ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಜೆಡಿಎಸ್ ದ್ರೋಹ; ಪ್ರಜಾಸತ್ತೆಗೆ ಕಪ್ಪು ಚುಕ್ಕೆ: ಬಿಜೆಪಿ
ಒತ್ತಡಕ್ಕೆ ಮಣಿಯದಿದ್ದರೆ ವಿಶ್ವಾಸಮತದ ಪರವಾಗಿ ಮತ ಚಲಾಯಿಸುವುದಿಲ್ಲ ಎಂದು ಜೆಡಿಎಸ್ ಬೆದರಿಕೆಯೊಡ್ಡಿದ ಬಳಿಕ ಯಡಿಯೂರಪ್ಪ ನೇತೃತ್ವದ ಅಸ್ಥಿರ ಸರಕಾರವು ಪತನದ ಅಂಚಿಗೆ ಬಂದು ನಿಂತಿರುವಂತೆಯೇ, ಜೆಡಿಎಸ್ ಮತ್ತೊಮ್ಮೆ ವಿಶ್ವಾಸದ್ರೋಹ ಮಾಡಿದೆ ಎಂದು ಬಿಜೆಪಿ ಕೆಂಡ ಕಾರಿದೆ.

ಜೆಡಿಎಸ್ ಹೇಳಿಕೆಯ ಹಿನ್ನೆಲೆಯಲ್ಲಿ ಸೋಮವಾರ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, "ಇದು ಪ್ರಜಾಪ್ರಭುತ್ವಕ್ಕೇ ಕಪ್ಪು ಚುಕ್ಕೆ. ಬಿಜೆಪಿಯು ಯಾವುದೇ ಬೆಲೆ ತೆತ್ತಾದರೂ ಜೆಡಿಎಸ್ ಒತ್ತಡ ತಂತ್ರಗಳಿಗೆ ಮಣಿಯುವುದಿಲ್ಲ. ನಾವು ಜನರ ಬಳಿ ಹೋಗಲು, ಚುನಾವಣೆ ಎದುರಿಸಲು ಸಿದ್ಧರಾಗಿದ್ದೇವೆ" ಎಂದು ಘೋಷಿಸಿದ್ದಾರೆ.

ಪಕ್ಷದ ಹಿರಿಯ ಮುಖಂಡ ಯಶವಂತ ಸಿನ್ಹಾ ಅವರು ಈಗಾಗಲೇ ಬೆಂಗಳೂರಿಗೆ ತೆರಳಿದ್ದು, ಯಡಿಯೂರಪ್ಪ ಅವರು ರಾಜೀನಾಮೆ ನೀಡುವ ಕುರಿತು ರಾಜ್ಯ ಘಟಕವೇ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಇದು ಸಮ್ಮಿಶ್ರ ರಾಜಕೀಯದ ಅತ್ಯಂತ ಕೊಳಕು ರೂಪ ಎಂದು ಕಿಡಿ ಕಾರಿದ ರಾಜನಾಥ್, ರಾಜ್ಯದಲ್ಲಿ ಸರಕಾರ ರಚನೆಯ ನಿರ್ಧಾರ ತೆಗೆದುಕೊಂಡದ್ದು ಬಿಜೆಪಿಯಲ್ಲ, ಬದಲಾಗಿ ಜೆಡಿಎಸ್ ಬೇಷರತ್ ಬೆಂಬಲ ಘೋಷಿಸಿದ ಕಾರಣದಿಂದಲೇ ಪಕ್ಷವು ಸರಕಾರ ರಚನೆಗೆ ಮುಂದಾಗಿತ್ತು ಎಂದು ನುಡಿದರು.
ಮತ್ತಷ್ಟು
ಸಂಸತ್ತಿನಲ್ಲಿ ನಂದಿಗ್ರಾಮ ಧ್ವನಿ:ಜೋಶಿ
ಕಾಂಗ್ರೆಸ್ ಜಾತ್ಯತೀತ ನಿಲುವಿಗೆ ಬದ್ಧ:ಸೋನಿಯಾ
ನಂದಿಗ್ರಾಮದಲ್ಲಿ ಅತ್ಯಾಚಾರ ಬೆಳಕಿಗೆ
ಅಣುಬಂಧ ವಿರೋಧ ನಿಲುವಲ್ಲಿ ಮಾರ್ಪಾಟಿಲ್ಲ:ಕಾರಟ್
ವಿಮಾನ ಅಪಘಾತದಿಂದ ಪಾರು
ಬಾಂಬ್ ಸ್ಪೋಟ:ಡಿಎಂಕೆ ಜಿಲ್ಲಾ ಕಾರ್ಯದರ್ಶಿ ಹತ್ಯೆ