ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಂಸತ್ತಿನಲ್ಲಿ ನಂದಿಗ್ರಾಮ ಧ್ವನಿ:ಜೋಶಿ
ಪಶ್ಚಿಮ ಬಂಗಾಲ ಆಢಳಿತಾರೂಢ ಸಿಪಿಐ(ಎಂ) ಮೇಲೆ ಕಾಂಗ್ರೆಸ್ ಹೇರುತ್ತಿರುವ ಒತ್ತಡ ಮತ್ತು ನಂದಿಗ್ರಾಮದಲ್ಲಿ ನಡೆಯುತ್ತಿರುವ ಹಿಂಸಾಚಾರದ ಕುರಿತು ಕೇಂದ್ರವು ಮೌನವಹಿಸರುವುದರ ಬಗ್ಗೆ, ಸೋಮವಾರ ನಡೆಯಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿಯು ಧ್ವನಿಎತ್ತಲಿದೆ.

ನಂದಿಗ್ರಾಮ ವಿಚಾರದಲ್ಲಿ ಚರ್ಚೆ ನಡೆಸುವ ಬಗ್ಗೆ ಹಿರಿಯ ಬಿಜೆಪಿ ನಾಯಕ ಮುರ್ಲಿ ಮನೋಹರ್ ಜೋಶಿ ಈಗಾಗಲೇ ಸೂಚಿಸಿದ್ದು, ಲೋಕಸಭೆ ಮತ್ತು ರಾಜ್ಯಸಭೆ ಎರಡರಲ್ಲಿಯೂ ತನ್ನ ಪಕ್ಷವು, ನಂದಿಗ್ರಾಮ ಘರ್ಷಣೆಯ ಬಗ್ಗೆ ಕಾಂಗ್ರೆಸ್ ಮೌನ ತಾಳಿರುವುದರ ಕುರಿತು ಚರ್ಚೆ ನಡೆಸಲು ಬಯಸುತ್ತದೆ ಎಂದು ಅವರು ಹೇಳಿದ್ದಾರೆ.

ನಂದಿಗ್ರಾಮ ವಿವಾದದ ಬಗ್ಗೆ ಕಾಂಗ್ರೆಸ್ ಮೌನವಹಿಸಿರುವುದು ತುಂಬಾ ಆಶ್ಚರ್ಯಕರ ವಿಷಯವಾಗಿದೆ .ಕೇಂದ್ರದಲ್ಲಿ ಯುಪಿಎ ಸರಕಾರವು ಸಿಪಿಐ(ಎಂ)ಗೆ ಬೆಂಬಲ ನೀಡಿದ ಪರಿಣಾಮವಾಗಿ, ನಂದಿಗ್ರಾಮವನ್ನು ಯುದ್ಧವಲಯವನ್ನಾಗಿ ಮಾಡಿದ ಇದರ ಕಾರ್ಯಕರ್ತರನ್ನು ಕ್ಷಮಿಸಲಾಗದು ಎಂದು ಜೋಶಿ ಭುವನೇಶ್ವರದಲ್ಲಿ ಸುದ್ದಿಗಾರರೊಂದಿಗೆ ಹೇಳಿದ್ದಾರೆ.

ಯಾವುದೇ ಕಾಂಗ್ರೆಸ್ ಪಕ್ಷದ ನಾಯಕರಾಗಲೀ, ಸೋನಿಯಾಗಾಂಧಿಯಾಗಲೀ ಅಥವಾ ಮನಮೋಹನ್ ಸಿಂಗ್ ಆಗಲೀ ನಂದಿಗ್ರಾಮಕ್ಕೆ ಭೇಟಿ ನೀಡಿಲ್ಲ ಎಂದು ಅವರು ಹೇಳಿದರು.
ಮತ್ತಷ್ಟು
ಕಾಂಗ್ರೆಸ್ ಜಾತ್ಯತೀತ ನಿಲುವಿಗೆ ಬದ್ಧ:ಸೋನಿಯಾ
ನಂದಿಗ್ರಾಮದಲ್ಲಿ ಅತ್ಯಾಚಾರ ಬೆಳಕಿಗೆ
ಅಣುಬಂಧ ವಿರೋಧ ನಿಲುವಲ್ಲಿ ಮಾರ್ಪಾಟಿಲ್ಲ:ಕಾರಟ್
ವಿಮಾನ ಅಪಘಾತದಿಂದ ಪಾರು
ಬಾಂಬ್ ಸ್ಪೋಟ:ಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹತ್ಯೆ
ರೈತರ ಸ್ಥಿತಿ ಸುಧಾರಣೆಗೆ ಕ್ರಮ: ಪ್ರಧಾನಿ