ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಚತ್ತೀಸ್‌ಗಢ್: ಭೂಮಿ ವಶ ಟಾಟಾ ವಿರುದ್ಧ ಪ್ರತಿಭಟನೆ
ಕೈಗಾರೀಕರಣದ ಹೆಸರಲ್ಲಿ ರೈತರ ಭೂಮಿಯನ್ನು ವಶಪಡಿಸಿಕೊಂಡ ಪ್ರಕರಣದಲ್ಲಿ ಪಶ್ಚಿಮಬಂಗಾಲದ ನಂದಿಗ್ರಾಮ ಹಿಂಸಾಚಾರದಿಂದ ನಲುಗಿಹೋಗಿರುವ ಬೆನ್ನಲ್ಲೇ ಇದೀಗ ಚತ್ತೀಸ್‌ಗಢದ ಬಸ್ತಾರ್ ಜಿಲ್ಲೆಯ ರೈತರು ಟಾಟಾ ವಿರುದ್ಧ ಸಮರಕ್ಕೆ ಸಜ್ಜಾಗಿದ್ದಾರೆ.

ನಂದಿಗ್ರಾಮದಲ್ಲಿ ಆಡಳಿತರೂಢ ಎಡಪಕ್ಷಗಳ ಕೃಪಾಪೋಷಿತದಲ್ಲಿ ಯುದ್ಧವಲಯವಾಗಿ, ಭೂಮಿ ಉಚ್ಚೇಧ್ ಪ್ರತಿರೋಧ್ ಕಮಿಟಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ರಣರಂಗಕ್ಕೆ ಇಳಿದ ಪರಿಣಾಮ ನಂದಿಗ್ರಾಮದಲ್ಲಿ ರಕ್ತದ ಓಕುಳಿ ಹರಿದಿತ್ತು. ರೈತರು ಭೂಮಿಗಾಗಿ ಪರದಾಡುತ್ತಿದ್ದರೆ, ಮತ್ತೊಂದೆಡೆ ಶಸ್ತ್ರಾಸ್ತ್ರ ಹಿಡಿದು ಹಿಂಸಾಚಾರಕ್ಕೆ ಇಳಿದಿದ್ದರು.

ಅದೇ ರೀತಿ ಚತ್ತೀಸ್‌ಗಢ್ ನಕ್ಸಲೀಯರ ಪ್ರಾಬಲ್ಯ ಹೊಂದಿರುವ ನೆಲೆಯಲ್ಲಿ ಇಲ್ಲಿನ ರೈತರು ಇದೀಗ ಆಯುಧಗಳನ್ನು ಹಿಡಿದು ಟಾಟಾ ಕಂಪೆನಿ ವಿರುದ್ಧ ಹೋರಾಡಲು ಅಣಿಯಾಗಿದ್ದಾರೆ.

ಟಾಟಾ ಕಂಪೆನಿಯ ಕೋರ್ ಸ್ಟೀಲ್ ಪ್ಲಾಂಟೇಶನ್‌ ನಿರ್ಮಾಣಕ್ಕಾಗಿ ಸರಕಾರ ಬಲವಂತದಿಂದ ರೈತರ ಭೂಮಿಯನ್ನು ವಶಪಡಿಸಿಕೊಳ್ಳುತ್ತಿರು ವುದಾಗಿ ಬಸ್ತಾರ್ ಜಿಲ್ಲೆಯ ರೈತರು ಆರೋಪಿಸಿದ್ದಾರೆ.

ಟಾಟಾ ಯೋಜನೆಗೆ 4000 ಸಾವಿರ ಎಕರೆ ಜಮೀನು ಅಗತ್ಯವಿದ್ದು, ಅದಕ್ಕಾಗಿ ಬಸ್ತಾರ್ ಜಿಲ್ಲೆಯ 10ಗ್ರಾಮಗಳನ್ನು ವಶಪಡಿಸಿಕೊಳ್ಳಲು ಸರಕಾರ ಮುಂದಾಗಿದೆ.

ರೈತರು ಸರಕಾರ ಹಾಗೂ ಪೊಲೀಸರ ವಿರುದ್ಧ ತಿರುಗಿ ಬಿದ್ದಿದ್ದು, ಅವರ ವಿರುದ್ಧವೇ ಪ್ರತಿಭಟನೆಗೆ ಇಳಿದಿದ್ದಾರೆ. ನಮಗೆ ನಮ್ಮ ಜಮೀನು ಬೇಕು, ಬಲವಂತದಿಂದ ಬೀದಿಪಾಲು ಮಾಡಬೇಡಿ ಎಂಬ ಕೂಗಿನೊಂದಿಗೆ ಚತ್ತೀಸ್‌ಗಢ್ ಸರಕಾರದ ಮೇಲೆ ಸಮರ ಸಾರಿದ್ದಾರೆ.

ಬಸ್ತಾರ್ ನಾಗರಿಕರು ಪೊಲೀಸರ ಮೇಲೆ ದಾಳಿ ನಡೆಸಿದ್ದು, ಒಬ್ಬ ಪೊಲೀಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಪೊಲೀಸರು ನಮಗೆ ಬೆದರಿಕೆ ಹಾಕಿದ್ದಾರೆ, ಜನರು ಟಾಟಾ ಯೋಜನೆಯನ್ನು ವಿರೋಧಿಸುವ ಮೂಲಕ ನಾವು ಇಲ್ಲಿಯೇ ನೆಲೆಸುತ್ತೇವೆ ಮತ್ತು ಇಲ್ಲಿಯೇ ಸಾವನ್ನಪ್ಪಲು ಸಿದ್ಧವಾಗಿದ್ದೇವೆ ಎಂದು ಬಸ್ತಾರ್ ಜನರು ಹೇಳಿದ್ದಾರೆ.
ಮತ್ತಷ್ಟು
ಎಐಸಿಸಿ ಅಧಿವೇಶನ ಇಂದು ಆರಂಭ
ಸಿಪಿಐ(ಎಂ) ವಿರೋಧಿ ಸಂಘಟನೆಗೆ ಕರೆ
ಐಎಇಎ ಸಂಪರ್ಕಿಸಲು ಸರ್ಕಾರ ನಿರ್ಧಾರ
ಅಲ್ಲಾ ಹೆಸರಿನಲ್ಲಿ ಪ್ರಮಾಣ: ಸುಪ್ರೀಂಕೋರ್ಟ್ ಅಸ್ತು
ಶ್ರದ್ಧಾಂಜಲಿ: ಕಲಾಪ ನಾಳೆಗೆ ಮುಂದೂಡಿಕೆ
ನಂದಿಗ್ರಾಮ: ಸಂಸತ್ತಿನಲ್ಲಿ ಪ್ರಸ್ತಾಪಕ್ಕೆ ಅವಕಾಶವಿಲ್ಲ