ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂದು ಸಂಸತ್ತಿನಲ್ಲಿ ನಂದಿಗ್ರಾಮ ಚರ್ಚೆ
ಸಂಸತ್ತಿನಲ್ಲಿ ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಯಲಿದ್ದು, ವಿರೋಧ ಪಕ್ಷ ಬಿಜೆಪಿ ಎಡಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಲು ಸಜ್ಜಾಗಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಇಂದಿನ ಚರ್ಚೆಯು ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ವಿಚಾರದಲ್ಲಿ ನಡೆಯಲಿದ್ದು, ಯಾವುದೇ ಕಾನೂನಿಗೆ ಸಂಬಂಧಪಟ್ಟ ಚರ್ಚೆಗೆ ಅವಕಾಶ ನೀಡಿಲ್ಲ ಎಂದು ಸಂಸತ್ತು ಮೂಲಗಳು ತಿಳಿಸಿವೆ.

ಪ್ರಶ್ನೋತ್ತರ ಅವಧಿಯ ನಂತರ ಈ ವಿವಾದದ ಬಗ್ಗೆ ಚರ್ಚೆ ನಡೆಯಲಿದ್ದು, ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಈ ನಂದಿಗ್ರಾಮದ ಕುರಿತು ಮಾತನಾಡಲಿದ್ದಾರೆ.

ಇಂದು ನಡೆಯುವ ಚರ್ಚೆಗೆ ಗೃಹ ಸಚಿವ ಶಿವರಾಜ್ ಪಾಟೀಲ್ ಉತ್ತರಿಸಲಿದ್ದಾರೆ. ವಿರೋಧಪಕ್ಷಗಳು ಸಂಸತ್ತಿನಲ್ಲಿ ನಡೆಸಿದ ಕೋಲಾಹಲಗಳ ನಂತರ ಈ ವಿವಾದದ ಬಗ್ಗೆ ಚರ್ಚೆ ನಡೆಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.
ಮತ್ತಷ್ಟು
ನಂದಿಗ್ರಾಮ ಹಿಂಸೆ:ಲೋಕಸಭೆಯಲ್ಲಿ ಗದ್ದಲ
ಉಪಾಹಾರ್ ದುರಂತ: ಅನ್ಸಾಲ್ ಸೋದರರು ತಪ್ಪಿತಸ್ಥರು
ಮುಂಬೈಸ್ಪೋಟ: ದತ್ ಮನವಿ 27ಕ್ಕೆ ವಿಚಾರಣೆ
ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಮ್ಮತಿ
ಪುರುಷರ ವಿರುದ್ಧ ತಾರತಮ್ಯಕ್ಕೆ ಪ್ರತಿಭಟನೆ
ನಂದಿಗ್ರಾಮ: ಸಂಸತ್ ಗದ್ದಲ, ನಾಳೆಗೆ ಮುಂದೂಡಿಕೆ