ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಅಣುಬಂಧ ವಿರೋಧ ನಿಲುವಲ್ಲಿ ಮಾರ್ಪಾಟಿಲ್ಲ:ಕಾರಟ್
PTI
ಐಎಇಎ ಜತೆ ಪರಮಾಣು ಸುರಕ್ಷತೆ ಮಾತುಕತೆಗೆ ಸರ್ಕಾರಕ್ಕೆ ಅವಕಾಶ ನೀಡಿದ ಮರುದಿನವೇ ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ವಿರೋಧಿಸುವ ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಿಪಿಎಂ ಶನಿವಾರ ತಿಳಿಸಿದೆ. ಎಡಪಕ್ಷವು ಈ ಒಪ್ಪಂದವನ್ನು ವಿರೋಧಿಸಲು ದೃಢನಿರ್ಧಾರ ಹೊಂದಿದ್ದು, ಅಣುಬಂಧ ನಮ್ಮ ರಾಷ್ಟ್ರಕ್ಕೆ ಒಳ್ಳೆಯದಲ್ಲ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದರು.

ಇದು ಸಮ್ಮಿಶ್ರ ಸರ್ಕಾರವೆಂಬುದನ್ನು ಯುಪಿಎ ಮರೆಯಬಾರದು ಎಂದು ಜ್ಞಾಪಿಸಿದ ಅವರು, ಬಹುತೇಕ ರಾಜಕೀಯ ಪಕ್ಷಗಳು ಮತ್ತು ಸಂಸತ್ ಸದಸ್ಯರು ಒಪ್ಪಂದದ ಅನುಷ್ಠಾನಕ್ಕೆ ಇಷ್ಟಪಟ್ಟಿಲ್ಲ ಎಂಬುದನ್ನು ಗಮನಕ್ಕೆ ತಂದರು. ಒಪ್ಪಂದ ಅನುಷ್ಠಾನಕ್ಕೆ ತರುವ ಅಂತಾರಾಷ್ಟ್ರೀಯ ಬದ್ಧತೆಯ ಬಗ್ಗೆ ಅವರನ್ನು ಪ್ರಶ್ನಿಸಿದಾಗ, ಯಾವುದೇ ಒಪ್ಪಂದವನ್ನು ಸಂಸತ್ ಮತ್ತು ದೇಶದ ಹಿತಾಸಕ್ತಿಗಿಂತ ಮೇಲುಸ್ಥಾನದಲ್ಲಿ ಇಡಲು ಸಾಧ್ಯವಿಲ್ಲ ಎಂದು ನುಡಿದರು.

ಯೋಜಿತ ಭಾರತ-ರಷ್ಯಾ ಒಪ್ಪಂದಕ್ಕೆ ಪ್ರಧಾನಿ ಮನಮೋಹನ ಸಿಂಗ್ ಅವರ ಭೇಟಿಯ ಸಂದರ್ಭದಲ್ಲಿ ಸಹಿ ಹಾಕಲಿಲ್ಲವೇಕೆಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅಮೆರಿಕನ್ನರಿಗೆ ಬೇಸರ ತರಿಸುವ ಯಾವ ಕೆಲಸವನ್ನೂ ಸರ್ಕಾರ ಮಾಡುವುದಿಲ್ಲ ಎಂದು ಹೇಳಿದರು.

ನಾವು ದ್ವಿಪಕ್ಷೀಯ ಒಪ್ಪಂದವಾದ ಐಎಇಎ ಒಪ್ಪಂದದ ಮೇಲೆ ಪೂರ್ಣವಾಗಿ ಏಕೆ ನಂಬಿದ್ದೇವೆ ಎಂದು ಪ್ರಶ್ನಿಸಿದ ಅವರು, ಭಾರತದಿಂದ ಭವಿಷ್ಯದ ಪರಮಾಣು ಒಪ್ಪಂದಗಳಿಗೆ ತಡೆವಿಧಿಸುವ ರಷ್ಯದ ಹೈಡ್ ಕಾಯ್ದೆ ಇಲ್ಲವೆಂದು ಹೇಳಿದರು.
ಮತ್ತಷ್ಟು
ವಿಮಾನ ಅಪಘಾತದಿಂದ ಪಾರು
ಬಾಂಬ್ ಸ್ಪೋಟ:ಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹತ್ಯೆ
ರೈತರ ಸ್ಥಿತಿ ಸುಧಾರಣೆಗೆ ಕ್ರಮ: ಪ್ರಧಾನಿ
ಬಿಜೆಪಿ ವಿನಾಶಕಾರಿ: ಸೋನಿಯಾ ಟೀಕೆ
ರಾಹುಲ್ ಅಪಹರಣಕ್ಕೆ ಯೋಜನೆ: ಉಗ್ರರ ತಪ್ಪೊಪ್ಪಿಗೆ
ಚತ್ತೀಸ್‌ಗಢ್: ಭೂಮಿ ವಶ ಟಾಟಾ ವಿರುದ್ಧ ಪ್ರತಿಭಟನೆ