ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ
ಗುರುವಾರ ಬೆಳಿಗ್ಗೆ ಆರಂಭಗೊಂಡ ಸಂಸತ್‌ನ ಎರಡೂ ಸದನಗಳಲ್ಲಿ ಇತ್ತೀಚೆಗೆ ನಿಧನರಾದ ಸಂಸದರಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದ ಬಳಿಕ ಎರಡು ಸದನಗಳ ಕಲಾಪವನ್ನು ಶುಕ್ರವಾರಕ್ಕೆ (ನಾಳೆ) ಮುಂದೂಡಲಾಯಿತು.

ಸಂಸತ್ ಚಳಿಗಾಲದ ಅಧಿವೇಶದ ಮೊದಲ ದಿನದಂದು ಸಂಸದರಾದ ದಿವಂಗತ ವಿಜಯ್ ಖಂಡೇಲ್ ವಾಲಾ ಹಾಗೂ ಜನಾ ಕೃಷ್ಣಮೂರ್ತಿ ಅವರಿಗೆ ಸಂತಾಪವನ್ನು ಸೂಚಿಸಿ ಸದನದ ಕಲಾಪ ನಾಳೆಗೆ ಮುಂದೂಡಲಾಯಿತು.

ಮೂರು ವಾರಗಳ ಕಾಲ ನಡೆಯುವ ಅಧಿವೇಶನದಲ್ಲಿ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ನಂದಿಗ್ರಾಮದ ಹಿಂಸಾಕಾಂಡ ಪ್ರಕರಣ ಕುರಿತು ಧ್ವನಿ ಎತ್ತಲು ವಿರೋಧ ಪಕ್ಷ ಸಜ್ಜಾಗಿರುವುದಾಗಿ ಎನ್‌ಡಿಎ ತಿಳಿಸಿತ್ತು. ಅಲ್ಲದೇ ಎಡಪಕ್ಷ ಪರಮಾಣು ಒಪ್ಪಂದದಲ್ಲಿ ಮೃದುಧೋರಣೆ ತಾಳಿ ರುವ ಕುರಿತು, ನಂದಿಗ್ರಾಮದ ಹಿಂಸಾಕಾಂಡದ ಬಗ್ಗೆ ಯುಪಿಎ ಸರಕಾರ ನಿಷ್ಕ್ರಿಯತೆ ತೋರಿರುವ ಬಗ್ಗೆ ಸಂಸತ್‌ನಲ್ಲಿ ವಿವರಣೆ ಕೇಳುವುದಾಗಿ ಬಿಜೆಪಿ ಹೇಳಿದೆ.

ಯುಪಿಎ ಸರಕಾರಕ್ಕೆ ಬಾಹ್ಯ ಬೆಂಬಲ ನೀಡಿದ್ದ ಸಿಪಿಎಂ ಇದೀಗ ನಂದಿಗ್ರಾಮದ ಪ್ರಕರಣದಿಂದಾಗಿ ಅಡಕತ್ತರಿಯಲ್ಲಿ ಸಿಲುಕಿದ್ದು, ಈ ವಿಷಯ ವನ್ನೇ ವಿರೋಧಪಕ್ಷವಾದ ಬಿಜೆಪಿ ಪ್ರಧಾನ ಅಸ್ತ್ರವಾಗಿ ಬಳಸಿಕೊಳ್ಳಲಿದೆ. ಅಲ್ಲದೇ ಎಡಪಕ್ಷ ಆಡಳಿತದ ಪಶ್ಚಿಮಬಂಗಾಲದಲ್ಲಿ ನಡೆದ ಹಿಂಸಾ ಕಾಂಡದ ಕುರಿತು ಸಂಸತ್‌ನಲ್ಲಿ ಧ್ವನಿ ಎತ್ತಲಿರುವ ಕುರಿತು ಮಂಗಳವಾರದಂದು ವಿರೋಧಪಕ್ಷದ ನಾಯಕ ಎಲ್.ಕೆ. ಆಡ್ವಾಣಿ ಅವರು ಮುನ್ಸೂಚನೆ ನೀಡಿದ್ದರು.

