ಆಡಳಿತಾರೂಢ ಎಡ ಪಕ್ಷಕ್ಕೆ ಪರ್ಯಾಯವಾಗಿ ಸಿಪಿಐ(ಎಂ) ಜಾತ್ಯಾತೀತ ವಿರೋಧಿ ಸಂಘಟನೆಯನ್ನು ಸ್ಥಾಪಿಸಲು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ.
ಸಿಪಿಐ(ಎಂ) ವಿರೋಧಿ ಸಂಘಟನೆಯನ್ನು ಸ್ಥಾಪಿಸಲು ಎಲ್ಲಾ ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವವಾದಿ ಪಡೆಗಳನ್ನು ಕೇಳಿಕೊಂಡಿದ್ದೇನೆ ಎಂದು ಮಮತಾ ಬ್ಯಾನರ್ಜಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮಾರ್ಚ್ 14ರಂದು ನಂದಿಗ್ರಾಮದಲ್ಲಿ ಉಂಟಾದ ಅನಾಹುತದಲ್ಲಿ ಮೃತರಾದವರ ಕುಟುಂಬಕ್ಕೆ ಸರಕಾರವು ಪರಿಹಾರನಿಧಿಯನ್ನು ನೀಡಬೇಕೆಂಬ ಉಚ್ಛನ್ಯಾಯಾಲಯದ ತೀರ್ಪನ್ನು ಅಭಿನಂದಿಸುವ ಸಂದರ್ಭದಲ್ಲಿ, ತನ್ನ ಆಡಳಿತವನ್ನು ಮುಂದುವರಿಸಲು ರಾಜ್ಯ ಸರಕಾರವು ಯಾವುದೇ ನೈತಿಕ, ಸಂವಿಧಾನಾತ್ಮಿಕ ಮತ್ತು ರಾಜಕೀಯ ಹಕ್ಕನ್ನು ಹೊಂದಿಲ್ಲ, ಪ್ರಜಾಪ್ರಭುತ್ವವನ್ನು ಉಳಿಸಲು ಈ ಸರಕಾರವನ್ನು ಕೂಡಲೇ ವಜಾ ಮಾಡಬೇಕೆಂದು ಹೇಳಿದರು.
ಪ್ರಸ್ತಾಪಿಸಿದ ಪಕ್ಷದ ಮಪನ್ನಡೆಗೆ ಯಾವುದೇ ಪಕ್ಷದ ವಿರೋಧವಿದ್ದಲ್ಲಿ, ಇತರ ಯಾವುದೇ ಪಕ್ಷದ ನಾಯಕತ್ವವನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ಅವರು ಹೇಳಿದರು.
|