ಹಿಂದೂಗಳ ಮತವಿಭಜನೆ ತಡೆಯುವ ನಿಟ್ಟಿನಲ್ಲಿ, ಗುಜರಾತಿನಲ್ಲಿ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿಗೆ ಬೆಂಬಲ ನೀಡಲು ಮುಂದಾಗಿರುವುದಾಗಿ ವಿಶ್ವ ಹಿಂದೂ ಪರಿಷತ್ ಘೋಷಿಸಿದೆ.
ರಾಮಸೇತು ಮತ್ತು ರಾಮಜನ್ಮಭೂಮಿ ವಿವಾದದಲ್ಲಿ ಪದೇ ಪದೇ ಕಿರುಕುಳ ನೀಡುತ್ತಿರುವ ಜಾತ್ಯತೀತ ಶಕ್ತಿಗಳಿಂದ ಪಾರಾಗಲು ನರೇಂದ್ರ ಮೋದಿಯನ್ನೊಳಗೊಂಡಂತೆ ಎಲ್ಲಾ ಹಿಂದುತ್ವ ಶಕ್ತಿಗಳಿಗೆ ನಾವು ಬೆಂಬಲವನ್ನು ನೀಡಲಿದ್ದೇವೆ ಎಂದು ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಧ್ಯಕ್ಷ ಆಚಾರ್ಯ ಗಿರಿರಾಜ್ ಕಿಶೋರ್ ಗುರುವಾರ ದೆಹಲಿಯಲ್ಲಿ ಹೇಳಿದರು.
ಸಂಘಟನೆಯ ಕಾರ್ಯನಿರ್ವಾಹಕ ಸಮಿತಿಯು ಮುಂದಿನ ತಿಂಗಳು ನಡೆಯಲಿರುವ ಗುಜರಾತ್ ಚುನಾವಣೆಯ ಕುರಿತು ಚರ್ಚೆ ನಡೆಸಿದ ನಂತರ ಅವರು ಈ ಕುರಿತು ಹೇಳಿಕೆ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಚುನಾವಣಾ ಪ್ರಚಾರದಲ್ಲಿ ಭಾಗಿವಾಗುವುದು ನನಗೆ ಇಷ್ಟವಿರಲಿಲ್ಲ ಎಂಬುದಾಗಿ ಈ ಮೊದಲು ಮೋದಿ ಹೇಳಿದ್ದರು.
|