ಇಲ್ಲಿನ ವಿಮಾನನಿಲ್ದಾಣದಲ್ಲಿ ಪೈಲಟ್ ಸಂಭವಿಸಬಹುದಾಗಿದ್ದ ಭೀಕರ ಅಪಘಾತವೊಂದು ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಘಟನೆ ಶನಿವಾರ ನಡೆದಿದೆ. ಸ್ಪೈಸ್ ಜೆಟ್ ವಿಮಾನದ ರೆಕ್ಕೆಯು ನಿಲ್ಲಿಸಿದ್ದ ಏರ್ ಡೆಕ್ಕನ್ ವಿಮಾನಕ್ಕೆ ತಾಗುವಷ್ಟರಲ್ಲಿ ಸ್ಪೈಸ್ ಜೆಟ್ ಪೈಲಜ್ ತಕ್ಷಣವೇ ಬ್ರೇಕ್ ಹಾಕಿದ್ದರಿಂದ ಭಾರೀ ಅಪಘಾತವೊಂದು ತಪ್ಪಿದೆ.
ಎರಡೂ ವಿಮಾನಗಳಲ್ಲಿ ಒಟ್ಟು 324 ಪ್ರಯಾಣಿಕರಿದ್ದರು. ಸ್ಪೈಸ್ ಜೆಟ್ ವಿಮಾನದ ಬಲಭಾಗದ ರೆಕ್ಕೆಯು ಏರ್ ಡೆಕ್ಕನ್ ವಿಮಾನದ ಎಡರೆಕ್ಕೆಗೆ ಬಡಿದು ಭಾರೀ ಅನಾಹುತ ಸಂಭವಿಸುವುದು ಕೂದಲೆಳೆಯ ಅಂತರದಿಂದ ತಪ್ಪಿತು.
ಸ್ಪೈಸ್ ಜೆಟ್ ವಿಮಾನವನ್ನು ಇನ್ನೇನು ಚಾಲನೆ ಮಾಡಬೇಕೆಂನ್ನುವಷ್ಟರಲ್ಲಿ ಪೈಲಟ್‌ಗೆ ಅಪಘಾತದ ಮುನ್ಸೂಚನೆ ಸಿಕ್ಕಿ ಕೂಡಲೇ ವಿಮಾನಕ್ಕೆ ಬ್ರೇಕ್ ಹಾಕಿದರೆಂದು ಹೇಳಲಾಗಿದೆ.
|