ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ನಂದಿ ಗ್ರಾಮ ವಿವಾದ: ಶಿವರಾಜ್ ಮೇಲೆ ಹೆಚ್ಚಿದ ಒತ್ತಡ
ರಾಜ್ಯ ಸಲಾಪ ಕಲಾಪ ಮುಂದೂಡಿಕೆ
PIB
ನಂದಿಗ್ರಾಮ ವಿವಾದಕ್ಕೆ ಸಂಬಂಧಪಟ್ಟಂತೆ ಕೋಲ್ಕತ್ತಾದಲ್ಲಿ ಉಂಟಾದ ಹಿಂಸಾಚಾರ ಮತ್ತು ಗೋಲಿಬಾರ್‌ ಘಟನೆಗಳ ಕುರಿತು ಸಂಸತ್ತಿಗೆ ಗೃಹಖಾತೆ ಸಚಿವ ಶಿವರಾಜ್ ಪಾಟೀಲ್ ಅವರು ಮಾಹಿತಿ ನೀಡಬೇಕು ಎಂದು ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ಸಂಸದರು ಒತ್ತಾಯಿಸಿದ ಪರಿಣಾಮವಾಗಿ ರಾಜ್ಯಸಭೆಯ ಕಲಾಪ ಸುಗಮವಾಗಿ ಸಾಗದೇ ಮುಂದೂಡಲಾಯಿತು.

ಭೋಜನ ವಿರಾಮದ ನಂತರ ಸೇರಿದ ಸದನದ ಕಲಾಪದಲ್ಲಿ ದಿನೇಶ್ ತ್ರಿವೇದಿ ( ತೃಣಮೂಲ ಕಾಂಗ್ರೆಸ್) ಮತ್ತು ಎಸ್.ಎಸ್ ಅಹ್ಲುವಾಲಿಯ (ಬಿಜೆಪಿ) ಅವರು ಕೋಲ್ಕತ್ತಾದಲ್ಲಿ ಮೇರವಣಿಗೆಯ ಮೇಲೆ ನಡೆದ ಪೊಲೀಸ್ ಗೋಲಿಬಾರ್ ಕುರಿತು ಶಿವರಾಜ್ ಪಾಟೀಲ್ ಅವರು ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಗೃಹ ಸಚಿವರೇ ಖುದ್ದಾಗಿ ಸ್ಪಷ್ಟೀಕರಣ ನೀಡಬೇಕು ಎಂದು ಒತ್ತಾಯಿಸಿದರು.ಆಡಳಿತಾರೂಢ ಕಾಂಗ್ರೆಸ್ ಮತ್ತು ಎಡಪಕ್ಷಗಳ ಸದಸ್ಯರು ಈ ಪ್ರಶ್ನೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ಕಲಾಪ ಸುಗಮವಾಗ ಸಾಗಲಿಲ್ಲ. ಪದೇ ಪದೇ ಉಂಟಾದ ಗದ್ದಲದ ಕಾರಣ ಉಪ ಸಭಾಪತಿ ಕೆ. ರಹಮಾನ್ ಖಾನ್ ಅವರು ಸದನದ ಕಲಾಪವನ್ನು ಒಂದು ದಿನಗಳ ಕಾಲ ಮುಂದೂಡಿ, ನಂದಿಗ್ರಾಮ ವಿಚಾರವನ್ನು ಗುರುವಾರ ಚರ್ಚೆಗೆ ಅಂಗಿಕರಿಸುವುದಾಗಿ ಘೋಷಿಸಿದರು.

ಪಶ್ಚಿಮ ಬಂಗಾಲದಲ್ಲಿ ಬುದ್ಧದೇವ್ ಭಟ್ಟಾಚಾರ್ಜಿ ಸರಕಾರವು ಮುಗ್ಧ ನಾಗರಿಕರನ್ನು ರಕ್ಷಿಸುವಲ್ಲಿ ವಿಫಲವಾಗಿದ್ದು, ತಕ್ಷಣ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು. ಇತ್ತ ಪಶ್ಚಿಮ ಬಂಗಾಲ ಸರಕಾರವು ಪರಿಸ್ಥಿತಿಯ ನಿಯಂತ್ರಣಕ್ಕೆ ಸೈನ್ಯದ ನೇರವು ಕೋರಿದೆ.
ಮತ್ತಷ್ಟು
ಇಂದು ಸಂಸತ್ತಿನಲ್ಲಿ ನಂದಿಗ್ರಾಮ ಚರ್ಚೆ
ನಂದಿಗ್ರಾಮ ಹಿಂಸೆ:ಲೋಕಸಭೆಯಲ್ಲಿ ಗದ್ದಲ
ಉಪಾಹಾರ್ ದುರಂತ: ಅನ್ಸಾಲ್ ಸೋದರರು ತಪ್ಪಿತಸ್ಥರು
ಮುಂಬೈಸ್ಪೋಟ: ದತ್ ಮನವಿ 27ಕ್ಕೆ ವಿಚಾರಣೆ
ವಿಧಾನಸಭೆ ವಿಸರ್ಜನೆಗೆ ಕೇಂದ್ರ ಸಂಪುಟ ಸಮ್ಮತಿ
ಪುರುಷರ ವಿರುದ್ಧ ತಾರತಮ್ಯಕ್ಕೆ ಪ್ರತಿಭಟನೆ