ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರಾಹುಲ್‌ಗೆ ಗ್ರೆನೇಡ್ ಹಾರ ಹಾಕುವ ಯೋಜನೆ
PTI
ಎಐಸಿಸಿ ಪ್ರಧಾನಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ತಮ್ಮ ಬೇಡಿಕೆಗಳಿಗಾಗಿ ಒತ್ತಾಯಿಸಲು ಅಪಹರಿಸುವ ಮುಂಚೆ ಗ್ರೆನೇಡ್‌ಗಳ ಹಾರವನ್ನು ಹಾಕಲು ಜೈಷೆ ಮೊಹಮದ್‌ನ ಮೂವರು ಬಂಧಿತ ಉಗ್ರಗಾಮಿಗಳು ಯೋಜಿಸಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಮೊಹಮದ್ ಅಬೀದ್, ಯೂಸುಫ್ ಮತ್ತು ಮಿರ್ಜಾ ರಷೀದ್ ಅವರನ್ನು ಕೇಂದ್ರ ಭದ್ರತಾ ಸಿಬ್ಬಂದಿ ತನಿಖೆಗೆ ಒಳಪಡಿಸಿದಾಗ ರಾಹುಲ್ ಗಾಂಧಿ ಅಪಹರಣದ ಬಳಿಕ ಭಾರತೀಯ ಜೈಲುಗಳಿಂದ ಮೊಹಮದ್ ಅಫ್ಜಲ್ ಸೇರಿದಂತೆ ಅವರ ಕಡೆಯ ಇನ್ನೂ ಕೆಲವು ಜನರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸುವ ಬೇಡಿಕೆ ಮಂಡಿಸುವುದು ಅವರ ಯೋಜನೆಯಾಗಿತ್ತು ಎಂದು ಮೂಲಗಳು ಹೇಳಿವೆ.

ಜೆಇಎಂ ಆತ್ಮಹತ್ಯೆ ದಾಳಿಗಳು ಅಥವಾ ಸ್ಫೋಟಗಳನ್ನು ನಡೆಸುವ ಬದಲಿಗೆ ದೊಡ್ಡ ಗುರಿಯ ಮೇಲೆ ದಾಳಿ ಮಾಡಲು ಜೈಷ್ ಉಗ್ರಗಾಮಿಗಳು ಯೋಜಿಸಿರುವ ಸಂಗತಿ ಕೂಡ ಬೆಳಕಿಗೆ ಬಂತು. 1999ರಲ್ಲಿ ಭಾರತೀಯ ವಾಯುಪಡೆ ವಿಮಾನ ಅಪಹರಣ, ಸಂಸತ್ ಭವನದ ಮೇಲೆ ದಾಳಿ, ವಾಲ್ ಸ್ಟ್ರೀಟ್ ಜರ್ನಲ್‌ನ ಡೇನಿಯಲ್ ಪರ್ಲ್ ಹತ್ಯೆ ಮತ್ತು ಜಮ್ಮು ಕಾಶ್ಮೀರ ರಾಜ್ಯ ವಿಧಾನಸಭೆ ಮೇಲೆ ದಾಳಿ ಮೂಲಕ ಜೆಇಎಂ ಕುಖ್ಯಾತಿ ಗಳಿಸಿತ್ತು.

ಯೋಜನೆಯ ಪ್ರಕಾರ ಮೂವರು ಸಿಯಾಲ್‌ಕೋಟ್‌ನಲ್ಲಿ ತಂಗಿದ್ದಾಗ ರಾಹುಲ್ ಗಾಂಧಿಯ ವಿಡಿಯೊ ಚಿತ್ರಗಳನ್ನು ತೋರಿಸಲಾಗಿತ್ತು ಮತ್ತು ತರಬೇತಿ ನೀಡಲಾಗಿತ್ತು. ಅಮೇಥಿಯ ಸಂಸದ ರಾಹುಲ್ ಗಾಂಧಿ ಭೇಟಿ ನೀಡುವ ಪ್ರದೇಶಗಳ ಬಗ್ಗೆ ಪರಿಚಯ ಮಾಡಿಕೊಂಡು ಬಳಿಕ ಅವರನ್ನು ಅಪಹರಿಸಿ ಒತ್ತೆಯಾಳಾಗಿ ಇಟ್ಟುಕೊಳ್ಳುವ ಯೋಜನೆಯನ್ನು ಅವರು ರೂಪಿಸಿದ್ದರು.
ಮತ್ತಷ್ಟು
ದೇಶೀಯ ತೈಲ ಬೆಲೆ ಏರಿಕೆಯಿಲ್ಲ:ದೇವೊರಾ
ಲೋಕಸಭೆಯಲ್ಲಿ ಗದ್ದಲ: ಹಠಾತ್ ಮುಂದಕ್ಕೆ
ರಾಮನು ತಂಗಿದ ಚಿತ್ರಕೂಟದ ಅಭಿವೃದ್ಧಿ
ಸಹಜ ಸ್ಥಿತಿಯತ್ತ ಕೋಲ್ಕತ್ತಾ: ಕರ್ಪ್ಯೂ ತೆರವು
ತಸ್ಲಿಮಾ, ನಂದಿಗ್ರಾಮ ವಿವಾದಕ್ಕೆ ಕೋಲ್ಕತ್ತಾ ಅಸ್ತವ್ಯಸ್ತ
ನಂದಿ ಗ್ರಾಮ ವಿವಾದ: ಶಿವರಾಜ್ ಮೇಲೆ ಹೆಚ್ಚಿದ ಒತ್ತಡ