ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮುಂಬೈಸ್ಪೋಟ: ದತ್ ಮನವಿ 27ಕ್ಕೆ ವಿಚಾರಣೆ
IFM
ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಸಂಜಯ್ ದತ್ ಅವರುಸರ್ವೊಚ್ಛನ್ಯಾಯಾಲಯಕ್ಕೆ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆಯನ್ನು ನ.27ಕ್ಕೆ ಮುಂದೂಡಿದೆ.

ಟಾಡಾ ನ್ಯಾಯಾಯಲ ನೀಡಿದ ತೀರ್ಪೀನ ವಿರುದ್ಧ ಮೇಲ್ಮನವಿ ಸಲ್ಲಿಸಿ, ದೀರ್ಘಾವಧಿ ಜಾಮೀನು ನೀಡಬೇಕೆಂಬ ಮನವಿಯನ್ನು ಸೋಮವಾರ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ವಿಚಾರಣೆಯನ್ನು ಈ ತಿಂಗಳ 27ಕ್ಕೆ ಮುಂದೂಡಿರುವುದಾಗಿ ತಿಳಿಸಿದೆ.

1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಅವರು ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಸ್ತ್ರಾಸ್ತ್ರ ಕಾಯ್ದೆಯನ್ವಯ ಟಾಡಾ ನ್ಯಾಯಾಲಯ ಆರು ವರ್ಷಗಳ ಕಠಿಣ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆದರೆ ಇತ್ತೀಚೆಗಷ್ಟೇ ಸರ್ವೊಚ್ಛನ್ಯಾಯಾಲಯ ಮಧ್ಯಂತರ ಜಾಮೀನು ನೀಡಿತ್ತು. ಅಕ್ಟೋಬರ್ 22ರಂದು ಟಾಡಾ ನ್ಯಾಯಾಲಯ ಶಿಕ್ಷೆ ತೀರ್ಪೀನ ಪ್ರತಿಯನ್ನು ನೀಡಿದ ಬಳಿಕ ಸಂಜಯ್ ಮತ್ತೆ ಪುಣೆಯ ಯೆರವಾಡ ಜೈಲು ಸೇರಿದ್ದರು.

ಇದೀಗ ಯೆರವಾಡ ಜೈಲಿನಲ್ಲಿ ಸಂಜಯ್ ಕಾಲ ಕಳೆಯುತ್ತಿದ್ದಾರೆ. ಈಗಾಗಲೇ 18ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು. ಆದರೆ ಟಾಡಾ ನ್ಯಾಯಾಲಯ ನೀಡಿರುವ ತೀರ್ಪೀನ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೇ ದೀರ್ಘಾವಧಿ ಜಾಮೀನು ನೀಡುವಂತೆ ಮನವಿಯಲ್ಲಿ ಕೋರಲಾಗಿತ್ತು. ಇದೀಗ ನ್ಯಾಯಾಲಯದ ನಿರ್ಧಾರದ ಮುಂದೂಡಿಕೆಯಿಂದ ದತ್ ಭವಿಷ್ಯ ನಿರ್ಧಾರಕ್ಕೆ ಮತ್ತೆ ತಡೆಯುಂಟಾಗಿದೆ.

ಸಂಜಯ್ ಜಾಮೀನು ಮನವಿಗೆ ಸಂಬಂಧಿಸಿದಂತೆ ಸಿಬಿಐ ಯಾವುದೇ ಪ್ರತಿಕ್ರಿಯೆಯನ್ನು ದಾಖಲಿಸಿಲ್ಲ. ಸಂಜಯ್ ದತ್ ಸೇರಿದಂತೆ ಆರೋಪಿಗಳಾದ ಯೂಸೂಫ್ ಮೊಹ್ಸಿನ್ ನುಲ್‌ವಾಲ್ಲಾ, ಜೈಬುನ್ನೀಸಾ ಅನ್ವರ್ ಖಾಜಿ ಹಾಗೂ ಸಮೀರ್ ಹಿಂಗೋರಾ ಜಾಮೀನು ಅರ್ಜಿಯ ವಿಚಾರಣೆಯೂ ಮುಂದೂಡಲ್ಪಟ್ಟಿದೆ.
ಮತ್ತಷ್ಟು
ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಮ್ಮತಿ
ಪುರುಷರ ವಿರುದ್ಧ ತಾರತಮ್ಯಕ್ಕೆ ಪ್ರತಿಭಟನೆ
ನಂದಿಗ್ರಾಮ: ಸಂಸತ್ ಗದ್ದಲ, ನಾಳೆಗೆ ಮುಂದೂಡಿಕೆ
ಜೆಡಿಎಸ್ ದ್ರೋಹ; ಪ್ರಜಾಸತ್ತೆಗೆ ಕಪ್ಪು ಚುಕ್ಕೆ: ಬಿಜೆಪಿ
ಸಂಸತ್ತಿನಲ್ಲಿ ನಂದಿಗ್ರಾಮ ಧ್ವನಿ:ಜೋಶಿ
ಕಾಂಗ್ರೆಸ್ ಜಾತ್ಯತೀತ ನಿಲುವಿಗೆ ಬದ್ಧ:ಸೋನಿಯಾ