ನಿತಾರಿ ಸರಣಿ ಕೊಲೆ ಪ್ರಕರಣದ ಇದೀಗ ಮತ್ತೊಂದು ತಿರುವನ್ನು ಪಡೆದುಕೊಂಡಿದೆ. ಹತ್ಯಾಕಾಂಡದ ರೂವಾರಿ ಮೊನಿಂದರ್ ಸಿಂಗ್ ಪಂಧೇರ್ ವಿರುದ್ಧ ನೀಡಿದ್ದ ಹೇಳಿಕೆಯನ್ನು ಆತನ ಮನೆಯಲ್ಲೇ ಅತ್ಯಾಚಾರಕ್ಕೊಳಗಾಗಿ, ಹತ್ಯೆಗೀಡಾದ ಪಾಯಲ್ ಎಂಬಾಕೆಯ ತಂದೆ ವಾಪಸು ಪಡೆದಿದ್ದಾನೆ.
ನಂದಲಾಲ್ ಪಾಯಲ್ ತಂದೆಯಾಗಿದ್ದು, ಸರಣಿ ಹತ್ಯಾಕಾಂಡದಲ್ಲಿ ಕೊಲೆಯಾವರಲ್ಲಿ ಈತನ ಮಗಳು ಸೇರಿದ್ದಳು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದ ವೇಳೆ ಪಂಧೇರ್ ನಿವಾಸದಲ್ಲಿ ಕೊಲೆಗಾಗಿ ಬಳಸಲಾಗಿದ್ದ ಗರಗಸ ವಶಕ್ಕೆ ತೆಗೆದುಕೊಂಡಿದ್ದರು. ಈ ಸಂದರ್ಭದಲ್ಲಿ ನೋಯ್ಡಾ ಡಿಎಸ್ಪಿ ದಿನೇಶ್ ಯಾದವ್ ಕೇಸ್ ಡೈರಿಯನ್ನು ತನಗೆ ನೀಡಿದ್ದರು ಎಂದು 22ರ ಹರೆಯದ ಪಾಯಲ್ ತಂದೆ ನಂದಲಾಲ್ ಈ ಹಿಂದೆ ಹೇಳಿಕೆ ನೀಡಿದ್ದ.
ಆದರೆ ಇದೀಗ ತನ್ನ ಹೇಳಿಕೆಯನ್ನು ಬದಲಾಯಿಸಿದ್ದ ನಂದಲಾಲ್ ಇವೆಲ್ಲವೂ ಸುಳ್ಳು,ಪಂದೇರ್ ಮನೆಯಿಂದ ಏನನ್ನೂ ವಶಪಡಿಸಿಕೊಂಡಿಲ್ಲ, ನನಗೆ ಯಾವುದೇ ಕೇಸ್ ಡೈರಿಯನ್ನ ನೀಡಿಲ್ಲ ಎಂಬುದಾಗಿ ಹೇಳುವ ಮೂಲಕ ಪಂಧೇರ್‌ಗೆ ಕ್ಲೀನ್ ಚಿಟ್ ನೀಡಿದ್ದಾನೆ.
ನಿತಾರಿ ಪ್ರಕರಣದ ಮೂರು ಆರೋಪಿಗಳಾದ ಪಂಧೇರ್, ಆತನ ಸಹಾಯಕ ಸುರೀಂದರ್ ಕೋಲಿ ಹಾಗೂ ಅಮಾನತುಗೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಸಿಮರಂಜಿತ್ ಕೌರ್ ಅವರನ್ನು ದಾನ್ಸಾ ಜಿಲ್ಲೆಯ ಜೈಲಿನಿಂದ ಬಿಗಿ ಬಂದೋಬಸ್ತ್‌ನಲ್ಲಿ ಸಿಬಿಐ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
|