ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಹಜ ಸ್ಥಿತಿಯತ್ತ ಕೋಲ್ಕತ್ತಾ: ಕರ್ಪ್ಯೂ ತೆರವು
ಅಖೀಲ ಭಾರತೀಯ ಅಲ್ಪಸಂಖ್ಯಾತ ಸಂಘಟನೆ ಆಯೋಜಿಸಿದ್ದ ಪ್ರತಿಭಟನೆಯ ಸಮಯದಲ್ಲಿ ಸಂಭವಿಸಿದ ಹಿಂಸಾಚಾರ ಮತ್ತು ಗಲಬೆಯ ನಂತರ ಕೋಲ್ಕತ್ತಾ ನಗರದಲ್ಲಿ ಅಸಹಜ ಶಾಂತ ವಾತಾವರಣ ನಿರ್ಮಾಣವಾಗಿದ್ದು, ಬುಧವಾರ ರಾತ್ರಿಯಿಂದ ನಗರದ ಕೆಲವೆಡೆ ಜಾರಿಯಲ್ಲಿದ್ದ ಕರ್ಪ್ಯೂವನ್ನು ಹಿಂದೆಗೆದುಕೊಳ್ಳಲಾಗಿದೆ. ನಗರದ ಮಲ್ಲಿಕ್ ಬಜಾರ್, ರಿಪ್ಪನ್ ಸ್ಟ್ರೀಟ್, ಪಾರ್ಕ್ ಸರ್ಕಸ್, ಮತ್ತು ಬೆಗ್ ಬಾಗನ್‌ ಪ್ರದೇಶಗಳಲ್ಲಿ ಸಂಭವಿಸಿದ ಕಲ್ಲು ತೂರಾಟ ಮತ್ತು ಗೋಲಿಬಾರ್ ನಂತರ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿತ್ತು.
PTI


ಪರಿಸ್ಥಿತಿ ತಹಂಬದಿಗೆ ಬಂದಿರುವ ಕಾರಣ ಕರ್ಪ್ಯೂವನ್ನು ಹಿಂದೆಗೆದುಕೊಳ್ಳಲಾಗಿದೆ. ಆದರೆ ಪರಿಸ್ಥಿತಿಯ ಮೇಲೆ ನಿಗಾ ಇಟ್ಟಿರು ವ ಮಿಲಿಟರಿ ಪಡೆಗಳು ಅಲ್ಲಲ್ಲಿ ಪಥಸಂಚಲನ ನಡೆಸುತ್ತಿವೆ.

ನಂದಿಗ್ರಾಮದಲ್ಲಿ ನಡೆದ ಹಿಂಸಾಚಾರ ಮತ್ತು ತಸ್ಲೀಮಾ ನಸ್ರೀನ್ ಅವರ ವೀಸಾ ವಿಸ್ತರಣೆಯ ಕ್ರಮಗಳಿಂದ ಸರಕಾರದ ವಿರುದ್ಧ ರೊಚ್ಚಿಗೆದ್ದ ಅಲ್ಪಸಂಖ್ಯಾತ ಸಂಘಟನೆಯ ಕಾರ್ಯಕರ್ತರು ಕೋಲ್ಕತ್ತಾ ನಗರದಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದರು ಈ ಸಮಯದಲ್ಲಿಲ ಹಿಂಸಾಚಾರಕ್ಕೆ ಮುಂದಾಗಿ ರಸ್ತೆ ತಡೆ ಮತ್ತು ಕಲ್ಲು ತೂರಾಟ ನಡೆಸಿದರು. ಪ್ರತಿಭಟನಾಕಾರ ಗಲಭೆಯನ್ನು ನಿಯಂತ್ರಿಸುವುದಕ್ಕೆ ಪೊಲೀಸರು ಗೋಲಿಬಾರ್ ಮತ್ತು ಅಶ್ರುವಾಯು ಸಿಡಿಸಬೇಕಾಯಿತು.

ಪರಿಸ್ಥಿತಿ ಕೈಮಿರದಂತೆ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಬುದ್ಧದೇವ್ ಭಟ್ಟಾಚಾರ್ಜಿ ಅವರು ಉನ್ನತ ಮಟ್ಟದ ಸಭೆ ಕರೆದು ಸರಕಾರದ ಉನ್ನತ ವಲಯಗಳೊಂದಿಗೆ ಚರ್ಚಿಸಿದ್ದಾರೆ. ರಾಜ್ಯದಲ್ಲಿನ ಶಾಂತಿ ಸುವ್ಯವಸ್ಥೆಗೆ ತಸ್ಲೀಮಾ ವಾಸ್ತವ್ಯದಿಂದ ದಕ್ಕೆಯಾಗುತ್ತಿರುವುದರಿಂದ ನಸ್ರೀನ್ ರಾಜ್ಯ ತೊರೆಯುವುದು ಸೂಕ್ತ ಎಂದು ಸಿಪಿಐ(ಎಂ) ಹೇಳಿದೆ.

ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಸಿಪಿಐ(ಎಂ) ನ ರಾಜ್ಯ ಕಾರ್ಯದರ್ಶಿ ಬಿಮಲ್ ಬೋಸ್ ಅವರು ತಸ್ಲೀಮಾ ಅವರ ವೀಸಾ ವಿಸ್ತರಣೆ ಮತ್ತು ಪಶ್ಚಿಮ ಬಂಗಾಲದಲ್ಲಿನ ಅವರ ವಾಸ್ತವ್ಯದ ಕುರಿತು ಕೇಂದ್ರ ತೆಗೆದುಕೊಂಡಿರುವ ನಿರ್ಧಾರವನ್ನು ತಾನು ಪ್ರಶ್ನಿಸುತ್ತಿಲ್ಲ. ಆದರೆ ನಸ್ರೀನ್ ರಾಜ್ಯದಲ್ಲಿ ಇರುವುದರಿಂದ ರಾಜ್ಯದ ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗುತ್ತಿದೆ. ಆದ್ದರಿಂದ ಅವರು ರಾಜ್ಯದಿಂದ ಹೊರಗೆ ಹೋಗಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ತಸ್ಲಿಮಾ, ನಂದಿಗ್ರಾಮ ವಿವಾದಕ್ಕೆ ಕೋಲ್ಕತ್ತಾ ಅಸ್ತವ್ಯಸ್ತ
ನಂದಿ ಗ್ರಾಮ ವಿವಾದ: ಶಿವರಾಜ್ ಮೇಲೆ ಹೆಚ್ಚಿದ ಒತ್ತಡ
ಇಂದು ಸಂಸತ್ತಿನಲ್ಲಿ ನಂದಿಗ್ರಾಮ ಚರ್ಚೆ
ನಂದಿಗ್ರಾಮ ಹಿಂಸೆ:ಲೋಕಸಭೆಯಲ್ಲಿ ಗದ್ದಲ
ಉಪಾಹಾರ್ ದುರಂತ: ಅನ್ಸಾಲ್ ಸೋದರರು ತಪ್ಪಿತಸ್ಥರು
ಮುಂಬೈಸ್ಪೋಟ: ದತ್ ಮನವಿ 27ಕ್ಕೆ ವಿಚಾರಣೆ