ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿಗ್ರಾಮ ಹಿಂಸೆ:ಲೋಕಸಭೆಯಲ್ಲಿ ಗದ್ದಲ
PTI
ನಂದಿಗ್ರಾಮದ ಹಿಂಸಾಕಾಂಡದ ವಿಚಾರವು ಸಂಸತ್ತಿನಲ್ಲಿ ಎರಡನೇ ದಿನವಾದ ಮಂಗಳವಾರವೂ ಪ್ರತಿಧ್ವನಿಸಿತು. ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತಕ್ಷಣವೇ ನಂದಿಗ್ರಾಮದ ಘಟನೆಯನ್ನು ಚರ್ಚೆಗೆ ಎತ್ತಿಕೊಳ್ಳಬೇಕೆಂದು ಪ್ರತಿಪಕ್ಷ ಗದ್ದಲವೆಬ್ಬಿಸಿತು. ಪ್ರತಿಪಕ್ಷದ ಸದಸ್ಯರು ಗಟ್ಟಿಧ್ವನಿಯೊಂದಿಗೆ ಸಭಾಧ್ಯಕ್ಷರ ಪೀಠದ ಅಂಗಳಕ್ಕೆ ಧಾವಿಸಿ ಕೋಲಾಹಲ ಎಬ್ಬಿಸಿದಾಗ ಉಭಯಸದನಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

ಲೋಕಸಭೆಯಲ್ಲಿ ನಿಲುವಳಿ ಸೂಚನೆ ಮೂಲಕ ಮತ್ತು ರಾಜ್ಯಸಭೆಯಲ್ಲಿ ಅಲ್ಪಅವಧಿಯ ಚರ್ಚೆಯ ಮೂಲಕ ನಂದಿಗ್ರಾಮ ವಿಷಯವನ್ನು ಪ್ರಸ್ತಾಪಿಸಲು ಬಿಜೆಪಿ ಕೋರಿಕೊಂಡಿತ್ತು. ಸದನದ ಕಲಾಪ ಸ್ಥಗಿತಗೊಳಿಸುವ ಎನ್‌ಡಿಎ ಕಾರ್ಯತಂತ್ರದ ಬಗ್ಗೆ ಅಸಮ್ಮತಿ ವ್ಯಕ್ತಪಡಿಸಿದ ಅಧ್ಯಕ್ಷ ಸೋಮನಾಥ ಚಟರ್ಜಿ ನನಗೆ ಸದಸ್ಯರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ,ಕಳೆದ ಅಧಿವೇಶನದಲ್ಲಿ ಕೂಡ ಅರ್ಧಭಾಗದಷ್ಟು ಸಮಯ ನಷ್ಟವಾಯಿತು ಎಂದು ಹೇಳಿದರು.

ಸದನದ ಕಲಾಪ ನಡೆಸುವ ಮೂಲಕ ಸಾರ್ವಜನಿಕರ ಹಣ ನಷ್ಟ ಮಾಡುವುದರಲ್ಲಿ ಯಾವು ಅರ್ಥವೂ ಇಲ್ಲ ಎಂದು ಸ್ಪೀಕರ್ ಹೇಳಿದರು.ರಾಜ್ಯಸಭೆಯಲ್ಲಿ ಕೂಡ ಪರಿಸ್ಥಿತಿ ಭಿನ್ನವಾಗಿರಲಿಲ್ಲ. ರಾಜ್ಯಸಭೆಯಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ಸದನವನ್ನು ಮುಂದೂಡಲಾಯಿತು ಮತ್ತು ಬಳಿಕ ಶೂನ್ಯವೇಳೆಯಲ್ಲಿ ದಿನದ ಮಟ್ಟಿಗೆ ಮುಂದೂಡಲಾಯಿತು.
ಮತ್ತಷ್ಟು
ಉಪಾಹಾರ್ ದುರಂತ: ಅನ್ಸಾಲ್ ಸೋದರರು ತಪ್ಪಿತಸ್ಥರು
ಮುಂಬೈಸ್ಪೋಟ: ದತ್ ಮನವಿ 27ಕ್ಕೆ ವಿಚಾರಣೆ
ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಮ್ಮತಿ
ಪುರುಷರ ವಿರುದ್ಧ ತಾರತಮ್ಯಕ್ಕೆ ಪ್ರತಿಭಟನೆ
ನಂದಿಗ್ರಾಮ: ಸಂಸತ್ ಗದ್ದಲ, ನಾಳೆಗೆ ಮುಂದೂಡಿಕೆ
ಜೆಡಿಎಸ್ ದ್ರೋಹ; ಪ್ರಜಾಸತ್ತೆಗೆ ಕಪ್ಪು ಚುಕ್ಕೆ: ಬಿಜೆಪಿ