ಭಾರತ-ಅಮೆರಿಕ ಪರಮಾಣು ಒಪ್ಪಂದದ ಹಿನ್ನೆಲೆಯಲ್ಲಿ ಭಾರತದ ನಿರ್ದಿಷ್ಟ ಸುರಕ್ಷತೆ ಒಪ್ಪಂದಗಳನ್ನು ರೂಪಿಸಲು ಅಂತಾರಾಷ್ಯ್ರೀಯ ಅಣುಶಕ್ತಿ ಸಂಸ್ಥೆಯನ್ನು ತಾನು ಸಂಪರ್ಕಿಸುವುದಾಗಿ ಸರ್ಕಾರ ಶುಕ್ರವಾರ ಪ್ರಕಟಿಸಿದೆ.
ಪರಮಾಣು ಒಪ್ಪಂದದ ಅನುಷ್ಠಾನದ ಕುರಿತು ಐಎಇಎ ಜತೆ ಸಂಪರ್ಕಕ್ಕೆ ಎಡರಂಗ ಹಸಿರುನಿಶಾನೆ ತೋರಿಸಿದ್ದರಿಂದ ಸರ್ಕಾರಕ್ಕೆ ಐಎಇಎ ಸಂಪರ್ಕಿಸಲು ಇದ್ದ ಅಡ್ಡಿನಿವಾರಣೆಯಾಗಿದೆ.
ಆದರೆ ಐಎಇಎ ಜತೆ ಮಾತುಕತೆಯ ಫಲಿತಾಂಶವನ್ನು ಅದು ಯುಪಿಎ-ಎಡರಂಗ ಸಮಿತಿಯ ಎದುರು ಪರಿಶೀಲನೆಗೆ ಮಂಡಿಸಲಿದೆ.ಯುಪಿಎ ಮತ್ತು ಎಡಪಕ್ಷಗಳ ಜತೆ ಮಾತುಕತೆ ಬಳಿಕ ವಿದೇಶಾಂಗ ಕಾರ್ಯದರ್ಶಿ ಪ್ರಣಬ್ ಮುಖರ್ಜಿ ಈ ಪ್ರಕಟಣೆ ನೀಡಿದ್ದಾರೆ.
ಇನ್ನಷ್ಟು ಚರ್ಚೆಯ ಬಳಿಕ ಹೈಡ್ ಕಾಯ್ದೆಯ ನಿಯಮಗಳು ಮತ್ತು ಐಎಇಎ ಸುರಕ್ಷತೆ ಒಪ್ಪಂದದ ಮೇಲೆ 123 ಒಪ್ಪಂದದ ಪರಿಣಾಮವನ್ನು ಪರಿಶೀಲಿಸಲು ನಿರ್ಧರಿಸಲಾಯಿತು ಎಂದು ಅವರು ಹೇಳಿದರು.
|