ಏತನ್ಮಧ್ಯೆ ಪಶ್ಚಿಮಬಂಗಾಲದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರು ನಂದಿಗ್ರಾಮದ ಪ್ರಕರಣದ ಕುರಿತು ನಂದಿಗ್ರಾಮ ಯುದ್ಧ ವಲ ಯವಾಗಿ ಮಾರ್ಪಟ್ಟಿದೆ ಎಂದು ಹೇಳಿಕೆ ನೀಡಿದ್ದರು. ಇದು ಎಡಪಕ್ಷಗಳಿಗೆ ತೀವ್ರ ಮುಖಭಂಗ ತಂದಿದ್ದರೆ, ವಿರೋಧಪಕ್ಷಗಳಿಗೆ ಟೀಕೆಗೆ ಪ್ರಮುಖ ಅಸ್ತ್ರವಾಗಿದೆ.

ಇದರೊಂದಿಗೆ ಭಾರತ-ಅಮೆರಿಕ ಅಣು ಒಪ್ಪಂದವು ಕೂಡ ಎಡಪಕ್ಷಗಳು ಮತ್ತು ಯುಪಿಎ ಸರಕಾರದ ಮಧ್ಯೆ ಬಿರುಸಿನ ವಾಗ್ವಾದಕ್ಕೆ ಕಾರಣವಾಗಲಿದೆ. ಶುಕ್ರವಾರ ನೈಜ ಅಧಿವೇಶನ ಆರಂಭವಾಗಲಿದೆ. ಶುಕ್ರವಾರ ಪ್ರಶ್ನೋತ್ತರ ವೇಳೆಯನ್ನು ಅಮಾನತುಪಡಿಸಿ, ಅತ್ಯಂತ ಪ್ರಮುಖವಾದ ನಂದಿಗ್ರಾಮ ಹಿಂಸಾಚಾರ ವಿಷಯವನ್ನು ಚರ್ಚೆಗೆ ಎತ್ತಿಕೊಳ್ಳಬೇಕು ಎಂದು ಬಿಜೆಪಿ ಈಗಾಗಲೇ ಸ್ಪೀಕರ್‌ಗೆ ನೋಟಿಸ್ ಕಳುಹಿಸಿದೆ.

ರಾಜ್ಯಸಭೆಯಲ್ಲೂ ಭಾರತ-ಅಮೆರಿಕ ನಡುವಿನ ಪರಮಾಣು ಒಪ್ಪಂದದ ಕುರಿತು ಚರ್ಚೆ ನಡೆಸಲು ನ.19 -20ರಂದು ಅವಕಾಶ ನೀಡಬೇ ಕೆಂದು ಎಐಎಡಿಎಂಕೆ ರಾಜ್ಯಸಭೆ ಸೆಕ್ರೆಟೆರಿಯೆಟ್‌ಗೆ ನೋಟಿಸ್ ನೀಡಿರುವುದಾಗಿ ತಿಳಿಸಿದೆ.
ಮತ್ತಷ್ಟು
ನಂದಿಗ್ರಾಮ: ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಅವಕಾಶವಿಲ್ಲ
ನಂದಿಗ್ರಾಮ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ನಿತಾರಿ ಕೊಲೆ ಪ್ರಕರಣ : ತಿರುಗಿಬಿದ್ದ ಪ್ರಮುಖ ಸಾಕ್ಷಿ
ಚೆನ್ನೈಗೆ ಅಪ್ಪಳಿಸಿದ ಚಂಡಮಾರುತ: ಬಾರಿ ಹಾನಿ
ರಾಹುಲ್ ಅಪಹರಣಕ್ಕೆ ಸಂಚು: 3 ಉಗ್ರರ ಬಂಧನ
ನಂದಿಗ್ರಾಮದ ಪ್ರಸ್ತಾಪಕ್ಕೆ ಎಡರಂಗ ಅಡ್ಡಿ