ಭಗವಾನ್ ರಾಮನು ತನ್ನ 11 ವರ್ಷಗಳ ಕಾಲದ ಅಜ್ಞಾತವಾಸವನ್ನು ಕಳೆದ ಚಿತ್ರಕೂಟವೆಂದು ಹೇಳಲಾದ ಸ್ಥಳವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, ಮಧ್ಯಪ್ರದೇಶ ಸರ್ಕಾರ "ರಾಮ ವನಾಗಮನ್ ಪಥ್" ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಾತ್ನಾ ಜಿಲ್ಲೆಯ ಚಿತ್ರಕೂಟದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ಈ ಕಾರ್ಯಕ್ರಮವನ್ನು ಔಪಚಾರಿಕವಾಗಿ ಆರಂಭಿಸಿದರು.
ಸರ್ಕಾರವು ಚಿತ್ರಕೂಟ ಮತ್ತಿತರ ಪವಿತ್ರ ಸ್ಥಳಗಳು ಹಾಗೂ ಘಾಟಿಗಳ ಸಮಗ್ರ ಅಭಿವೃದ್ಧಿಗೆ 51 ಕೋಟಿ ರೂ. ಯೋಜನೆಯನ್ನು ರೂಪಿಸಿದೆ. ಯೋಜನೆಗೆ ಚಾಲನೆ ನೀಡಬೇಕಿದ್ದ ಬಿಜೆಪಿಯ ಹಿರಿಯ ನಾಯಕ ಆಡ್ವಾಣಿ ಸಂಸತ್ತಿನಲ್ಲಿ ಬಿಡುವಿಲ್ಲದ ವೇಳಾಪಟ್ಟಿಯಿಂದ ಅಲ್ಲಿಗೆ ಆಗಮಿಸಲು ಸಾಧ್ಯವಾಗಲಿಲ್ಲ.
ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಧಾನಕಾರ್ಯದರ್ಶಿ ಅನಂತ ಕುಮಾರ್ ಆಡ್ವಾಣಿ ಸಂದೇಶವನ್ನು ಓದಿದರು. ರಾಮನು ಅಜ್ಞಾತವಾಸವನ್ನು ಕಳೆದ ಮಂದಾಕಿನಿ ನಂದಿಯ ಘಾಟಿಗಳ ನವೀಕರಣ ಮತ್ತು ಸೌಂದರ್ಯೀಕರಣಕ್ಕೆ ಪ್ರಮುಖ ಕೆಲಸ ಮಾಡುತ್ತಿರುವ ಚಿತ್ರಕೂಟಕಕ್ಕೆ ಬರಲು ಸಾಧ್ಯವಾಗದ ಬಗ್ಗೆ ಆಡ್ವಾಣಿ ಕ್ಷಮೆ ಕೋರಿದರು ಮತ್ತು ಭಗವಾನ್ ರಾಮನ ಭಕ್ತರಿಗೆ ತಮ್ಮ ಗೌರವವನ್ನು ಸಲ್ಲಿಸಿದರು.
ವಿಂಧ್ಯ ಪ್ರದೇಶದ ಅಭಿವೃದ್ಧಿಗೆ ಹಣದ ಕೊರತೆಯಿದೆಯೆಂದು ಹೇಳಿದ ಮುಖ್ಯಮಂತ್ರಿ ಈ ಪ್ರದೇಶದ ಯೋಜಿತ ಬೆಳವಣಿಗೆಗೆ ವಿಂಧ್ಯ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸುವುದಾಗಿ ಪ್ರಕಟಿಸಿದರು. ಈ ವರ್ಷ ಮಳೆಯ ಅಭಾವದಿಂದ ರೇವಾ ವಿಭಾಗವನ್ನು ಕೂಡ ಬರಪೀಡಿತ ಎಂದು ಘೋಷಿಸಲಾಗುವುದೆಂದು ಅವರು ನುಡಿದರು.
|