗೆ ನುಗ್ಗಿದೆ. ಮುನ್ನೆಚ್ಚರಿಕೆಯ ಅಂಗವಾಗಿ ಸ್ಥಳೀಯ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.

ಈ ನಿಟ್ಟಿನಲ್ಲಿ ಸ್ಥಳೀಯ ಸಚಿವರು ಜನರಿಂದ ಆರೋಪ ಎದುರಿಸುವಂತಾಗಿದೆ,ಸಮುದ್ರ ಕೊರೆತದ ಬಗ್ಗೆ ಸರಕಾರ ಯಾವುದೇ ಕ್ರಮವನ್ನು ಕೈಗೊಳ್ಳುತ್ತಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ. ತಮಿಳುನಾಡು ಮೀನುಗಾರಿಕಾ ಸಚಿವ ಕೆಪಿಪಿ ಸಾಮಿ, ಶುಕ್ರವಾರ ಸಂಜೆ ಸಮುದ್ರ ಕೊರೆತ ಉಂಟಾದ ಪ್ರದೇಶಗಳಲ್ಲಿ ಬಂಡೆಕಲ್ಲುಗಳನ್ನು ಹಾಕಿಸುವ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ನಿರಾಶ್ರಿತ ಜನರಿಗೆ ಶಾಲೆಗಳಲ್ಲಿ ವಾಸ್ತವ್ಯ ಹೂಡಲು ವ್ಯವಸ್ಥೆ ಮಾಡಿರುವುದಾಗಿ ತಿಳಿಸಿದ ಸಚಿವರು, ಇನ್ನು ಏಳೆಂಟು ತಿಂಗಳಲ್ಲಿ ಸಮುದ್ರ ಕಿನಾರೆಯಲ್ಲಿ ವಾಸಿಸುವ ಜನರಿಗೆ ನೂತನ ಮನೆಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದರು.
ಮತ್ತಷ್ಟು
ರಾಹುಲ್ ಅಪಹರಣಕ್ಕೆ ಸಂಚು: 3 ಉಗ್ರರ ಬಂಧನ
ನಂದಿಗ್ರಾಮದ ಪ್ರಸ್ತಾಪಕ್ಕೆ ಎಡರಂಗ ಅಡ್ಡಿ
ಐಎಇಎ ಸಂಪರ್ಕಿಸಲು ಸರ್ಕಾರದ ಇಂಗಿತ
ಒರಿಸ್ಸಾ: ಬೃಹತ್ ಅಲೆಗಳ ನಿರೀಕ್ಷೆ
ಗುಜರಾತ್ ಚುನಾವಣೆ ಪ್ರಕ್ರಿಯೆ ಆರಂಭ
ಚೆನ್ನೈ ಕರಾವಳಿ ತೀರದಲ್ಲಿ ಭಾರೀ ಅಲೆಗಳು