ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮ: ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಅವಕಾಶವಿಲ್ಲ
ನಂದಿಗ್ರಾಮದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ಸಂಸತ್ ಕಲಾಪಕ್ಕೆ ಅಡ್ಡಿಪಡಿಸಲು ವಿಪಕ್ಷ ಭಾರತೀಯ ಜನತಾ ಪಕ್ಷ ಸಿದ್ಧತೆ ಮಾಡಿಕೊಳ್ಳು ತ್ತಿದ್ದಂತೆಯೇ ಸಂಸತ್ತಿನಲ್ಲಿ ಈ ಕುರಿತ ಯಾವುದೇ ಚರ್ಚೆಗೆ ಅವಕಾಶ ನೀಡದಿರಲು ಎಡಪಕ್ಷಗಳು ನಿರ್ಧರಿಸಿವೆ.

ನಾಲ್ಕು ಎಡಪಕ್ಷಗಳ ಪ್ರಮುಖರ ಸಭೆಯ ಬಳಿಕ ನಂದಿಗ್ರಾಮ ಬಿಕ್ಕಟ್ಟಿನ ಕುರಿತ ತಮ್ಮ ನಿಲುವನ್ನು ವ್ಯಕ್ತಪಡಿಸಿದ ನಾಯಕರು, ಇದೊಂದು ರಾಜ್ಯದ ಕಾನೂನು ವ್ಯವಸ್ಥೆಗೆ ಸಂಬಂಧಿಸಿದ ವಿಚಾರವಾಗಿದ್ದು, ಸಂಸತ್ತಿನಲ್ಲಿ ಈ ಕುರಿತು ಚರ್ಚಿಸಲು ನಿಯಮಾವಳಿಯನ್ವಯ ಅವಕಾಶ ಇಲ್ಲ ಎಂದು ಹೇಳಿದ್ದಾರೆ.

ಸಂಸತ್ ಕಲಾಪಗಳು ನಿಯಮಾವಳಿಯನ್ವಯವೇ ನಡೆಯುತ್ತವೆ. ಈ ನಿಯಮಾವಳಿ ಅನ್ವಯ ಯಾವೆಲ್ಲ ವಿಚಾರಗಳನ್ನು ಪ್ರಸ್ತಾಪಿಸಬಹುದಾಗಿದೆ ಎಂಬುದನ್ನು ಸಭೆಯಲ್ಲಿ ಚರ್ಚಿಸಲಾಗಿದೆ.

ನಂದಿಗ್ರಾಮ ವಿಷಯವನ್ನು ಪಶ್ಚಿಮಬಂಗಾಲ ವಿಧಾನಸಭೆಯಲ್ಲಿ ಮಾತ್ರವೇ ಚರ್ಚಿಸಬಹುದಾಗಿದ್ದು, ಸಂಸತ್ತಿನಲ್ಲಿ ಇದಕ್ಕೆ ಅವಕಾಶವಿಲ್ಲ ಎಂದು ಎಡಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ನಾಯಕ ಗುರುದಾಸ್ ದಾಸ್‌ಗುಪ್ತ ಸ್ಪಷ್ಟಪಡಿಸಿದ್ದಾರೆ.

2002ರ ಗುಜರಾತ್ ಹತ್ಯಾಕಾಂಡ ಕುರಿತ ತೆಹಲ್ಕಾ ವರದಿ ಬಗ್ಗೆಯೂ ಸಂಸತ್ತಿನಲ್ಲಿ ಪ್ರಸ್ತಾಪಿಸಲು ಎಡಪಕ್ಷಗಳು ನಿರ್ಧರಿಸಿವೆ. ದೇಶದ 165 ಜಿಲ್ಲೆಗಳಲ್ಲಿ ಮಾವೋ ಉಗ್ರರ ಉಪಟಳ ಹೆಚ್ಚಿರುವ ಬಗ್ಗೆಯೂ ಸರಕಾರದ ಗಮನ ಸೆಳೆಯಲು ಎಡಪಕ್ಷಗಳು ನಿರ್ಧರಿಸಿವೆ ಎಂದರು.

ಕಳೆದ ಮಾರ್ಚ್ 14ರಂದು ನಂದಿಗ್ರಾಮದಲ್ಲಿ ಪ್ರತಿಭಟನಾಕಾರರ ಮೇಲೆ ಪೊಲೀಸರು ನಡೆಸಿದ ಗುಂಡಿನ ದಾಳಿ ಕುರಿತು ಬಿಜೆಪಿ ವಿಪಕ್ಷ ನಾಯಕ ಎಲ್.ಕೆ.ಆಡ್ವಾಣಿ ಅವರು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಮುಂದಾದಾಗ , ಸಂಸತ್ ನಿಯಮಾವಳಿ ಅನ್ವಯ ಈ ವಿಚಾರವನ್ನು ಪ್ರಸ್ತಾಪಿಸಲು ಅವಕಾಶ ನೀಡಲಾಗದು ಎಂದು ಲೋಕಸಭಾ ಉಪಾಧ್ಯಕ್ಷ ಸಿ.ಎಸ್. ಅಠವಳೆ ಸ್ಪಷ್ಟಪಡಿಸಿದ್ದರು
ಮತ್ತಷ್ಟು
ನಿತಾರಿ ಕೊಲೆ ಪ್ರಕರಣ : ತಿರುಗಿಬಿದ್ದ ಪ್ರಮುಖ ಸಾಕ್ಷಿ
ಚೆನ್ನೈಗೆ ಅಪ್ಪಳಿಸಿದ ಚಂಡಮಾರುತ: ಬಾರಿ ಹಾನಿ
ರಾಹುಲ್ ಅಪಹರಣಕ್ಕೆ ಸಂಚು: 3 ಉಗ್ರರ ಬಂಧನ
ನಂದಿಗ್ರಾಮದ ಪ್ರಸ್ತಾಪಕ್ಕೆ ಎಡರಂಗ ಅಡ್ಡಿ
ಐಎಇಎ ಸಂಪರ್ಕಿಸಲು ಸರ್ಕಾರದ ಇಂಗಿತ
ಒರಿಸ್ಸಾ: ಬೃಹತ್ ಅಲೆಗಳ ನಿರೀಕ್ಷೆ