ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಿಜೆಪಿ ವಿನಾಶಕಾರಿ: ಸೋನಿಯಾ ಟೀಕೆ
PTI
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಶನಿವಾರ ಬೆಳಿಗ್ಗೆ ನವದೆಹಲಿಯಲ್ಲಿ ಆರಂಭವಾದ ಎಐಸಿಸಿ ಅಧಿವೇಶನದಲ್ಲಿ ಭಾಷಣ ಮಾಡುತ್ತಾ, ಪ್ರತಿಪಕ್ಷ ಬಿಜೆಪಿ ವಿನಾಶಕಾರಿ ಆಗಿರುವುದರ ವಿರುದ್ಧ ಟೀಕಿಸಿದ್ದಾರೆ. ಕಾಂಗ್ರೆಸ್ ಪ್ರತಿಪಕ್ಷದಲ್ಲಿದ್ದಾಗ ಬಿಜೆಪಿಯನ್ನು ಬೆಂಬಲಿಸಿದ ರೀತಿಯಲ್ಲಿ ರಾಷ್ಟ್ರೀಯ ಹಿತಾಸಕ್ತಿ ವಿಷಯಗಳಿಗೆ ಸಂಬಂಧಪಟ್ಟಂತೆ ಬಿಜೆಪಿ ಯುಪಿಎ ಸರ್ಕಾರವನ್ನು ಬೆಂಬಲಿಸುತ್ತಿಲ್ಲ ಎಂದು ಆರೋಪಿಸಿದರು.

ಪ್ರಧಾನಮಂತ್ರಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿಯ ವಾಗ್ದಾಳಿಯ ಬಗ್ಗೆ ಅವರು ಪ್ರತಿಕ್ರಿಯಿಸುತ್ತಾ, ಕೇಸರಿ ಪಕ್ಷದ ನಡವಳಿಕೆಯನ್ನು ಖಂಡಿಸಲು ಬಲವಾದ ಪದಗಳೇ ಸಿಗುತ್ತಿಲ್ಲ ಎಂದು ಹೇಳಿದರು. ಅ.2ನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನವನ್ನಾಗಿ ಘೋಷಿಸಿದ ವಿಶ್ವಸಂಸ್ಥೆಯ ಕ್ರಮವನ್ನು ಅವರು ಸ್ವಾಗತಿಸಿದರು. ಸ್ವತಃ ಗಾಂಧಿ ಹುಟ್ಟಿದ ರಾಷ್ಟ್ರದಲ್ಲೇ ಅವರ ತತ್ವಗಳನ್ನು, ಆದರ್ಶಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಟೀಕಿಸಿದರು.

ಭಾರತ-ಅಮೆರಿಕ ಪರಮಾಣು ಒಪ್ಪಂದಕ್ಕೆ ದೃಢವಾದ ಬೆಂಬಲ ವ್ಯಕ್ತಪಡಿಸುತ್ತಾ, ಅದು ಭಾರತದ ಅಣು ಕಾರ್ಯಕ್ರಮದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದರು. ಈ ಒಪ್ಪಂದದಿಂದ ರಾಷ್ಟ್ರಕ್ಕೆ ಇಂಧನ ಮತ್ತು ತಂತ್ರಜ್ಞಾನದ ಸರಬರಾಜಿಗೆ ಸಹಾಯವಾಗುತ್ತದೆ ಮತ್ತು ಕ್ಷಿಪ್ರ ಬೆಳವಣಿಗೆಗಾಗಿ ಅತೀ ಅಗತ್ಯವಾದ ವಿದ್ಯುಚ್ಛಕ್ತಿಯನ್ನು ಪಡೆಯಲು ನೆರವಾಗುತ್ತದೆ ಎಂದು ಅವರು ನುಡಿದರು.
ಮತ್ತಷ್ಟು
ರಾಹುಲ್ ಅಪಹರಣಕ್ಕೆ ಯೋಜನೆ: ಉಗ್ರರ ತಪ್ಪೊಪ್ಪಿಗೆ
ಚತ್ತೀಸ್‌ಗಢ್: ಭೂಮಿ ವಶ ಟಾಟಾ ವಿರುದ್ಧ ಪ್ರತಿಭಟನೆ
ಎಐಸಿಸಿ ಅಧಿವೇಶನ ಇಂದು ಆರಂಭ
ಸಿಪಿಐ(ಎಂ) ವಿರೋಧಿ ಸಂಘಟನೆಗೆ ಕರೆ
ಐಎಇಎ ಸಂಪರ್ಕಿಸಲು ಸರ್ಕಾರ ನಿರ್ಧಾರ
ಅಲ್ಲಾ ಹೆಸರಿನಲ್ಲಿ ಪ್ರಮಾಣ: ಸುಪ್ರೀಂಕೋರ್ಟ್ ಅಸ್ತು