ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ದೇಶೀಯ ತೈಲ ಬೆಲೆ ಏರಿಕೆಯಿಲ್ಲ:ದೇವೊರಾ
PTI
ಕಳೆದ ಒಂದು ವರ್ಷದಲ್ಲಿ ಜಾಗತಿಕ ಕಚ್ಚಾತೈಲದ ಬೆಲೆ ದುಪ್ಪಟ್ಟು ಏರಿಕೆಯಾಗಿದ್ದರೂ, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಆದೇಶದ ಮೇರೆಗೆ ದೇಶೀಯ ತೈಲ ಬೆಲೆಯನ್ನು ಸರ್ಕಾರ ಏರಿಸಿಲ್ಲ ಎಂದು ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದೇವೊರಾ ಲೋಕಸಭೆಯಲ್ಲಿ ಗುರುವಾರ ತಿಳಿಸಿದರು.

ಕಳೆದ ವರ್ಷ ಪ್ರತಿಬ್ಯಾರೆಲ್‌ಗೆ 40-45 ಡಾಲರ್ ಇದ್ದ ಕಚ್ಚಾ ತೈಲದಲ್ಲಿ ಗಮನಾರ್ಹ ಏರಿಕೆಯಾಗಿ ಪ್ರತಿ ಬ್ಯಾರಲ್‌ಗೆ 100ರೂ ಸಮೀಪಕ್ಕೆ ಮುಟ್ಟಿದೆ. ಆದರೆ ಸರ್ಕಾರ ಒಂದು ರೂಪಾಯಿ ದರವನ್ನು ಕೂಡ ಹೆಚ್ಚಿಸಿಲ್ಲ ಎಂದು ಅವರು ನುಡಿದರು.

ಕಳೆದ ವರ್ಷದ ದರದ ಮಟ್ಟದಲ್ಲೇ ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ ದರಗಳಿವೆ ಎಂದು ಸಚಿವರು ಹೇಳಿದರು.ಹೊಸ ಶೋಧನೆ ಪರವಾನಗಿ ನೀತಿಯ ಅಡಿಯಲ್ಲಿ ಕಂಪೆನಿಗಳಿಗೆ ಒಪ್ಪಿಸಿರುವ ಕೆಲಸವನ್ನು ಮುಗಿಸದ ಕಂಪೆನಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಹೇಳಿದರು.
ಮತ್ತಷ್ಟು
ಲೋಕಸಭೆಯಲ್ಲಿ ಗದ್ದಲ: ಹಠಾತ್ ಮುಂದಕ್ಕೆ
ರಾಮನು ತಂಗಿದ ಚಿತ್ರಕೂಟದ ಅಭಿವೃದ್ಧಿ
ಸಹಜ ಸ್ಥಿತಿಯತ್ತ ಕೋಲ್ಕತ್ತಾ: ಕರ್ಪ್ಯೂ ತೆರವು
ತಸ್ಲಿಮಾ, ನಂದಿಗ್ರಾಮ ವಿವಾದಕ್ಕೆ ಕೋಲ್ಕತ್ತಾ ಅಸ್ತವ್ಯಸ್ತ
ನಂದಿ ಗ್ರಾಮ ವಿವಾದ: ಶಿವರಾಜ್ ಮೇಲೆ ಹೆಚ್ಚಿದ ಒತ್ತಡ
ಇಂದು ಸಂಸತ್ತಿನಲ್ಲಿ ನಂದಿಗ್ರಾಮ ಚರ್ಚೆ