ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಲ್ಲಾ ಹೆಸರಿನಲ್ಲಿ ಪ್ರಮಾಣ: ಸುಪ್ರೀಂಕೋರ್ಟ್ ಅಸ್ತು
PTI
"ದೇವನೊಬ್ಬನೇ, ನಾಮ ಹಲವು" ಎಂದು ಸುಪ್ರೀಂಕೋರ್ಟ್ ಶುಕ್ರವಾರ ತಿಳಿಸಿ "ಅಲ್ಲಾ" ಹೆಸರಿನಲ್ಲಿ ಶಾಸಕರು ಪ್ರಮಾಣವಚನ ಸ್ವೀಕರಿಸಿದ ಕಾನೂನುಬದ್ಧತೆ ಪ್ರಶ್ನಿಸಿದ ಅರ್ಜಿಯನ್ನು ತಳ್ಳಿಹಾಕಿದ್ದಾರೆ. ದೇವರನ್ನು ಯಾವುದೇ ಹೆಸರಿನಲ್ಲಿ ಕರೆದರೂ ಒಂದೇ ಅರ್ಥವೆಂದು ಸುಪ್ರೀಂಕೋರ್ಟ್ ಬುದ್ಧಿವಾದ ಹೇಳಿ ಅಲ್ಲಾ ಹೆಸರಿನಲ್ಲಿ ಶಾಸಕರು ಮತ್ತು ಸಂಸದರು ಪ್ರಮಾಣವಚನ ಸ್ವೀಕರಿಸುವುದು ಸಾಂವಿಧಾನಿಕವಾಗಿ ಕಾನೂನುಬದ್ಧ ಎಂದು ಆದೇಶಿಸಿತು.

ಅಲ್ಲಾ ಎಂದರೆ ದೇವರ ಅರೇಬಿಕ್ ಪದ. ಅದರಲ್ಲಿ ಸಮಸ್ಯೆಯೇನಿದೆ ಎಂದು ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಮತ್ತು ರವೀಂದ್ರನ್ ಅವರಿದ್ದ ಪೀಠ ಪ್ರಶ್ನಿಸಿದೆ. ಕೇರಳದಲ್ಲಿ ಕಳೆದ ವರ್ಷ ಮುಸ್ಲಿಂ ಲೀಗ್‌ಗೆ ಸೇರಿದ 11 ಶಾಸಕರು ಅಲ್ಲಾ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದನ್ನು ಎತ್ತಿಹಿಡಿದ ಕೆಳಕೋರ್ಟ್ ಆದೇಶದ ವಿರುದ್ಧ ಭಾರತೀಯ ಜನತಾ ಯುವಮೋರ್ಚಾ ಅಧ್ಯಕ್ಷ ಮಧು ಪರುಮಳ ಅರ್ಜಿ ಸಲ್ಲಿಸಿದ್ದರು.

"ನಾನು ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತೇನೆ" ಎಂದು ಶಾಸಕರು ಹೇಳಬೇಕೆಂದು ಸಂವಿಧಾನದ 188ನೇ ವಿಧಿ ಮತ್ತು ಮೂರನೇ ಅನುಚ್ಛೇದದಲ್ಲಿ ಉಲ್ಲೇಖಿಸಲಾಗಿದ್ದು, 11 ಶಾಸಕರ ಸದಸ್ಯತ್ವವನ್ನು ರದ್ದುಮಾಡಬೇಕೆಂದು ಅರ್ಜಿದಾರರು ಕೋರಿದ್ದರು.

ಶ್ರೀ ನಾರಾಯಣ ಗುರು ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದ ಕೇರಳ ಶಾಸಕರೊಬ್ಬರ ವಿರುದ್ಧದ ಅರ್ಜಿ ಕೋರ್ಟ್‌ನಲ್ಲಿ ಇನ್ನೂ ಬಾಕಿವುಳಿದಿದ್ದು, ಶಾಸಕರು ವ್ಯಕ್ತಿಯೊಬ್ಬರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಬಹುದೇ ಎಂದು ಕೋರ್ಟ್ ನಿರ್ಧರಿಸಲಿರುವುದು ಏತನ್ಮಧ್ಯೆ ಆಸಕ್ತಿ ಕೆರಳಿಸಿದೆ.
ಮತ್ತಷ್ಟು
ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ
ನಂದಿಗ್ರಾಮ: ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಅವಕಾಶವಿಲ್ಲ
ನಂದಿಗ್ರಾಮ: ಸರ್ಕಾರಕ್ಕೆ ಹೈಕೋರ್ಟ್ ತರಾಟೆ
ನಿತಾರಿ ಕೊಲೆ ಪ್ರಕರಣ : ತಿರುಗಿಬಿದ್ದ ಪ್ರಮುಖ ಸಾಕ್ಷಿ
ಚೆನ್ನೈಗೆ ಅಪ್ಪಳಿಸಿದ ಚಂಡಮಾರುತ: ಬಾರಿ ಹಾನಿ
ರಾಹುಲ್ ಅಪಹರಣಕ್ಕೆ ಸಂಚು: 3 ಉಗ್ರರ ಬಂಧನ