ಡಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪೊಂಡಿ ಕಲೈಸೆಲ್ವನ್ ಅವರನ್ನು ಬಾಂಬ್ ಸ್ಪೋಟಿಸಿ ಸ್ವಗೃಹದಲ್ಲಿ ಹತ್ಯೆಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ
ಡಿಎಂಕೆ ಪಕ್ಷದ ಜಿಲ್ಲಾ ಕಾರ್ಯದರ್ಶಿ ಪೊಂಡಿ ಕಲೈಸೆಲ್ವನ್ ಅವರು ತಮ್ಮ ಭೇಟಿಗಾಗಿ ಬಂದ ಕೆಲವರ ಜೊತೆ ಸಂವಾದ ನಡೆಸುತ್ತಿರುವಾಗಲೇ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೂಡಲೇ ಕಾರ್ಯಪ್ರವ್ರತ್ತರಾದ ಪೊಲೀಸರು ಗಾಯಾಳು ಪೊಂಡಿ ಕಲೈಸೆಲ್ವನ್ ಅವರನ್ನು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ತಿರುವರೂರ್ ಮುಖ್ಯಮಂತ್ರಿ ಕರುಣಾನಿಧಿ ಅವರ ತವರೂರಾಗಿದ್ದರಿಂದ ಪೊಂಡಿ ಕಲೈಸೆಲ್ವನ್ ಅವರ ಹತ್ಯೆ ಸಹಜವಾಗಿ ಜಿಲ್ಲೆಯಾದ್ಯಂತ ಉದ್ರಿಕ್ತ ವಾತಾವರಣ ಉಂಟು ಮಾಡಿತ್ತು. ಇದರಿಂದಾಗಿ ಶಾಲಾಕಾಲೇಜ್‌ಗಳು ಅಂಗಡಿ ಮುಗ್ಗಟ್ಟುಗಳು ಬಂದ್ ಆಚರಿಸಿದವು.
|