ರಾಜಕೀಯ ಅಸ್ಥಿರತೆಯಿರುವ ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ವಿಧಾನಸಭೆ ವಿಸರ್ಜನೆಗೆ ಮಂಗಳವಾರ ಕೇಂದ್ರ ಸಂಪುಟವು ಶಿಫಾರಸು ಮಾಡಿದೆ.
ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರ ಶಿಫಾರಸುಗಳ ಬಗ್ಗೆ ಚರ್ಚೆ ನಡೆಸಿ ಈ ನಿರ್ಧಾರ ಕೈಗೊಳ್ಳಲಾಯಿತು.
ಈ ಅವಧಿಯಲ್ಲಿ ರಾಜ್ಯ ವಿಧಾನಸಭೆಯನ್ನು ಎರಡನೇ ಬಾರಿ ಅಮಾನತಿನಲ್ಲಿ ಇರಿಸಲಾಗುತ್ತಿದ್ದು, ವಿಧಾನಸಭೆ ವಿಸರ್ಜನೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಈ ವಿಷಯವನ್ನು ಇಂದು ಸಂಸತ್ತಿನ ಮುಂದಿಡಲಾಗುತ್ತದೆ.
|